ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್ ಕಾಯಿನ್ ಮೌಲ್ಯ $60,000 ನಂತೆ ಸ್ಥಿರ, ಟ್ರೇಡರ್ಸ್‌ಗೆ ನೆಮ್ಮದಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್, ಇಥೆರಿಯಂ, ಕಾರ್ಡನೋ ಸೇರಿದಂತೆ ಹಲವು ಕರೆನ್ಸಿಗಳ ಟ್ರೇಡರ್ಸ್ ಈ ವಾರ ಭರ್ಜರಿ ಲಾಭದ ನಿರೀಕ್ಷೆಯಲ್ಲಿ ವಹಿವಾಟು ನಡೆಸಿದ್ದಾರೆ. ಯುರೋಪಿನ ಅತಿದೊಡ್ಡ ಸಂಸ್ಥೆ ಕಾಯಿನ್ಸ್‌ಬಿಟ್ ಎಂಟ್ರಿ, ಕಾಯಿನ್‌ಬೇಸ್ ಗ್ಲೋಬಲ್ ಐಎನ್‌ಸಿ ಲಿಸ್ಟಿಂಗ್ ಎಲ್ಲವೂ ಕ್ರಿಪ್ಟೋ ಕರೆನ್ಸಿ ಮೌಲ್ಯ ಏರಿಕೆಗೆ ಕಾರಣವಾಗಿತ್ತು.

ಇತ್ತೀಚೆಗೆ ಉತ್ತಮ ವಹಿವಾಟು ಮೂಲಕ, ಒಟ್ಟಾರೆ, ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ಏರಿಕೆಯಾಗಲು ಕಾರಣವಾಗಿವೆ. ಈ ನಡುವೆ ಬಿಟ್ ಕಾಯಿನ್ ಈ ಹಿಂದಿನ $61,222 ಮೌಲ್ಯ ದಾಖಲೆ ಮುರಿದು ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ 64 ಸಾವಿರ ಡಾಲರ್ ಮೌಲ್ಯಕ್ಕೇರಿತ್ತು. ಇದಾದ ಬಳಿಕ ಹೆಚ್ಚಿನ ಕುಸಿತ ಕಾಣದೆ ಏಪ್ರಿಲ್ 17ರಂದು 60 ಸಾವಿರ ಡಾಲರ್ ನಂತೆ ವಹಿವಾಟು ನಡೆಸಿರುವುದು ಟ್ರೇಡರ್‌ಗಳಿಗೆ ನೆಮ್ಮದಿ ತಂದಿದೆ.

ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ 2,228,928,411,224 ಟ್ರಿಲಿಯನ್ ಡಾಲರ್ ದಾಟಿದೆ. ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಸಾರ್ವಕಾಲಿಕ ಹೆಚ್ಚಿನ ಬೆಲೆ 61,556.59 ಡಾಲರ್ ದಾಖಲೆ ಮುರಿದಿದ್ದು, 70 ಸಾವಿರ ಡಾಲರ್

ಏಪ್ರಿಲ್ 17ರಂದು ಈ ಸಮಯ(19:55)ಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $60,660.35
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,144,220,882,732
ಒಂದು ಬಿಟ್ ಕಾಯಿನ್ ಬೆಲೆ = 44,91,542.18 ರು
(1 USD=75.54 ರುಪಾಯಿ)

ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 1.38ರಷ್ಟು ಇಳಿಕೆ ಕಂಡಿದೆ. ಈ ವಾರ ಶೇ 1.69ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 2.15ರಷ್ಟು ಇಳಿಕೆ ಕಂಡು 2,364.53ಡಾಲರ್ ಮೌಲ್ಯ ಪಡೆದಿದೆ. ಒಟ್ಟಾರೆ $279,116,638,526ಮೌಲ್ಯ ಹೊಂದಿದೆ.

Bitcoin price settle at $60,000 on April 17

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
After surge of record $64,000 for the first time, Bitcoin price today settle at $60,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X