ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್ ಕಾಯಿನ್ ಮೌಲ್ಯ ಮತ್ತೆ 50 ಸಾವಿರ ಡಾಲರ್‌ಗೆ ಏರಿಕೆಯಾಗಿದ್ದೇಕೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಕೆಲ ದಿನಗಳ ಕಾಲ ಕುಸಿತದ ಹಾದಿಯಲ್ಲಿತ್ತು, ಈಗ ಮತ್ತೆ ಮೌಲ್ಯ ಏರಿಕೆ ಕಂಡಿದೆ. ಕಳೆದ ಕೆಲ ದಿನಗಳಲ್ಲಿ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿತ್ತು. ಆದರೆ,

ಸೋಮವಾರದಂದು ಬಿಟ್ ಕಾಯಿನ್ ಬೆಲೆ 58, 354 ಡಾಲರ್‌ಗೆ ಕುಸಿತ ಕಂಡಿತ್ತು. ಟೆಸ್ಲಾ, ಮಾಸ್ಟರ್ ಕಾರ್ಡ್, ಪೇಪಾಲ್, ಬ್ಲಾಕ್ ರಾಕ್ ಗಮನ ಸೆಳೆದಿತ್ತು. ಭಾರಿ ಹೂಡಿಕೆ ನಿರೀಕ್ಷೆ ನಡುವೆ ಕಳೆದ ಎರಡು ದಿನಗಳಲ್ಲಿ ಶೇ 6ರಷ್ಟು ಇಳಿಕೆಯಾಗಿತ್ತು. ಒಂದು ಹಂತದಲ್ಲಿ 45,000 ಡಾಲರ್‌ಗೆ ಕುಸಿದು ಆತಂಕ ಮೂಡಿಸಿತ್ತು.

 ಬಿಟ್ ಕಾಯಿನ್ ಚಲಾವಣೆ ತರುವಷ್ಟು ಸ್ಥಿರತೆ ಹೊಂದಿಲ್ಲ: ಯುಎಸ್ ಅಧಿಕಾರಿ ಬಿಟ್ ಕಾಯಿನ್ ಚಲಾವಣೆ ತರುವಷ್ಟು ಸ್ಥಿರತೆ ಹೊಂದಿಲ್ಲ: ಯುಎಸ್ ಅಧಿಕಾರಿ

ಆದರೆ, ಏಷ್ಯಾದ ಮಾರುಕಟ್ಟೆಯಲ್ಲಿ ಬುಧವಾರ(ಫೆ.24)ದಂದು ಅತಿದೊಡ್ಡ ಕ್ರಿಪ್ಟೋ ಕರೆನ್ಸಿ ಮೌಲ್ಯ ಶೇ 5.4ರಷ್ಟು ಏರಿಕೆ ಕಂಡು 50,557ಕ್ಕೇರಿಕೆಯಾಗಿದೆ.

Bitcoin gets Ark’s Cathie Wood backing, raises to $50,000

ಬಿಟ್ ಕಾಯಿನ್ ಮೌಲ್ಯ ಏರಿಕೆಯಾಗಲು ಫೆಡರಲ್ ರಿಸರ್ವ್ ಜೆರೊಮೆ ಪೊವೆಲ್ ಅವರು ನೀಡಿದ ಪ್ರೋತ್ಸಾಹದಾಯಕ ಹೇಳಿಕೆ ಕಾರಣ ಎನ್ನಲಾಗಿದೆ. ಕೊವಿಡ್ 19 ಕಾಲದಲ್ಲಿ ಕ್ರಿಪ್ಟೋ ಕರೆನ್ಸಿ ನಿರ್ವಹಣೆ ಹಾಗೂ ಆರ್ಥಿಕ ಪ್ರಗತಿಯನ್ನು ಸೆಂಟ್ರಲ್ ಬ್ಯಾಂಕ್ ಗಮನಿಸಿದೆ ಎಂದಿದ್ದರು. ಇದಲ್ಲದೆ ಬಿಟ್ ಕಾಯಿನ್ ಪ್ರಗತಿ ಬಗ್ಗೆ ಕ್ಯಾಥಿವುಡ್ ನ ಆರ್ಕ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ವರ್ಚ್ಯುಯಲ್ ಕರೆನ್ಸಿ ಮೌಲ್ಯ ದಿಢೀರ್ ಎಂದು ಏರಿಕೆಯಾಗಿರುವುದರ ಬಗ್ಗೆ ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ್ದು, ದಿಢೀರ್ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಸುಮಾರು 47, 400 ಯುಎಸ್ ಡಾಲರ್ ನಷ್ಟು ಮೌಲ್ಯವನ್ನು ಕಳೆದುಕೊಂಡ ಬಿಟ್ ಕಾಯಿನ್ ಒಂದು ಹಂತದಲ್ಲಿ ಶೇ 17ರಷ್ಟು ಕುಸಿತ ಕಂಡಿದೆ. ಸುಮಾರು 160 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ. ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
Bitcoin rallied back above $50,000 on Wednesday after supportive comments from Ark Investment Management’s Cathie Wood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X