ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

54 ಲಕ್ಷ ಷೇರುಗಳನ್ನು ವಾಲ್ಮಾರ್ಟಿಗೆ ಮಾರಿದ ಬಿನ್ನಿ ಬನ್ಸಾಲ್

|
Google Oneindia Kannada News

ಬೆಂಗಳೂರು, ಜೂನ್ 24: ಬೆಂಗಳೂರು ಮೂಲದ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಶೇ 77ರಷ್ಟು ಪಾಲನ್ನು ಸರಿ ಸುಮಾರು 16 ಬಿಲಿಯನ್ ಯುಎಸ್ ಡಾಲರ್ ನೀಡಿ, ಅಮೆರಿಕದ ವಾಲ್ ಮಾರ್ಟ್ ಸಂಸ್ಥೆ ಖರೀದಿಸಿ ವರ್ಷಗಳು ಕಳೆದರೂ ಸಂಪೂರ್ಣ ನಿಯಂತ್ರಣ ಹೊಂದುವ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ.

ವಾಲ್ಮಾರ್ಟ್ ಪಾಲಾದ ಬಳಿಕ ಫ್ಲಿಪ್ ಕಾರ್ಟಿನ ಸಹ ಸ್ಥಾಪಕ, ಹಾಲಿ ಸಿಇಒ ಸಚಿನ್ ಬನ್ಸಾಲ್ ಅವರು 9 ವರ್ಷಗಳ ಬಳಿಕ ಸಿಇಒ ಹುದ್ದೆ ತೊರೆಯಲಿದ್ದಾರೆ. ಜೊತೆಗೆ ತಮ್ಮ ಬಳಿಯಿದ್ದ 5.5 % ಷೇರುಗಳನ್ನು ವಾಲ್ ಮಾರ್ಟ್ ಗೆ ಮಾರಿದ್ದರು.

ಬಿನ್ನಿ ಹಠಾತ್ ನಿರ್ಗಮನ: ಫ್ಲಿಪ್ ಕಾರ್ಟ್ ಉದ್ಯೋಗಿಗಳಲ್ಲಿ ಅಚ್ಚರಿ, ಆಘಾತ ಬಿನ್ನಿ ಹಠಾತ್ ನಿರ್ಗಮನ: ಫ್ಲಿಪ್ ಕಾರ್ಟ್ ಉದ್ಯೋಗಿಗಳಲ್ಲಿ ಅಚ್ಚರಿ, ಆಘಾತ

ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಮೂಹ ಸಂಸ್ಥೆ ಸಿಇಒ ಆಗಿ ಮುಂದುವರೆದಿದ್ದರು. ಈಗ ತಮ್ಮ ಬಳಿ ಇದ್ದ 54 ಲಕ್ಷ ಈಕ್ವಿಟಿ ಷೇರುಗಳನ್ನು ರೀಟೈಲ್ ಮಾರುಕಟ್ಟೆ ದಿಗ್ಗಜ ವಾಲ್ಮಾರ್ಟಿಗೆ ಮಾರಿದ್ದಾರೆ. ಇದರ ಮೊತ್ತ ಸುಮಾರು 76 ಮಿಲಿಯನ್ ಡಾಲರ್ (531 ಕೋಟಿ ರು) ಎನ್ನಲಾಗಿದೆ.

Binny Bansal sells Rs 531 cr shares to Walmart

ವಾಲ್ ಮರ್ಟ್ ಅಧೀನದಲ್ಲಿರುವ ಲಕ್ಸಂಬರ್ಗ್ ನ ಎಫ್ ಐಟಿ ಹೋಲ್ಡಿಂಗ್ಸ್ ಎಸ್ಎ ಆರ್ ಎಲ್ ಪೇಪರ್ . ವಿಸಿಗೆ ಈ ಮೊತ್ತ ಸೇರಲಿದೆ. ಬಿನ್ನಿ ಬನ್ಸಾಲ್ ಅವರ ಷೇರುಗಳ ಮಾರಾಟದ ಬಳಿಕ ಈಗ ವಾಲ್ಮಾರ್ಟ್ ಬಳಿ ಇರುವ ಫ್ಲಿಪ್ ಕಾರ್ಟಿನ ಷೇರಿನ ಸಂಖ್ಯೆ 5,39,912ಕ್ಕೇರಿದೆ.

ಬಿನ್ನಿ ಬನ್ಸಲ್ ವಿರುದ್ಧ ವೈಯಕ್ತಿಕ ದುರ್ನಡತೆ ಆರೋಪದ ಮೇಲೆ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ನಿಂದ ಸ್ವತಂತ್ರ ತನಿಖೆಯೊಂದು ನಡೆದಿತ್ತು. ಆ ನಂತರ ತಮ್ಮ ಹುದ್ದೆ ತ್ಯಜಿಸುವ ನಿರ್ಧಾರಕ್ಕೆ ಅವರು ಬಂದಿದ್ದರು. ನಂತರ ಫ್ಲಿಪ್ ಕಾರ್ಟ್ ಸಿಇಒ ಆಗಿರುವ ಕಲ್ಯಾಣ್, ಅವರಿಗೆ ಮೈಂತ್ರಾ ಮತ್ತು ಜಬೊಂಗ್ ಮುಖ್ಯಸ್ಥರಾಗಿರುವ ಅನಂತ್ ನಾರಾಯಣನ್ ವರದಿ ಮಾಡಿಕೊಳ್ಳಲಿದ್ದಾರೆ.

ವಾಲ್‍ಮಾರ್ಟ್‍ನ ಇತರೆ ಮಾರುಕಟ್ಟೆಗಳಿಗೂ ಬೃಹತ್ ಪ್ರಮಾಣದ ಉತ್ಪನ್ನಗಳನ್ನು ಖರೀದಿಸುವಂಥ ದೇಶಗಳಲ್ಲಿ ಭಾರತವೂ ಪ್ರಮುಖವಾದದ್ದು. ಈ ಉತ್ಪನ್ನಗಳಲ್ಲಿ ಕರಕುಶಲ, ಜವಳಿ, ಉಡುಪುಗಳು, ಫಾರ್ಮಾಸ್ಯುಟಿಕಲ್ಸ್ ಇತ್ಯಾದಿಗಳು ಸೇರಿದ್ದು, ಈ ಮೂಲಕ ಸ್ಥಳೀಯ ಉತ್ಪಾದನೆ ಮತ್ತು ರಫ್ತಿಗೆ ವಾಲ್ ಮಾರ್ಟ್ ಉತ್ತೇಜನ ನೀಡುತ್ತಿದೆ.

English summary
Binny Bansal co founder of India's leading e retailer Flipkart has sold around 54 lakh of his equity shares valued around 76 million USD (Rs 531 Cr) to world's leading reatail gaint Walmart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X