• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲಿನಲ್ಲಿ ಬೈಕ್‌ ಸಾಗಾಟ; ರೈಲ್ವೆಗೆ 1 ಕೋಟಿ ರೂ. ಆದಾಯ

|

ಮೈಸೂರು, ನವೆಂಬರ್ 09 : ನೈಋತ್ಯ ರೈಲ್ವೆ ಮೈಸೂರು ವಿಭಾಗ ಒಂದು ತಿಂಗಳಿನಲ್ಲಿ 5,500 ಬೈಕ್‌ಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಣೆ ಮಾಡಿದೆ. ಇದರಿಂದಾಗಿ ಸುಮಾರು 1 ಕೋಟಿ ರೂ. ಆದಾಯವನ್ನು ಪಡೆದಿದೆ.

ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಭಾರತೀಯ ರೈಲ್ವೆ ರೈಲುಗಳಲ್ಲಿ ವಾಹನ ಸಾಗಣೆಗೆ ಆದ್ಯತೆ ನೀಡಿದೆ. ರೈಲುಗಳನ್ನು ಕಾರು, ಬೈಕ್, ಟ್ರಾಕ್ಟರ್‌ಗಳ ಸಾಗಣೆಗೆ ಹೆಚ್ಚು ಒತ್ತನ್ನು ನೀಡಿದೆ.

ಬೆಂಗಳೂರು ಸಬ್ ಅರ್ಬನ್ ರೈಲು; ವೆಚ್ಚ ಹಂಚಿಕೆ ಲೆಕ್ಕ

ನೈಋತ್ಯ ರೈಲ್ವೆ ಮೈಸೂರು ವಿಭಾಗ ರೈಲು ನಿಲ್ದಾಣದಲ್ಲಿ ವ್ಯಾಪಾರ ಅಭಿವೃದ್ಧಿ ಘಟಕ (ಬಿಡಿಯು) ಸ್ಥಾಪನೆ ಮಾಡಿದೆ. ಸರಕುಗಳ ಸಾಗಣೆಯಲ್ಲಿ ಜನರಿಗೆ ಸಹಾಯಕವಾಗಲಿ ಎಂದು ಘಟಕ ಕಾರ್ಯ ನಿರ್ವಹಣೆ ಮಾಡುತ್ತಿದೆ.

30 ಸಾವಿರ ಮೌಲ್ಯದ ಬೈಕ್ ಮಾಲೀಕನಿಗೆ 42,000 ರೂ. ದಂಡ!

ಐದು ರೈಲುಗಳಲ್ಲಿ ಮೈಸೂರು ವಿಭಾಗ 5,500 ಬೈಕ್‌ಗಳನ್ನು ಚಂಗ್ಸಾರಿ, ಸಂಕ್ರೈಲ್ ಗೂಡ್ಸ್ ಟರ್ಮಿನಲ್, ನೌತರ್ವಾ, ಸಾರೈ ನಿಲ್ದಾಣಗಳಿಗೆ ಸಾಗಣೆ ಮಾಡಿದೆ. ಇದರಿಂದಾಗು ಸುಮಾರು 1 ಕೋಟಿ ರೂ. ಆದಾಯಗಳಿಸಿದೆ.

ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಮೆಟ್ರೋ ರೈಲು ಸಂಚಾರ ಆರಂಭ

ರೈಲುಗಳಲ್ಲಿ ವಾಹನಗಳ ಸಾಗಾಟ ಮಾಡಲು ಅನುಕೂಲವಾಗುವಂತೆ ಬೋಗಿಗಳನ್ನು ಎನ್‌ಎಂಜಿ ರೇಕ್ ಆಗಿ ಪರಿವರ್ತನೆ ಮಾಡಲಾಗಿದೆ. 25 ಬೋಗಿ ಒಳಗೊಂಡಿರುವ ಐದು ರೈಲುಗಳಲ್ಲಿ ಬೈಕ್ ಸಾಗಣೆ ಮಾಡಲಾಗುತ್ತದೆ.

ರೈಲುಗಳಲ್ಲಿ ಶುಂಠಿ, ಅಡಿಕೆ, ಮೆಣಸು ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸಹ ಸಾಗಣೆ ಮಾಡಲಾಗುತ್ತಿದೆ. ರೈಲು ಬೈಕ್ ಜೊತೆಗೆ, ಕಾರು, ಟ್ರಾಕ್ಟರ್‌ಗಳನ್ನು ಸಹ ರೈಲ್ವೆ ಇಲಾಖೆ ವಿವಿಧ ಪ್ರದೇಶಗಳಿಗೆ ಸಾಗಣೆ ಮಾಡುತ್ತಿದೆ.

English summary
South western railway Mysuru division gained 1 crore income by transport 5,500 bike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X