ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಬಾಸ್ಕೆಟ್ ನಿಂದ ಇನ್ಮುಂದೆ ಹಾಲು ಬುಕ್ ಮಾಡ್ಬಹುದು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ಇನ್ಮುಂದೆ ಬಿಗ್ ಬಾಸ್ಕೆಟ್ ನಲ್ಲಿ ತರಕಾರಿ, ದಿನಸಿ ಪದಾರ್ಥಗಳಷ್ಟೇ ಅಲ್ಲದೆ, ಹಾಲನ್ನು ಕೂಡಾ ಆನ್ ಲೈನ್ ನಲ್ಲಿ ಬುಕ್ ಮಾಡಿ, ನಿಮ್ಮ ಮನೆಗೆ ತರಿಸಿಕೊಳ್ಳಬಹುದು.

ಕ್ವಿಕ್24, ರೈನ್ ಕ್ಯಾನ್, ಮಾರ್ನಿಂಗ್ ಕಾರ್ಟ್ ಎಂಬ ಸ್ವಾರ್ಟ್ ಅಪ್ ಮೂಲಕ ಗ್ರಾಹಕರಿಗೆ ಬೇಕೆಂದಾಗ ಹಾಲು ಒದಗಿಸಲಾಗುತ್ತದೆ. ಜೊತೆಗೆ ಸ್ಮಾರ್ಟ್ ವೆಂಡಿಂಗ್ ಮೆಷಿನ್ ಗಳನ್ನು ಸಹ ಅಳವಡಿಸಲಿದೆ.

ಬಿಗ್ ಬಾಸ್ಕೆಟ್ ನಿಂದ ಇನ್ಮುಂದೆ ತಾಜಾ ಮಾಂಸ ಮಾರಾಟ! ಬಿಗ್ ಬಾಸ್ಕೆಟ್ ನಿಂದ ಇನ್ಮುಂದೆ ತಾಜಾ ಮಾಂಸ ಮಾರಾಟ!

ಸದ್ಯ ಭಾರತದಲ್ಲಿ ಇ ಕಾಮರ್ಸ್ ಕ್ಷೇತ್ರಾಲ್ಲಿ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಸಂಸ್ಥೆಗಳು, ದಿನಸಿ ಸಾಮಾನುಗಳ ಪೂರೈಕೆಗೆ ತೊಡಗಿಕೊಂಡಿದೆ.

BigBasket To Start Selling Milk Online

ಪ್ರಾರಂಭಿಕ ಹಂತದಲ್ಲಿ ಬೆಂಗಳೂರು ಮತ್ತು ಪುಣೆಗಳಲ್ಲಿ ಹಾಲು ಪೂರೈಕೆ ಅನುಷ್ಠಾನಕ್ಕೆ ತಂದು ಬಳಿಕ ಹಂತ ಹಂತವಾಗಿ ಇತರೆ ನಗರಗಳಿಗೂ ವಿಸ್ತರಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ 100 ಸ್ಮಾರ್ಟ್ ವೆಂಡಿಂಗ್ ಮೆಷಿನ್ ಗಳನ್ನು ಅಳವಡಿಸಲಾಗಿದೆ.

ಬೆಂಗಳೂರು ಮತ್ತು ಪುಣೆಗಳಲ್ಲಿ 20 ಸಾವಿರಕ್ಕೂ ಅಧಿಕ ಗ್ರಾಹಕರು ಚಂದಾದಾರರಾಗಿದ್ದು, ಹಿಂದಿನ ರಾತ್ರಿ ಹಾಲಿಗೆ ಆನ್ ಲೈನ್ ನಲ್ಲಿ ಆರ್ಡರ್ ಸಲ್ಲಿಸಿದರೆ, ಬೆಳಗ್ಗೆ ನೀವು ಹಾಲನ್ನು ಪಡೆಯಬಹುದು.

ಬಿರ್ಲಾ ಒಡೆತನದ MORE ಖರೀದಿಗೆ ಮುಂದಾದ ಅಮೆಜಾನ್ ಬಿರ್ಲಾ ಒಡೆತನದ MORE ಖರೀದಿಗೆ ಮುಂದಾದ ಅಮೆಜಾನ್

ಬಿಗ್ ಬಾಸ್ಕೆಟ್ ಈ ಹಿಂದೆ 2015ರಲ್ಲಿ ಆನ್ ಲೈನ್ ಮೂಲಕ ನಂದಿನಿ ಉತ್ಪನ್ನಗಳನ್ನು ಪಡೆಯಲು ಆರ್ಡರ್ ಮಾಡಿ, ಪಡೆಯುವ ಸೌಲಭ್ಯವನ್ನು ಒದಗಿಸುವುದಾಗಿ ಘೋಷಿಸಿತ್ತು. ಸಮಯಕ್ಕೆ ತಕ್ಕಂತೆ ಅದನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದಿದ್ದು, ಆದರೆ, ಸರಿಯಾಗಿ ಯಶಸ್ವಿಯಾಗಿರಲಿಲ್ಲ. ಈಗ ಡೈಲಿ ನಿಂಜ, ಸ್ವಿಗಿ ಕೂಡಾ ಹಾಲು ಪೂರೈಕೆಗೆ ಉತ್ಸಾಹ ತೋರಿವೆ.

English summary
India’s largest online food and grocery store, BigBasket aiming business expansion has decided to include online selling of milk, in addition to its wide range of offerings, media reported on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X