ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ ಕಮಿಂಗ್ ಗಾಗಿ ಮಾತ್ರ ಸಿಮ್ ಬಳಸುವ ಗ್ರಾಹಕರಿಗೆ ಕಾದಿದೆ ಶಾಕ್!

|
Google Oneindia Kannada News

ಬೆಂಗಳೂರು, ನವೆಂಬರ್ 23 : ಮೊಬೈಲ್ ಬಳಸುವ ಬಹುಸಂಖ್ಯಾತರು ಡ್ಯುಯೆಲ್ ಸಿಮ್ ಬಳಸುತ್ತಾರೆ. ಒಂದನ್ನು ಕರೆ ಮಾಡಲು ಬಳಸಿದರೆ, ಮತ್ತೊಂದನ್ನು ಕಡಿಮೆ ದರದ ರಿಚಾರ್ಜ್ ಮಾಡಿಸಿ ಇನ್ ಕಮಿಂಗ್ ಕರೆಗಳಿಗೆ ಮಾತ್ರ ಸೀಮಿತಗೊಳಿಸಿರುತ್ತಾರೆ. ಮೊಬೈಲ್ ಬಳಕೆದಾರರು ಜಾಣರು.

ಆದರೆ, ಅಂಥ ಜಾಣರಿಗೆ, ತಿಂಗಳಿಗೆ 35 ರುಪಾಯಿಗಳಿಗಿಂತ ಕಡಿಮೆ ವ್ಯಯಿಸುವ ಕಂಜೂಸ್ ಮೊಬೈಲ್ ಬಳಕೆದಾರರಿಗೆ ಭರ್ಜರಿ ಶಾಕ್ ಕಾದಿದೆ. ಜಿಯೋ ಆರಂಭಿಸಿರುವ ಮೊಬೈಲ್ ಯುದ್ಧಕ್ಕೆ ಪ್ರತಿಯಾಗಿ ನಾನಾ ಕೊಡುಗೆಗಳನ್ನು ನೀಡುತ್ತ ಮಾರುಕಟ್ಟೆಯಲ್ಲಿ ಇರಲು ಹೋರಾಟ ನಡೆಸಿರುವ ಏರ್ಟೆಲ್ ಮತ್ತು ವೊಡಾಫೋನ್ ಇದೀಗ ಹೊಸಬಗೆಯ ಟಾಂಗ್ ನೀಡಲು ಸಿದ್ಧವಾಗಿವೆ.

ಜಿಯೋ ವಿರುದ್ಧ 419 ರುಗಳ ಏರ್ ಟೆಲ್ ಯೋಜನೆ ಪ್ರಕಟ ಜಿಯೋ ವಿರುದ್ಧ 419 ರುಗಳ ಏರ್ ಟೆಲ್ ಯೋಜನೆ ಪ್ರಕಟ

ಅದೇನೆಂದರೆ, ತಿಂಗಳಿಗೆ 35 ರುಪಾಯಿಗಳಿಗಿಂತ ಕಡಿಮೆ ಖರ್ಚು ಮಾಡಿ, ಒಳಕರೆಗಳಿಗೆ ಮಾತ್ರ ತಮ್ಮ ನೆಟ್ವರ್ಕ್ ಗಳನ್ನು ಬಳಸುತ್ತಿರುವ 250 ಮಿಲಿಯನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ ಕಾದಿದೆ. 2ಜಿಯನ್ನೇ ನೆಚ್ಚಿಕೊಂಡಿರುವ ಈ ಬಳಕೆದಾರರ ಸಂಪರ್ಕಗಳು ಸದ್ಯದಲ್ಲಿಯೇ ಕಟ್ ಆಗಲಿವೆ. ಭಾರ್ತಿ ಏರ್ಟೆಲ್ ಇಂಥ 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದರೆ, ವೊಡಾಫೋನ್ ಐಡಿಯಾ ಸಂಪರ್ಕವನ್ನು 150 ಮಿಲಿಯನ್ ಬಳಕೆದಾರರು ಬಳಸುತ್ತಿದ್ದಾರೆ.

Big shock for customers who use mobile sim only for incoming calls

ಆ 250 ಮಿಲಿಯನ್ ಬಳಕೆದಾರರು ಈಗ ಹೆಚ್ಚು ಖರ್ಚು ಮಾಡಬೇಕು ಅಥವಾ ಮತ್ತೊಂದು ಕಂಪನಿಗೆ ಜಂಪ್ ಆಗಬೇಕು. ಭಾರ್ತಿ ಏರ್ಟೆಲ್ 35 ರುಪಾಯಿ ಒಳಗಿನ ಏಳು ಪ್ಲಾನ್ ಗಳನ್ನು ಬಳಕೆದಾರರಿಗೆ ನೀಡಿದ್ದರೆ, ವೊಡಾಫೋನ್ ಐಡಿಯಾ ಬಳಿ ಇಂಥ ಐದು ಪ್ಲಾನ್ ಗಳಿವೆ. ಈ ಪ್ಲಾನ್ ಗಳಿಂದಾಗಿ ಈ ಎರಡೂ ಕಂಪನಿಗಳು ಭಾರೀ ನಷ್ಟ ಅನುಭವಿಸುತ್ತಿವೆ. ಇನ್ ಕಮಿಂಗ್ ಕರೆಗಳಿಗೆ ಚಾರ್ಜ್ ಮಾಡಲಾಗುವುದು ಎಂಬ ಸುದ್ದಿ ಹೊರಬಿದ್ದ ಹಿಂದೆಯೆ ಈ ಹೊಸ ಸುದ್ದಿ ಬಡ ಮೊಬೈಲ್ ಬಳಕೆದಾರರಿಗೆ ಆಘಾತಕಾರಿಯಾಗಿದೆ.

ಹೊಸ ಗ್ರಾಹಕರನ್ನು ಸೆಳೆಯಲು ಏರ್ ಟೆಲ್ ನಿಂದ 5 ಯೋಜನೆ ಹೊಸ ಗ್ರಾಹಕರನ್ನು ಸೆಳೆಯಲು ಏರ್ ಟೆಲ್ ನಿಂದ 5 ಯೋಜನೆ

ಈ ಕಡಿಮೆ ದರದ ರಿಚಾರ್ಜ್ ಗಳಿಂದಾಗಿ ಪ್ರತಿ ಗ್ರಾಹಕನಿಂದ ಏರ್ಟೆಲ್ 101 ರುಪಾಯಿ ಗಳಿಸುತ್ತಿದ್ದರೆ, ವೊಡಾಫೋನ್ ಕೇವಲ 88 ರುಪಾಯಿ ಪಡೆಯುತ್ತಿದೆ. ಆದರೆ, ಕನಿಷ್ಠ ಪ್ಲಾನ್ ಗೆ 49 ರುಪಾಯಿ ಚಾರ್ಜ್ ಮಾಡುತ್ತಿರುವ ಜಿಯೋ ಪ್ರತಿ ಗ್ರಾಹಕನಿಂದ 133 ರುಪಾಯಿನಷ್ಟು ಗಳಿಸುತ್ತಿದೆ. ಈಗ ಶೇ.50ರಷ್ಟು ಕಡಿಮೆ ರಿಚಾರ್ಜ್ ಮಾಡಿಸುವ ಗ್ರಾಹಕರನ್ನು ಕಳೆದುಕೊಂಡರೂ ಅಷ್ಟೇನೂ ನಷ್ಟವಾಗುವುದಿಲ್ಲ ಎಂಬುದು ಏರ್ಟೆಲ್ ನ ಲೆಕ್ಕಾಚಾರ.

ಈ ಹೊಸ ಪ್ಲಾನ್ ಕೂಡಲೆ ಜಾರಿಗೆ ಬರದಿದ್ದರೂ, 2ಜಿ ಗ್ರಾಹಕರನ್ನು 4ಜಿಗೆ ವರ್ಗಾಯಿಸುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಭಾರ್ತಿ ಏರ್ಟೆಲ್ ಹೇಳಿದೆ. ಕೋಟ್ಯಂತರ ಜನ ಈಗಾಗಲೆ ಕಡಿಮೆ ರಿಚಾರ್ಜ್ ಸೇವೆಯನ್ನು ಪಡೆಯುತ್ತಿರುವುದರಿಂದ, ಅವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶವೂ ಇಲ್ಲಿದೆ.

English summary
Big shock for customers who use mobile sim only for incoming calls, as Airtel and Vodafone are planning switch off 250 million users, who spend less than Rs 35 per month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X