ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರದರ್ಶನ ಉಚಿತ ಡಿಶ್ ಸೇವೆಯಲ್ಲಿ ಚಾನೆಲ್ ಗಳ ಸಂಖ್ಯೆ ಕಡಿತ

|
Google Oneindia Kannada News

ನವದೆಹಲಿ, ಫೆಬ್ರವರಿ 13: ದೂರದರ್ಶನದ ಉಚಿತ ಡಿಶ್ ಸೇವೆ, ಡಿ.ಡಿ. ಫ್ರೀ ಡಿಶ್ ನಲ್ಲಿ ಸಿಗುತ್ತಿದ್ದ ಜೀ, ಸೋನಿ, ವೈಕಾಮ್ 18 ಚಾನೆಲ್ ಗಳು ಬಂದ್ ಆಗಲಿವೆ. ಟ್ರಾಯ್ ಹೊಸ ನೀತಿ ಬಂದ ಮೇಲೆ ಕೇಬಲ್ ಆಪರೇಟರ್ಸ್ ಹಾಗೂ ಡಿಟಿಎಚ್ ಆಪರೇಟರ್ಸ್ ಗಳು ತಮ್ಮ ಗ್ರಾಹಕರನ್ನು ಕಾಯ್ದುಕೊಳ್ಳಲು ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಿವೆ. ಈ ನಡುವೆ ಉಚಿತ ಸೇವೆ ನೀಡುತ್ತಿದ್ದ ಡಿಡಿ ಉಚಿತ ಡಿಶ್ ಸೇವೆಯಲ್ಲಿ ಚಾನೆಲ್ ಗಳ ಸಂಖ್ಯೆ ಕಡಿತಗೊಳ್ಳಲಿದೆ.

ದೂರದರ್ಶನದ ಉಚಿತ ಡಿಸ್ ಸೇವೆಯಲ್ಲಿ ಡಿ.ಡಿ. ಫ್ರೀ ಡಿಶ್ ನಲ್ಲಿ ಸ್ಟಾರ್ ಇಂಡಿಯಾ, ಜಿ ಎಂಟರ್ಟೈನ್ಮೆಂಟ್, ಸೋನಿ ಪಿಕ್ಚರ್ಸ್ ನೆಟ್ವರ್ಕ್ ಮತ್ತು ವೈಕಾಮ್ 18ನ ಕೆಲ ಚಾನೆಲ್ ಗಳು ಲಭ್ಯವಿತ್ತು. . ಇದು 2.2. ಕೋಟಿ ಗ್ರಾಹಕರನ್ನು ತಲುಪುತ್ತಿತ್ತು. ಈಗ ಟ್ರಾಯ್ ನಿಯಮ ಬದಲಾದ ಬಳಿಕ, ಡಿ.ಡಿ. ಫ್ರೀ ಡಿಶ್ ನಲ್ಲಿ ಜಿ ಅನ್ಮೋಲ್, ಸ್ಟಾರ್ ಉತ್ಸವ್, ಸ್ಟಾರ್ ಭಾರತ್, ಸೋನಿ ಪಲ್ ಚಾನೆಲ್ ಗಳು ಪ್ರಸಾರವಾಗುವುದಿಲ್ಲ.

ಟ್ರಾಯ್ ದರ ನೀತಿಗೆ ವಿರೋಧ: ನಾಳೆ ರಾಜ್ಯದಾದ್ಯಂತ ಕೇಬಲ್ ಟಿವಿ ಬಂದ್‌ಟ್ರಾಯ್ ದರ ನೀತಿಗೆ ವಿರೋಧ: ನಾಳೆ ರಾಜ್ಯದಾದ್ಯಂತ ಕೇಬಲ್ ಟಿವಿ ಬಂದ್‌

ಡಿಡಿ ಡಿಸ್ ನಲ್ಲಿ ಯಾವುದೇ ಮನರಂಜನೆಯ ಮತ್ತು ಸಿನಿಮಾ ಚಾನೆಲ್ ಗಳನ್ನು ಉಚಿತವಾಗಿ ನೀಡುವುದಿಲ್ಲ ಎಂದು ಪ್ರಮುಖ ಪ್ರಸಾರಕರು ಘೋಷಿಸಿವೆ. ಕೇಬಲ್ ಹಾಗೂ ಡಿಟಿಹೆಚ್ ಗ್ರಾಹಕರು ಡಿ.ಡಿ. ಫ್ರೀ ಡಿಶ್ ಬಳಕೆ ಹೆಚ್ಚು ಬಳಸುವಂತಾಗಲಿ, ಪೇ ಚಾನೆಲ್ ಗಳ ಪಟ್ಟಿ ಹೆಚ್ಚಾಗಲಿ ಎಂದು ಪ್ರಸಾರಕರು ಬಯಸಿದ್ದಂತಿದೆ.

ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್

ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್

ಟ್ರಾಯ್ ನಿಯಮ, ಚಾನೆಲ್ ಆಯ್ಕೆ ಹಾಗೂ ಕೇಬಲ್ ಆಪರೇಟರ್, ಡಿಟಿಎಚ್ ಕಂಪನಿಗಳ ಅಫರ್ ಬಗ್ಗೆ ಚಾನೆಲ್ ನಂಬರ್ 999ರಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಗ್ರಾಹಕರಿಗೆ ಎಸ್ಎಂಎಸ್ ಮೂಲಕ, ಪ್ರಾತ್ಯಕ್ಷಿಕೆ ವಿಡಿಯೋ, ಪಾಂಪ್ಲೆಟ್ ಮೂಲಕ ಕೂಡಾ ಮಾಹಿತಿ ನೀಡಲಾಗುತ್ತಿದೆ. ಈಗ ಹೊಸ ನಿಯಮದ ಪ್ರಕಾರ ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು.

ಜ.24ಕ್ಕೆ ಕೇಬಲ್ ಆಪರೇಟರ್‌ಗಳ ಪ್ರತಿಭಟನೆ: ಬೆಂಗಳೂರಿಗೂ ಅನ್ವಯಿಸುತ್ತಾ? ಜ.24ಕ್ಕೆ ಕೇಬಲ್ ಆಪರೇಟರ್‌ಗಳ ಪ್ರತಿಭಟನೆ: ಬೆಂಗಳೂರಿಗೂ ಅನ್ವಯಿಸುತ್ತಾ?

ಪ್ರೀಪೇಯ್ಡ್ ಗ್ರಾಹಕರಿಗೆ ಗೊಂದಲ

ಪ್ರೀಪೇಯ್ಡ್ ಗ್ರಾಹಕರಿಗೆ ಗೊಂದಲ

ಪ್ರಿಪೇಯ್ಡ್ ಗ್ರಾಹಕರು ಹಾಗೂ ದೀರ್ಘಾವಧಿ (3, 6 ಹಾಗೂ 12 ತಿಂಗಳು) ಪ್ಯಾಕೇಜ್ ಹೊಂದಿರುವವರು ಏನು ಮಾಡಬೇಕು ಎಂಬ ಗೊಂದಲ ಮುಂದುವರೆದಿದೆ. ಡಿಟಿಎಚ್ ಆಪರೇಟರ್ ಗಳ ಜತೆ ಟ್ರಾಯ್ ಮಾತುಕತೆ ಮುಂದುವರೆದಿದ್ದು, ಈ ಬಗ್ಗೆ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ. ಯಾವುದಕ್ಕೂ ಟ್ರಾಯ್ ವೆಬ್ ಸೈಟ್ ನೋಡಿ ಅಥವಾ ನಿಮ್ಮ ಕೇಬಲ್ ಅಥವಾ ಡಿಟಿಎಚ್ ಆಪರೇಟರ್ ಸಂಪರ್ಕಿಸಿ ನಿಮ್ಮ ನೆಚ್ಚಿನ ಪ್ಯಾಕೇಜ್ ಹಾಕಿಸಿಕೊಳ್ಳಿ. ಹಳೆ ಪ್ಯಾಕೇಜ್ ಬದಲಾಯಿಸಿಕೊಳ್ಳಲು ಅವಕಾಶವನ್ನು ಕೆಲವು ಸಂಸ್ಥೆಗಳು ನೀಡಿವೆ.

ಹೊಸ ಕೇಬಲ್ ನಿಯಮಗಳಿಗೆ ವಿರೋಧ, ಜನವರಿ 24ರಂದು ಕೇಬಲ್ ಬಂದ್‌ ಹೊಸ ಕೇಬಲ್ ನಿಯಮಗಳಿಗೆ ವಿರೋಧ, ಜನವರಿ 24ರಂದು ಕೇಬಲ್ ಬಂದ್‌

ನೂರಾರು ಚಾನೆಲ್ ಉಚಿತವಿದೆ

ನೂರಾರು ಚಾನೆಲ್ ಉಚಿತವಿದೆ

ನೂರಾರು ಚಾನೆಲ್ ಉಚಿತವಿದೆ: ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ.

ಡಿ.ಡಿ.ಫ್ರೀ ಡಿಶ್ ನಲ್ಲಿ 80 ಚಾನೆಲ್ ಗಳಿವೆ

ಡಿ.ಡಿ.ಫ್ರೀ ಡಿಶ್ ನಲ್ಲಿ 80 ಚಾನೆಲ್ ಗಳಿವೆ

ಡಿ.ಡಿ.ಫ್ರೀ ಡಿಶ್ ನಲ್ಲಿ 80 ಚಾನೆಲ್ ಗಳಿವೆ. ಈ ಪೈಕಿ 23 ಡಿಡಿ ಚಾನೆಲ್ ಗಳಾಗಿವೆ. ಇದ್ರ ಜೊತೆ ರಾಜ್ಯಸಭೆ ಹಾಗೂ ಲೋಕಸಭೆ ಚಾನೆಲ್ ಇದೆ. ಗ್ರಾಹಕರು ಒಮ್ಮೆ ಡಿಶ್ ಹಾಗೂ ಸೆಟ್ ಅಪ್ ಬಾಕ್ಸ್ ಗೆ ಹಣ ಪಾವತಿ ಮಾಡಿದ್ರೆ ಸಾಕು. ಜೀವನ ಪರ್ಯಂತ ಉಚಿತವಾಗಿ ಟಿ.ವಿ ನೋಡಬಹುದಾಗಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿದೆ.

English summary
The four big broadcasters will be pulling out their channels from Prasar Bharati’s free direct to home (DTH) platform. DD Free Dish from 1st March, Dish TV chairman, and managing director (CMD) Jawahar Goel has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X