ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‍ಕಾರ್ಟ್‍ನಿಂದ ಹಬ್ಬದ ಸೀಸನ್‍ನಲ್ಲಿ 50 ಸಾವಿರ ನೇರ ಉದ್ಯೋಗ

|
Google Oneindia Kannada News

ಬೆಂಗಳೂರು, ಸೆ. 24: ಸಾಲು ಸಾಲು ಹಬ್ಬಗಳು ಬರುತ್ತಿರುವುದು ಮತ್ತು ಬಿಗ್ ಬಿಲಿಯನ್ ಡೇಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ 50,000 ಕ್ಕೂ ಅಧಿಕ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ.

ಫ್ಲಿಪ್‍ಕಾರ್ಟ್‍ನ ಸಪ್ಲೈ ಚೇನ್, ಲಾಜಿಸ್ಟಿಕ್ ಮತ್ತು ಗ್ರಾಹಕ ಬೆಂಬಲ ವಿಭಾಗಗಳಲ್ಲಿ ಈ ಉದ್ಯೋಗಗಳನ್ನು ಸೃಜಿಸಿದೆ. ಇದಲ್ಲದೇ, ಬಿಬಿಡಿ ಅಂದರೆ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಮಾರಾಟ ಜಾಲದಲ್ಲಿ ಶೇ.30 ರಷ್ಟು ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.

ಬಿಗ್ ಬಿಲಿಯನ್ ಡೇಸ್ ಗೂ ಮುನ್ನ ಪೂರೈಕೆ ಜಾಲ ವಿಸ್ತರಿಸಿಕೊಂಡ ಫ್ಲಿಪ್ ಕಾರ್ಟ್ಬಿಗ್ ಬಿಲಿಯನ್ ಡೇಸ್ ಗೂ ಮುನ್ನ ಪೂರೈಕೆ ಜಾಲ ವಿಸ್ತರಿಸಿಕೊಂಡ ಫ್ಲಿಪ್ ಕಾರ್ಟ್

ವರ್ಷದ ದೊಡ್ಡ ಕಾರ್ಯಕ್ರಮವಾದ ಬಿಬಿಡಿ ಸೆಪ್ಟಂಬರ್ 29 ಕ್ಕೆ ಆರಂಭವಾಗಿ ಅಕ್ಟೋಬರ್ 4 ಕ್ಕೆ ಅಂತ್ಯಗೊಳ್ಳಲಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಗ್ರಾಹಕರು ಈ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್‍ನಲ್ಲಿ ಶಾಪಿಂಗ್ ಮಾಡಲಿದ್ದಾರೆ.2014 ರಲ್ಲಿ ಆರಂಭವಾದ ಈ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಫ್ಲಿಪ್‍ಕಾರ್ಟ್‍ನ ಅತಿದೊಡ್ಡ ಉದ್ಯೋಗ ಸೃಷ್ಟಿ ಇದಾಗಿದೆ.

Big Billion Days sale: Flipkart adds over 50,000 direct jobs, indirect jobs

ಫ್ಲಿಪ್‍ಕಾರ್ಟ್ ವಿಶ್‍ಮಾಸ್ಟರ್ಸ್‍ನಿಂದ ವೇರ್‍ಹೌಸ್‍ಗಳಲ್ಲಿನ ಸಿಬ್ಬಂದಿವರೆಗೆ, ಮದರ್ ಹಬ್ಸ್ ಮತ್ತು ಡೆಲಿವರಿ ಹಬ್ಸ್‍ವರೆಗಿನ ಇಡೀ ಸಪ್ಲೈ ಚೇನ್‍ನಲ್ಲಿ ನೇರ ಉದ್ಯೋಗಗಳು ಇರಲಿವೆ. ಕೈನಲ್ಲಿ ಬಳಸುವ ಸಾಧನಗಳು, ಪಿಒಎಸ್ ಯಂತ್ರಗಳು, ಸ್ಕ್ಯಾನರ್‍ಗಳು, ವಿವಿಧ ಮೊಬೈಲ್ ಅಪ್ಲಿಕೇಶನ್‍ಗಳು ಮತ್ತು ಇಆರ್‍ಪಿಗಳನ್ನು ಬಳಸುವ ಬಗ್ಗೆ ಈ ಸಿಬ್ಬಂದಿಗೆಲ್ಲಾ ಪೂರಕ ತರಬೇತಿಯನ್ನು ನೀಡಲಾಗಿರುತ್ತದೆ. ಇದಲ್ಲದೇ, ಪ್ರಮುಖವಾಗಿ ಗ್ರಾಹಕ ಸೇವೆ, ವಿತರಣೆ ಮತ್ತು ಅಳವಡಿಕೆ (ಇನ್‍ಸ್ಟಾಲೇಶನ್) ಕುರಿತು ತರಬೇತಿಯನ್ನು ಹೊಂದಿರುತ್ತಾರೆ.

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ದಿನ 700 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಣೆಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ದಿನ 700 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಣೆ

ದೇಶಾದ್ಯಂತ ಇರುವ ಫ್ಲಿಪ್‍ಕಾರ್ಟ್‍ನ ಲಕ್ಷಾಂತರ ಮಾರಾಟ ಪಾಲುದಾರರಿಗೆ ಹಬ್ಬದ ಸಂದರ್ಭದಲ್ಲಿ ಅವರಿಗೆ ಎದುರಾಗುವ ಬೇಡಿಕೆಗಳನ್ನು ಯಾವ ರೀತಿ ಪೂರೈಸಬೇಕು ಎಂಬುದು ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಅವರಿಗೂ ಪ್ರತ್ಯೇಕ ವಿಧಾನಗಳಲ್ಲಿ ತರಬೇತಿಯನ್ನು ನೀಡಲಾಗಿದೆ. ಇವರಿಗೆ ಪ್ರಮುಖವಾಗಿ ವೇರ್‍ಹೌಸ್ ಮ್ಯಾನೇಜ್‍ಮೆಂಟ್, ಪ್ಯಾಕೇಜಿಂಗ್ ಸೇರಿದಂತೆ ಹಲವು ವಿಧದ ತರಬೇತಿಯನ್ನು ನೀಡಲಾಗಿದೆ.

ಈ ಬಗ್ಗೆ ಮಾತನಾಡಿದ ಫ್ಲಿಪ್‍ಕಾರ್ಟ್ ಗ್ರೂಪ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ,"ನಮ್ಮ ಗ್ರಾಹಕರ ಜೀವನಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡುವ ನಿಟ್ಟಿನಲ್ಲಿ ಈ ಬಿಗ್ ಬಿಲಿಯನ್ ಡೇಗಳನ್ನು ವಿನ್ಯಾಸಗೊಳಿಸಲಾಗಿದೆ. ಅವರಿಗೆ ಹಬ್ಬದ ಸಂದರ್ಭದಲ್ಲಿ ಅದ್ಭುತವಾದ ಆಯ್ಕೆಗಳು ಮತ್ತು ಗರಿಷ್ಠ ಮಟ್ಟದ ಶಾಪಿಂಗ್ ಅನುಭವವನ್ನು ನೀಡುವುದು ಇದರ ಉದ್ದೇಶವಾಗಿದೆ. ನಮ್ಮ ಉಪಕ್ರಮಗಳ ಮೂಲಕ ಇಡೀ ಗ್ರಾಹಕ ಸಮುದಾಯಕ್ಕೆ ಪ್ರಯೋಜನ ಆಗುವಂತೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.

2 ಮತ್ತು 3 ನೇ ಹಂತದ ಪಟ್ಟಣಗಳಲ್ಲಿ ಸೇವೆ ಆರಂಭಿಸಿದ ಫ್ಲಿಪ್‍ಕಾರ್ಟ್2 ಮತ್ತು 3 ನೇ ಹಂತದ ಪಟ್ಟಣಗಳಲ್ಲಿ ಸೇವೆ ಆರಂಭಿಸಿದ ಫ್ಲಿಪ್‍ಕಾರ್ಟ್

ದೇಶಾದ್ಯಂತ ಹೊಸ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಮೂಲಕ ಮಾರಾಟಗಾರರ ವ್ಯವಹಾರದ ಮಟ್ಟವನ್ನು ಹೆಚ್ಚಿಸುವುದು, ಸ್ಥಳೀಯ ಮಟ್ಟದ ಉದ್ಯಮಗಳಿಗೆ ಆದ್ಯತೆ ನೀಡುವುದು ಹಾಗೂ ಆರ್ಥಿಕತೆಯನ್ನು ಸದೃಢಗೊಳಿಸುವುದು ಫ್ಲಿಪ್‍ಕಾರ್ಟ್‍ನ ಗುರಿಯಾಗಿದೆ" ಎಂದು ತಿಳಿಸಿದರು.

ಇದಲ್ಲದೇ, ಬಿಗ್ ಬಿಲಿಯನ್ ಡೇಗಳ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವೆಂಡರ್‍ಗಳಾದ ಹೌಸ್‍ಕೀಪಿಂಗ್, ಭದ್ರತೆ, ಸಾರಿಗೆಯಂತಹ ಸಂಸ್ಥೆಗಳು ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಅವಕಾಶವಿದೆ. ಈ ಮೂಲಕ ಫ್ಲಿಪ್‍ಕಾರ್ಟ್ ಪರೋಕ್ಷ ಉದ್ಯೋಗಗಳನ್ನೂ ಸೃಷ್ಟಿಸಲಿದೆ.

English summary
Flipkart said it has added over 50,000 direct jobs across its supply chain, logistics arm, and customer support ahead of the festival season, Big Billion Days sale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X