ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮುಖ ಪ್ರೀಪೇಯ್ಡ್ ಯೋಜನೆಗಳನ್ನು ರದ್ದು ಮಾಡಿದ ಏರ್ಟೆಲ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ತನ್ನ ಎರಡು ಪ್ರಮುಖ ಪ್ರೀಪೇಯ್ಡ್ ಯೋಜನೆಗಳನ್ನು ಕೈ ಬಿಟ್ಟಿದೆ. ಏರ್ಟೆಲ್ ತನ್ನ ಟಾಕ್ ಟೈಂ ರೀಚಾರ್ಜ್ ಪ್ಲಾನ್ ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಏರ್ಟೆಲ್ 549 ರೂಪಾಯಿ ಹಾಗೂ 799 ರೂಪಾಯಿ ರಿಚಾರ್ಜ್ ಪ್ಲಾನ್ ತೆಗೆದು ಹಾಕಿದೆ.

ಇದರ ಬೆನ್ನಲ್ಲೇ, ಏರ್ಟೆಲ್ 419 ರೂಪಾಯಿ ರಿಚಾರ್ಜ್ ಪ್ಲಾನ್ ಶುರು ಮಾಡಿದೆ. ಈ ಯೋಜನೆಯು 75 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 1.4 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಗ್ರಾಹಕರಿಗೆ 100 ಎಸ್ ಎಂ ಎಸ್ ಪ್ರತಿದಿನ ಸಿಗಲಿದೆ. 419 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಟ್ಟು 105 ಜಿಬಿ ಡೇಟಾ ಸಿಗಲಿದೆ. ಯಾವುದೇ ನೆಟ್ವರ್ಕ್ ಗೆ ಗ್ರಾಹಕರು ಕರೆ ಮಾಡಬಹುದಾಗಿದೆ.

Bharti Airtels Rs 419 prepaid plan offers 1.4GB daily data

500 ರು ದರದಲ್ಲಿ ಯಾವ ರೀಚಾರ್ಜ್ ಯೋಜನೆ ಚೆನ್ನಾಗಿದೆ? 500 ರು ದರದಲ್ಲಿ ಯಾವ ರೀಚಾರ್ಜ್ ಯೋಜನೆ ಚೆನ್ನಾಗಿದೆ?

4ಜಿ ನೆಟ್ವರ್ಕಿಂಗ್ ಜೊತೆ 3ಜಿ, 2ಜಿ ಕೂಡ ಬಳಕೆ ಮಾಡಬಹುದಾಗಿದೆ. 3ಜಿ ಹಾಗೂ 2ಜಿ ಗ್ರಾಹಕರು ಕೂಡ ಪ್ರತಿದಿನ 1.4 ಜಿಬಿ ಡೇಟಾ ಬಳಸಬಹುದಾಗಿದೆ. ಇದಲ್ಲದೆ, ಜಿಯೋಗೆ ಪೈಪೋಟಿ ನೀಡಲು ಏರ್ಟೆಲ್ 399 ರೂಪಾಯಿ ಹಾಗೂ 448 ರೂಪಾಯಿ ರೀಚಾರ್ಜ್ ಯೋಜನೆಗಳನ್ನು ಆರಂಭಿಸಿದೆ. ಇದು 70 ಹಾಗೂ 82 ದಿನಗಳ ವ್ಯಾಲಿಡಿಟಿ ಹೊಂದಿವೆ.

English summary
Airtel prepaid plans priced at Rs 549 and Rs 799 and has now launched a tariff plan priced at Rs 419. This is an open market plan, which means it is available across the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X