ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 03 ರಿಂದ ಭಾರ್ತಿ ಏರ್ ಟೆಲ್, ವೋಡಾ- ಐಡಿಯಾ ದರ ಏರಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 01: ಭಾರ್ತಿ ಏರ್ ಟೆಲ್ ನಂತರ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವೊಡಾಫೋನ್ ಐಡಿಯಾ ಕರೆ, ಡೇಟಾ ದರಗಳನ್ನುಏರಿಕೆ ಮಾಡುವುದಾಗಿ ಘೋಷಿಸಿದೆ. ಎರಡೂ ಕಂಪನಿಗಳ ಪರಿಷ್ಕೃತ ದರಗಳು ಡಿಸೆಂಬರ್ 3ರಿಂದ ಜಾರಿಗೆ ಬರಲಿವೆ. ಏರ್ಟೆಲ್ ದರದಲ್ಲಿ ಶೇ 42ರಷ್ಟು ಹಾಗೂ ವೋಡಾಫೋನ್ ಐಡಿಯಾ ದರದಲ್ಲಿ ಶೇ 50ರಷ್ಟು ದರ ಏರಿಕೆಯಾಗಲಿದೆ.

ಏರ್ಟೆಲ್, ವೊಡಾಫೋನ್ ಐಡಿಯಾ ಡೇಟಾ ಕರೆ ದರಗಳನ್ನು ಪರಿಷ್ಕರಿಸಲಾಗಿದ್ದು, ಅದೇ ರೀತಿ ಜಿಯೋ ಕೂಡ ದರ ಏರಿಕೆ ಪ್ರಕಟಿಸಲಿದೆ ಎಂದು ಹೇಳಲಾಗಿದೆ.

ವೋಡಾಫೋನ್ ಐಡಿಯಾ ಲಿಮಿಟೆಡ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸುತ್ತಿದೆ. ಪ್ರೀಪೇಯ್ಡ್ ಸೇವೆಗಳು ಎರಡು ದಿನ, 28 ದಿನ, 84 ದಿನ, 365 ದಿನದ ವ್ಯಾಲಿಡಿಟಿಯೊಂದಿಗೆ ಹೊಸ ಪ್ಲಾನ್ ಪರಿಚಯಿಸಲಾಗಿದೆ. ಹಳೆಯ ಪ್ಲಾನ್ ಗಳಿಗಿಂತ ಹೊಸ ಯೋಜನೆಗಳು ಶೇ 50ರಷ್ಟು ದುಬಾರಿಯಾಗಿವೆ.

Bharti Airtel, Voda Idea to raise mobile call, data charges from Dec 3

* 999ರು ಬೆಲೆಯ ವಾರ್ಷಿಕ ಯೋಜನೆ ಬದಲಿಗೆ 1499 ರು ಬೆಲೆಯ ಯೋಜನೆಯನ್ನು ಜಾರಿಗೆ ತರಲಾಗುವುದು ಇದರಲ್ಲಿ 24 ಜಿಬಿ (12ಜಿಬಿ ಬದಲಿಗೆ) ಡೇಟಾ ಸಿಗಲಿದೆ.

ಏರ್ಟೆಲ್, ವೊಡಾಫೋನ್, ಜಿಯೋ ಬಳಿಕ ಈಗ ಬಿಎಸ್ಏರ್ಟೆಲ್, ವೊಡಾಫೋನ್, ಜಿಯೋ ಬಳಿಕ ಈಗ ಬಿಎಸ್

* 1699 ರು ಬೆಲೆಯ ಯೋಜನೆ ಈಗ 365 ವ್ಯಾಲಿಡಿಟಿ ಜೊತೆಗೆ 41.2ರಷ್ಟು ಬೆಲೆ ಹೆಚ್ಚಳವಾಗಿ 1.5 ಜಿಬಿ ಪ್ರತಿದಿನದ ಡೇಟಾ ಜೊತೆಗೆ 2,399 ರು ತಗುಲಲಿದೆ.

* 458 ರು ಬೆಲೆಯ ಯೋಜನೆಯು ಶೇ31ರಷ್ಟು ಬೆಲೆ ಹೆಚ್ಚಳ ಪಡೆದುಕೊಂಡಿದ್ದು, 84 ದಿನ ವ್ಯಾಲಿಡಿಟಿ, 1.5ಜಿಬಿ ಪ್ರತಿದಿನ ಡೇಟಾ ಜೊತೆಗೆ 599ರು ಆಗಲಿದೆ.

* 199 ರು ಬೆಲೆಯ ಅನಿಯಮಿತ ಯೋಜನೆ ಶೇ 25ರಷ್ಟು ದರ ಹೆಚ್ಚಳ ಪಡೆದು 249ರು ಆಗಲಿದೆ.

ಸುಮಾರು 1.17 ಲಕ್ಷ ಸಾಲ ಹೊಂದಿರುವ ವೋಡಾಫೋನ್ ಐಡಿಯಾ ಕಂಪನಿ ಕಳೆದ ತಿಂಗಳು 50, 921 ಕೋಟಿ ರು ನಷ್ಟು ಅನುಭವಿಸಿತ್ತು.

English summary
After announcement from Bharti Airtel, in a first mobile tariff hike in past four years, telecom operator Vodafone Idea on Sunday announced new plans under which call and data charges will be dearer for its pre-paid customers by up to 50 per cent from December 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X