ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರ್ತಿ ಏರ್‌ಟೆಲ್‌ ತ್ರೈಮಾಸಿಕ ವರದಿ: 853.6 ಕೋಟಿ ರೂ. ನಿವ್ವಳ ಲಾಭ

|
Google Oneindia Kannada News

ನವದೆಹಲಿ, ಫೆಬ್ರವರಿ 03: ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರ್ತಿ ಏರ್‌ಟೆಲ್‌ 853.6 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ಹಿಂದಿನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 763.2 ಕೋಟಿ ರೂ. ಗಳಿಸಿತ್ತು.

ಕಂಪನಿಯ ಆದಾಯವು ಡಿಸೆಂಬರ್ ತ್ರೈಮಾಸಿಕದಲ್ಲಿ ವರ್ಷಕ್ಕೆ ಶೇಕಡಾ 24.2 ರಷ್ಟು ಏರಿಕೆಯಾಗಿದ್ದು (YOY) 26,518 ಕೋಟಿ ರೂ.ಗೆ ತಲುಪಿದೆ, ಇದು ತ್ರೈಮಾಸಿಕದ ಅತ್ಯಧಿಕ ಆದಾಯವಾಗಿದ್ದು, ಗ್ರಾಹಕರ ಸೇರ್ಪಡೆ ಹೆಚ್ಚಳಗೊಂಡಿರುವುದು ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಮೊಬೈಲ್ ಎಆರ್‌ಪಿಯು (ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ) ಅಕ್ಟೋಬರ್-ಡಿಸೆಂಬರ್‌ನಲ್ಲಿ 166 ರೂ.ಗೆ ಏರಿತು. ಇದು ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 135 ರೂ.ಗಳಿಂದ ಗುಣಮಟ್ಟದ ಗ್ರಾಹಕರನ್ನು ಪಡೆದುಕೊಳ್ಳುವುದರ ಜೊತೆಗೆ ಗ್ರಾಹಕರ ದತ್ತಾಂಶವನ್ನು ಅಪ್‌ಗ್ರೇಡ್ ಮಾಡುವತ್ತ ಗಮನಹರಿಸಿದೆ ಎಂದು ಏರ್‌ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.

 Bharti Airtel Q3 Report: Net Profit Rised To 853 Crore

''ಕಂಪನಿಯು ತನ್ನ ಪೋಸ್ಟ್‌ಪೇಯ್ಡ್‌ ವ್ಯವಹಾರದಲ್ಲಿ ಬಲವಾದ ಸೇರ್ಪಡೆಯನ್ನು ಕಂಡಿದ್ದು, ಈ ತ್ರೈಮಾಸಿಕದಲ್ಲಿ ಸುಮಾರು 7 ಲಕ್ಷ ಪೋಸ್ಟ್-ಪೇಯ್ಡ್ ಗ್ರಾಹಕರನ್ನು ಸೇರಿಸಿದೆ. ನಮ್ಮ ಗ್ರಾಹಕರಿಗೆ ಅದ್ಭುತ ಅನುಭವವನ್ನು ನೀಡಲು ನಾವು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ಏರ್‌ಟೆಲ್ ಹೇಳಿದೆ.

ತ್ರೈಮಾಸಿಕದಲ್ಲಿ ಕಂಪನಿಯು 1.29 ಕೋಟಿ 4 ಜಿ ಗ್ರಾಹಕರನ್ನು ಸೇರಿಸಿದ್ದು, ತನ್ನ ಒಟ್ಟು 4 ಜಿ ಗ್ರಾಹಕರ ಸಂಖ್ಯೆಯನ್ನು 16.56 ಕೋಟಿಗೆ ತಲುಪಿಸಿದೆ. ಇದರ ಒಟ್ಟಾರೆ ಗ್ರಾಹಕರ ಸಂಖ್ಯೆ 16 ದೇಶಗಳಲ್ಲಿ 45.8 ಕೋಟಿ ಆಗಿದ್ದರೆ, ಡಿಸೆಂಬರ್ ತ್ರೈಮಾಸಿಕದಲ್ಲಿ ಬಂಡವಾಳ ವೆಚ್ಚ 6,864 ಕೋಟಿ ರೂ. ಆಗಿದೆ.

English summary
Bharti Airtel (Airtel) on Wednesday reported a consolidated net profit of Rs 853.6 crore in October-December quarter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X