• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಎಂಟ್ರಿ ಲೆವಲ್ ಯೋಜನೆ ಘೋಷಿಸಿದ ಏರ್ ಟೆಲ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಟೆಲಿಕಾಂ ಕ್ಷೇತ್ರದ ಎರಡನೇ ಅತಿದೊಡ್ಡ ಸಂಸ್ಥೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ 6 ಹೊಸ ಎಂಟ್ರಿ ಲೆವಲ್ ಪ್ಲ್ಯಾನ್ ಗಳನ್ನು ಇತ್ತೀಚೆಗೆ ಪ್ರಕಟಿಸಿತ್ತು. ಈಗ ಮತ್ತೊಮ್ಮೆ ಹೊಸ ಯೋಜನೆ ಪ್ರಕಟಿಸಿ ಜಿಯೋ, ವೋಡಾಫೋನ್ ಜತೆ ನೇರ ಪೈಪೋಟಿಗಿಳಿದಿದೆ.

ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ಏರ್ಟೆಲ್ ಹೊಸ 195 ರು ಗಳ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಕಟಿಸೆ. 25 ದಿನಗಳ ವ್ಯಾಲಿಡಿಟಿ ಹೊಂದಿದೆ.

ಏರ್ಟೆಲ್ ವಿಶೇಷ ಯೋಜನೆ 25 ರೂಪಾಯಿಯಿಂದ ಶುರುವಾಗಲಿದ್ದು, 245 ರೂಪಾಯಿಯವರೆಗೆ ಇದೆ. ಈ ಎಲ್ಲ ಯೋಜನೆಯಲ್ಲಿ ಟಾಕ್ ಟೈಮ್ ಜೊತೆ ಡೇಟಾ ಗ್ರಾಹಕರಿಗೆ ಸಿಗಲಿದೆ.

ಇದಲ್ಲದೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ 199, 399, 448 ಹಾಗೂ 509 ರೀಚಾರ್ಜ್ ಪ್ಯಾಕ್ ಗಳನ್ನು ಏರ್ ಟೆಲ್ ಹೊಂದಿದೆ. ಬಹುತೇಕ ಎಲ್ಲವೂ 28 ದಿನಗಳ ವ್ಯಾಲಿಡಿಟಿ ಹೊಂದಿವೆ. ಉಚಿತ ಅನಿಯಮಿತ ಕರೆ, ದಿನಕ್ಕೆ 100 ಎಸ್ಎಂಎಸ್ , ದಿನಕ್ಕೆ 1.48 ಜಿಬಿ ಡೇಟಾ ಸಿಗಲಿದೆ. 399 ರು, 448 ರು ಹಾಗೂ 509 ರು ಯೋಜನೆಯಲ್ಲಿ 70, 82 ಹಾಗೂ 90 ದಿನಗಳ ವ್ಯಾಲಿಡಿಟಿ ಸಿಗಲಿದೆ.

ಏರ್ಟೆಲ್ ನ 195 ರೂಪಾಯಿ ಪ್ಲಾನ್

ಏರ್ಟೆಲ್ ನ 195 ರೂಪಾಯಿ ಪ್ಲಾನ್

195ರು ಗಳ ಪ್ರೀಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ದಿನ 1.25 ಜಿಬಿ ಡೇಟಾನಂತೆ 35 ಜಿಬಿ ಡೇಟಾ ಸಿಗಲಿದೆ. ಇಂಟರ್ನೆಟ್ ಡೇಟಾ ಜತೆಗೆ ಅನೇಕ ಸೌಲಭ್ಯಗಳನ್ನು ಏರ್ಟೆಲ್ ಗ್ರಾಹಕರಿಗೆ ನೀಡುತ್ತಿದೆ. ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕರೆಗಳು ಉಚಿತವಾಗಿದ್ದು, ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.

ಜಿಯೋ ಹಾಗೂ ವೋಡಾಫೋನ್ ಗೆ ಪೈಪೋಟಿ

ಜಿಯೋ ಹಾಗೂ ವೋಡಾಫೋನ್ ಗೆ ಪೈಪೋಟಿ

ಜಿಯೋದ 199 ರೂಪಾಯಿ ಪ್ಲಾನ್ ಹಾಗೂ ವೋಡಾಫೋನ್ ನ 199 ರೂಪಾಯಿ ಪ್ಲಾನ್ ಸ್ಪರ್ಧೆ ನೀಡಲು ಏರ್ಟೆಲ್ ಈ ಯೋಜನೆಯನ್ನು ತಂದಿದೆ. ಏರ್ಟೆಲ್ ತನ್ನದೇ 199 ರೂಪಾಯಿ ಪ್ಲಾನ್ ಕೂಡಾ ಹೊಂದಿದೆ. ಕರ್ನಾಟಕದ ಗಡಿಭಾಗದ ಟೆಲಿಕಾಂ ಜಿಲ್ಲೆಗಳು, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳದ ಪ್ರಿಪೇಯ್ಡ್ ಗ್ರಾಹಕರಿಗೆ 195ರು ಗಳ ಯೋಜನೆ ಸದ್ಯಕ್ಕೆ ಲಭ್ಯ.

145 ಹಾಗೂ 245 ರೂಪಾಯಿ ಪ್ಲಾನ್

145 ಹಾಗೂ 245 ರೂಪಾಯಿ ಪ್ಲಾನ್

145 ಹಾಗೂ 245 ರೂಪಾಯಿ ಪ್ಲಾನ್ ಕಂಪನಿ ಬಿಡುಗಡೆ ಮಾಡಿದೆ. 145 ರೂಪಾಯಿ ಪ್ಲಾನ್ ನಲ್ಲಿ 1 ಜಿಬಿ ಡೇಟಾ ಜೊತೆ 30 ಪೈಸೆ ಪ್ರತಿ ನಿಮಿಷದಂತೆ ಕರೆ ಸಿಗಲಿದೆ. 245 ರೂಪಾಯಿ ಪ್ಲಾನ್ ನಲ್ಲಿ 2 ಜಿಬಿ ಡೇಟಾ ಹಾಗೂ 30 ಪೈಸೆ ಪ್ರತಿ ನಿಮಿಷದಂತೆ ಕರೆ ಸೌಲಭ್ಯ ಸಿಗಲಿದೆ. ಇದರ ವ್ಯಾಲಿಡಿಟಿ 84 ದಿನಗಳಾಗಿವೆ.

149 ರು ಪ್ರೀಪೇಯ್ಡ್ ಪ್ಯಾಕೇಜ್

149 ರು ಪ್ರೀಪೇಯ್ಡ್ ಪ್ಯಾಕೇಜ್

149 ರು ಪ್ರೀಪೇಯ್ಡ್ ಪ್ಯಾಕೇಜ್ ನಲ್ಲಿ ಗ್ರಾಹಕರಿಗೆ 2ಜಿಬಿ 3ಜಿ/4ಜಿ ಡೇಟಾ ಸಿಗಲಿದೆ, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಒಟ್ಟಾರೆ, 2.68ರು ನಂತೆ 56ಜಿಬಿ ಡೇಟಾ ಸಿಗಲಿದೆ. ಜತೆಗೆ ವಾಯ್ಸ್ ಕಾಲಿಂಗ್ (ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್) ಹಾಗೂ 100 ಎಸ್ಎಂಎಸ್ ಪ್ರತಿ ದಿನ ಉಚಿತ ಲಭ್ಯವಿದೆ.

199 ರು ಯೋಜನೆ

199 ರು ಯೋಜನೆ

199 ರು ಯೋಜನೆ: 28ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲ್ಲಿ 39.2 ಜಿಬಿ 3ಜಿ/4ಜಿ ಡೇಟಾ ಸಿಗಲಿದೆ. 100 ಉಚಿತ ಎಸ್ಎಂಎಸ್(ದೇಶದಾದ್ಯಂತ), ಅನಿಯಮಿತ ವಾಯ್ಸ್ ಸ್ಥಳೀಯ-ಎಸ್ಟಿಡಿ-ರಾಷ್ಟ್ರೀಯ-ರೋಮಿಂಗ್) ಲಭ್ಯವಿರಲಿದೆ.

English summary
The new plan is priced at Rs 195 in which users will get unlimited voice calls for both local and national calls including roaming and without any FUP limitations. However the plan does not offer 100 SMS per day, Telecomtalk reported. However, there is a catch as the plan is available to Andhra Pradesh, Telangana, and Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X