ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರ್ತಿ ಏರ್‌ಟೆಲ್‌ನಲ್ಲಿ 235 ಮಿಲಿಯನ್ ಡಾಲರ್ ಹೂಡಿಕೆ

|
Google Oneindia Kannada News

ನವದೆಹಲಿ, ಜುಲೈ 1: ಅಮೆರಿಕಾ ಮೂಲದ ಕಾರ್ಲೈಲ್ ಗ್ರೂಪ್ ತನ್ನ ಡೇಟಾ ಸೆಂಟರ್ ವ್ಯವಹಾರವಾದ ನೆಕ್ಸ್ಟ್ರಾ ಡಾಟಾ ಲಿಮಿಟೆಡ್ (ಎನ್ಎಕ್ಸ್ಟ್ರಾ) ಮೂಲಕ ಏರ್‌ಟೆಲ್‌ನಲ್ಲಿ 235 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಶೇಕಡಾ 25ರಷ್ಟು ಪಾಲನ್ನು ಖರೀದಿಸಲಿದೆ ಎಂದು ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ ಬುಧವಾರ ಪ್ರಕಟಿಸಿದೆ.

ಸಿಎಪಿ ವಿ ಮಾರಿಷಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಕಂಫರ್ಟ್ ಇನ್ವೆಸ್ಟ್‌ಮೆಂಟ್ಸ್ II ಈ ಹೂಡಿಕೆಯನ್ನು ಮಾಡಲಿದೆ. ಇದು ದಿ ಕಾರ್ಲೈಲ್ ಗ್ರೂಪ್‌ನ ಅಂಗಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಮತ್ತು ಸಲಹೆ ನೀಡುವ ಹೂಡಿಕೆ ನಿಧಿಯಾಗಿದೆ. ಜಂಟಿ ಹೇಳಿಕೆಯಲ್ಲಿ, ಭಾರ್ತಿ ಏರ್‌ಟೆಲ್ ಮತ್ತು ದಿ ಕಾರ್ಲೈಲ್ ಗ್ರೂಪ್, ನೆಕ್ಸ್ಟ್ರಾದ ಹಣದ ನಂತರದ ಉದ್ಯಮ ಮೌಲ್ಯಮಾಪನವು ಅಂದಾಜು 1.2 ಬಿಲಿಯನ್ ಡಾಲರ್ ಎಂದು ಹೇಳಿದೆ. ಭಾರತಿ ಏರ್‌ಟೆಲ್ ಚಂದಾದಾರರ ವಿಷಯದಲ್ಲಿ ಭಾರತದ ಎರಡನೇ ಅತಿದೊಡ್ಡ ದೂರಸಂಪರ್ಕ ನೆಟ್‌ವರ್ಕ್ ಆಪರೇಟರ್ ಆಗಿದೆ.

ಕೃಷಿ ಇಲಾಖೆಯ ಯಡವಟ್ಟು, ರೈತರ ಪರಿಹಾರದ ಹಣ ಏರ್‌ಟೆಲ್‌ ಕಂಪನಿಗೆ!ಕೃಷಿ ಇಲಾಖೆಯ ಯಡವಟ್ಟು, ರೈತರ ಪರಿಹಾರದ ಹಣ ಏರ್‌ಟೆಲ್‌ ಕಂಪನಿಗೆ!

ಏರ್‌ಟೆಲ್‌ನಿಂದ ದೆಹಲಿ ಮೂಲದ ಎನ್‌ಕ್ಸ್ಟ್ರಾ ಪ್ರಮುಖ ಭಾರತೀಯ ಮತ್ತು ಜಾಗತಿಕ ಉದ್ಯಮಗಳು, ಸ್ಟಾರ್ಟ್ ಅಪ್‌ಗಳು, ಎಸ್‌ಎಂಇಗಳು ಮತ್ತು ಸರ್ಕಾರಗಳಿಗೆ ಸುರಕ್ಷಿತ ದತ್ತಾಂಶ ಕೇಂದ್ರ ಸೇವೆಗಳನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಹೂಡಿಕೆಯ ನಂತರ, ಇದು ಇನ್ನೂ ನಿಯಂತ್ರಕ ಅನುಮೋದನೆಗೆ ಒಳಪಟ್ಟಿರುತ್ತದೆ, ಭಾರ್ತಿ ಏರ್‌ಟೆಲ್ ಕಂಪನಿಯಲ್ಲಿ ಶೇಕಡಾ 75ರಷ್ಟು ಪಾಲನ್ನು ಮುಂದುವರಿಸಲಿದೆ. Nxtra 10 ದೊಡ್ಡ ದತ್ತಾಂಶ ಕೇಂದ್ರಗಳನ್ನು ಮತ್ತು 120 ಕ್ಕೂ ಹೆಚ್ಚು ಅಂಚಿನ ದತ್ತಾಂಶ ಕೇಂದ್ರಗಳನ್ನು ಹೊಂದಿದೆ.

Bharti Airtel Bags 235 Million Dollar Investment In Arm From Carlyle Group

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ 9 ವಾರಗಳಲ್ಲಿ ಅನೇಕ ಜಾಗತಿಕ ಹೂಡಿಕೆದಾರರಿಂದ 1.15 ಲಕ್ಷ ಕೋಟಿ ರುಪಾಯಿ ಆಕರ್ಷಿಸಿದ ಬಳಿಕ ಭಾರ್ತಿ ಏರ್‌ಟೆಲ್‌ ಇದು ಮೊದಲ ಹೂಡಿಕೆಯಾಗಿದೆ. ಜಿಯೋನ ಅತಿದೊಡ್ಡ ಹೂಡಿಕೆಯು ಮಾರ್ಕ್ ಜುಕರ್‌ಬರ್ಗ್‌ನ ಫೇಸ್‌ಬುಕ್‌ನಿಂದ ಶೇಕಡಾ 9.99 ರಷ್ಟು ಷೇರುಗಳಿಗೆ ಬಂದಿದೆ.

English summary
Bharti Airtel Wednesday announced that US-based Carlyle Group will invest $235 million in its data centre business Nxtra Data Limited (Nxtra) for a 25% stake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X