ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ವರ್ಷದ ಬಳಿಕ ಜಿಯೋವನ್ನು ಹಿಂದಿಕ್ಕಿದ ಭಾರ್ತಿ ಏರ್‌ಟೆಲ್: ಷೇರು ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 04: ಶುಕ್ರವಾರ ಭಾರ್ತಿ ಏರ್‌ಟೆಲ್ ಷೇರುಗಳು ಜಿಗಿತ ಕಂಡಿವೆ. ಇದಕ್ಕೆ ಪ್ರಮುಖ ಕಾರಣ ನಾಲ್ಕು ವರ್ಷದ ಬಳಿಕ ಭಾರ್ತಿ ಏರ್‌ಟೆಲ್‌ ತನ್ನ ಪ್ರಬಲ ಸ್ಪರ್ಧಿ ರಿಲಯನ್ಸ್ ಜಿಯೋವನ್ನು ಹಿಂದಿಕ್ಕಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಪಡೆಯುವ ಮೂಲಕ ಜಿಯೋಗೆ ಸ್ಪರ್ಧೆಯೊಡ್ಡಿದೆ.

ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಾರ, ಸೆಪ್ಟೆಂಬರ್‌ನಲ್ಲಿ ಏರ್‌ಟೆಲ್‌ನ ಹೊಸ ಗ್ರಾಹಕರ ಸಂಖ್ಯೆ ಜಿಯೋಗಿಂತ ಹೆಚ್ಚಾಗಿದೆ.

 ಏರ್‌ಟೆಲ್‌ನಿಂದ ಉಚಿತವಾಗಿ 11GB ಡೇಟಾ ಪಡೆಯುವುದು ಹೇಗೆ? ಏರ್‌ಟೆಲ್‌ನಿಂದ ಉಚಿತವಾಗಿ 11GB ಡೇಟಾ ಪಡೆಯುವುದು ಹೇಗೆ?

ಸೆಪ್ಟೆಂಬರ್‌ನಲ್ಲಿ 3.77 ಮಿಲಿಯನ್ ಹೊಸ ಚಂದಾದಾರರು

ಸೆಪ್ಟೆಂಬರ್‌ನಲ್ಲಿ 3.77 ಮಿಲಿಯನ್ ಹೊಸ ಚಂದಾದಾರರು

ರಿಲಯನ್ಸ್ ಜಿಯೋ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಮಾಸಿಕ ಆಧಾರದ ಮೇಲೆ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿನ ಬೆಳವಣಿಗೆಯ ದೃಷ್ಟಿಯಿಂದ ಮುಂದಿದೆ. ಜಿಯೋ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ, 1.59 ಕೋಟಿ ಹೊಸ ಗ್ರಾಹಕರನ್ನು ಸೃಷ್ಟಿಸಿದೆ.


ಆದರೆ ಟ್ರಾಯ್ ವರದಿ ಪ್ರಕಾರ ಭಾರ್ತಿ ಏರ್‌ಟೆಲ್‌ ಸೆಪ್ಟೆಂಬರ್‌ನಲ್ಲಿ 37.7 ಲಕ್ಷ ಹೊಸ ಸಂಪರ್ಕವನ್ನು ಪಡೆದಿದೆ. ಈ ಮೂಲಕ ನಾಲ್ಕು ವರ್ಷಗಳ ಬಳಿಕ ಮಾಸಿಕವಾಗಿ ಅತಿ ಹೆಚ್ಚು ಹೊಸ ಗ್ರಾಹಕರನ್ನು ಪಡೆದುಕೊಂಡಿದೆ.

ವೊಡಾಫೋನ್ ಐಡಿಯಾ ಬಳಕೆದಾರರ ಸಂಖ್ಯೆ ಇಳಿಕೆ

ವೊಡಾಫೋನ್ ಐಡಿಯಾ ಬಳಕೆದಾರರ ಸಂಖ್ಯೆ ಇಳಿಕೆ

ಸೆಪ್ಟೆಂಬರ್‌ನಲ್ಲಿ ಭಾರ್ತಿ ಏರ್‌ಟೆಲ್ 37.7 ಲಕ್ಷ ಹೊಸ ಸಂಪರ್ಕವನ್ನು ಪಡೆದರೆ, ರಿಲಯನ್ಸ್ ಜಿಯೋ 14.6 ಲಕ್ಷ ಮತ್ತು ಬಿಎಸ್ಎನ್ಎಲ್ 78,454 ಹೊಸ ಗ್ರಾಹಕರನ್ನು ಹೊಂದಿದೆ. ಮತ್ತೊಂದೆಡೆ, ವೊಡಾಫೋನ್ ಐಡಿಯಾದ ಚಂದಾದಾರರ ಸಂಖ್ಯೆ 46.5 ಲಕ್ಷ ಕಡಿಮೆಯಾಗಿದೆ. ಎಂಟಿಎನ್ಎಲ್ 5,784 ಸಂಪರ್ಕಗಳನ್ನು ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ 1,324 ಸಂಪರ್ಕಗಳನ್ನು ಕಳೆದುಕೊಂಡಿದೆ.

ಅತಿ ಹೆಚ್ಚು ಚಂದಾದಾರನ್ನು ಹೊಂದಿರುವ ರಿಲಯನ್ಸ್ ಜಿಯೋ

ಅತಿ ಹೆಚ್ಚು ಚಂದಾದಾರನ್ನು ಹೊಂದಿರುವ ರಿಲಯನ್ಸ್ ಜಿಯೋ

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಅತಿಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದ್ದು, 404.12 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ನಂತರದಲ್ಲಿ ಭಾರ್ತಿ ಏರ್‌ಟೆಲ್ 326.61 ಮಿಲಿಯನ್ ಚಂದಾದಾರರು, ವೊಡಾಫೋನ್ ಐಡಿಯಾ 295.49 ಚಂದಾದಾರರು, ಬಿಎಸ್‌ಎನ್‌ಎಲ್‌ 118.89 ಮಿಲಿಯನ್, ಎಂಟಿಎನ್‌ಎಲ್ 3.33 ಮಿಲಿಯನ್ ಚಂದಾದಾರರನ್ನು ಹೊಂದಿದೆ.

ಟ್ರಾಯ್ ವರದಿ ಪ್ರಕಾರ ತಿಂಗಳಲ್ಲಿ ದೇಶದ ಒಟ್ಟು ಟೆಲಿಕಾಂ ಚಂದಾದಾರರ ಸಂಖ್ಯೆ 1,168.66 ಮಿಲಿಯನ್ ಏರಿಕೆಯಾಗಿದೆ.

ಭಾರ್ತಿ ಏರ್‌ಟೆಲ್ ಷೇರು ಮೌಲ್ಯ ಏರಿಕೆ

ಭಾರ್ತಿ ಏರ್‌ಟೆಲ್ ಷೇರು ಮೌಲ್ಯ ಏರಿಕೆ

ಸೆಪ್ಟೆಂಬರ್‌ ತಿಂಗಳಿನಲ್ಲಿ ಭಾರ್ತಿ ಏರ್‌ಟೆಲ್ ಅತಿಹೆಚ್ಚು ಚಂದಾದಾರರನ್ನು ಪಡೆದಿದೆ ಎಂಬ ಸುದ್ದಿ ಹೊರಬಿದ್ದ ಬಳಿಕ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಭಾರ್ತಿ ಏರ್‌ಟೆಲ್ ಷೇರು ಜಿಗಿತ ಕಂಡಿದೆ. ಎನ್‌ಎಸ್‌ಇನಲ್ಲಿ ದಿನದ ಗರಿಷ್ಠ 497.80 ರೂಪಾಯಿ ತಲುಪಿದ್ದ ಭಾರ್ತಿ ಏರ್‌ಟೆಲ್ ಷೇರು, ದಿನದ ವಹಿವಾಟು ಅಂತ್ಯಕ್ಕೆ ಶೇಕಡಾ 2.89ರಷ್ಟು ಅಥವಾ 13.85 ರೂಪಾಯಿ ಹೆಚ್ಚಾಗಿ 493.75 ರೂಪಾಯಿಗೆ ತಲುಪಿದೆ.

English summary
Bharti Airtel led mobile subscriber growth in September 2020 with a net addition of 3.77 million new customers. It was followed by Reliance Jio with net addition of 1.46 million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X