ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹಬ್ಬದ ಋತುವಿನಲ್ಲಿ ಭಾರತ್‍ಪೇ ಅಂಗಡಿ ಮಾಲೀಕರಿಗೆ ಚಿನ್ನದ ನಾಣ್ಯ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ಭಾರತ್‍ಪೇ ಪುಟ್ಟ ಅಂಗಡಿಗಳ ಮಾಲೀಕರು ಈ ಹಬ್ಬದ ಋತುವಿನಲ್ಲಿ ತಮ್ಮ ಭಾರತ್‍ಪೇ ಕ್ಯೂಆರ್ ಕೋಡ್‍ಗಳ ಮೂಲಕ ಸ್ವೀಕರಿಸುವ ಪಾವತಿಗಳಿಗೆ 10 ಸಾವಿರ ಚಿನ್ನದ ಹಾಗೂ ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ. ನಿರ್ದಿಷ್ಟ ಪ್ರಮಾಣದ ಕ್ಯೂಆರ್ ಕೋಡ್ ವಹಿವಾಟುಗಳ ಮಟ್ಟವನ್ನು ತಲುಪಿದಲ್ಲಿ ಈ ಕೊಡುಗೆ ಪಡೆಯಬಹುದಾಗಿದೆ.

ವ್ಯಾಪಾರಿ ಸಮುದಾಯವನ್ನು ಸಬಲೀಕರಿಸುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿಗಳ ಸೌಲಭ್ಯವನ್ನು ಒದಗಿಸುವ ಮೂಲಕ ಭಾರತ್‍ಪೇ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಉಡುಗೊರಯಾಗಿ ನೀಡುತ್ತದೆ. ಜತೆಗೆ ಮೊಬೈಲ್/ ಯುಪಿಐ ಪಾವತಿಗಳನ್ನು ಸ್ವೀಕರಿಸುವುದರಿಂದ ಆಗುವ ಪ್ರಯೋಜನಗಳನ್ನು ಕೂಡಾ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡುತ್ತಿದೆ. ಈ ಕೊಡುಗೆಯ ಮೂಲಕ ಡಿಜಿಟಲ್ ಪಾವತಿಯನ್ನು ಸ್ವೀಕರಿಸುವುದನ್ನು ವ್ಯಾಪಾರಿಗಳಿಗೆ ಲಾಭದಾಯಕ ಮತ್ತು ರೋಮಾಂಚಕ ಅನುಭವವನ್ನಾಗಿ ಭಾರತ್ ಪೇ ಮಾಡಲಿದೆ.

ಭಾರತ್ ಪೇ ನಿಂದ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಭಾರತ್ ಪೇ ನಿಂದ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ

ಕಂಪನಿಯ ವಹಿವಾಟು 2019ರಲ್ಲಿ 20 ಪಟ್ಟು ಹೆಚ್ಚಿದ್ದು, ದಿನಕ್ಕೆ 12 ಸಾವಿರ ವಹಿವಾಟುಗಳನ್ನು ದಾಖಲಿಸಿದೆ. ವಿಶಿಷ್ಟ ಕ್ಯೂಆರ್ ಕೋಡ್‍ಗಳ ಮೂಲಕ ವಾರ್ಷಿಕವಾಗಿ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಹಿವಾಟನ್ನು ಸಂಸ್ಕರಿಸುತ್ತದೆ.

ಸಹಸಂಸ್ಥಾಪಕ ಮತ್ತು ಸಿಇಓ ಅಶ್ನೀರ್ ಗ್ರೋವೆರ್

ಸಹಸಂಸ್ಥಾಪಕ ಮತ್ತು ಸಿಇಓ ಅಶ್ನೀರ್ ಗ್ರೋವೆರ್

ಈ ಬಗ್ಗೆ ಮಾತನಾಡಿದ ಭಾರತ್‍ಪೇ ಸಹಸಂಸ್ಥಾಪಕ ಮತ್ತು ಸಿಇಓ ಅಶ್ನೀರ್ ಗ್ರೋವೆರ್, "ಸುಲಲಿತವಾದ ಯುಪಿಐ ಪಾವತಿ ಸ್ವೀಕೃತಿಯನ್ನು ತಮ್ಮ ಮಳಿಗೆಗಳನ್ನು ಮಾಡಿಕೊಳ್ಳಲು ಭಾರತೀಯ ವ್ಯಾಪಾರಿಗಳನ್ನು ಸಶಕ್ತಗೊಳಿಸುವುದು ನಮ್ಮ ಉದ್ದೇಶ. ಈ ಅಭಿಯಾನದ ಮುಖ್ಯವಾದ ಉದ್ದೇಶವೆಂದರೆ ಉತ್ತಮ ಸಾಧಕರಿಗೆ ಪ್ರತಿಫಲವನ್ನು ನೀಡುವುದು ಮಾತ್ರವಾಗಿರದೇ, ವಿಶ್ವಾಸ, ನಿಷ್ಠೆ & ರೋಮಾಂಚಕ ಅನುಭವವನ್ನು ಭಾರತ್‍ಪೇ ವ್ಯಾಪಾರಿ ಸಮುದಾಯದಲ್ಲಿ ಉತ್ತೇಜಿಸುವುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ವ್ಯಾಪಾರಿಗಳು ಭಾರತ್‍ಪೇ ಸಾಲ ಉತ್ಪನ್ನಗಳಿಗೆ ಅರ್ಹರಾಗಲಿದ್ದಾರೆ" ಎಂದು ಬಣ್ಣಿಸಿದರು.

ಭಾರತ್‍ಪೇ ವಿಶ್ವಕಪ್ ಅಭಿಯಾನ

ಭಾರತ್‍ಪೇ ವಿಶ್ವಕಪ್ ಅಭಿಯಾನ

ಈ ವರ್ಷದ ಆರಂಭದಲ್ಲಿ ಭಾರತ್‍ಪೇ ವಿಶ್ವಕಪ್ ಅಭಿಯಾನವನ್ನು ಆಯೋಜಿಸಿ 11 ವ್ಯಾಪಾರಿಗಳನ್ನು 2019ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗಾಗಿ ಇಂಗ್ಲೆಂಡ್‍ಗೆ ಕಳುಹಿಸಿಕೊಟ್ಟಿತ್ತು. ಕಂಪನಿಯು ಬಿಗ್‍ಬಾಸ್ ಸೀಸನ್ 13ನ ಸಹ ಪ್ರಾಯೋಜಕತ್ವವನ್ನೂ ವಹಿಸಿಕೊಂಡಿದೆ. ವ್ಯಾಪಾರಿಗಳಿಗೆ ಪರಿಪೂರ್ಣ ಫಿನ್‍ಟೆಕ್ ಪ್ಲಾಟ್‍ಫಾರಂ ಆಗಿ ರೂಪುಗೊಳ್ಳುವ ದೃಷ್ಟಿಯಿಂದ ಕಂಪನಿಯು 3/6/12 ತಿಂಗಳುಗಳ ಅವಧಿಯ ಕಡಿಮೆ ಬಡ್ಡಿಯ ಡಿಜಿಟಲ್ ಸಾಲವನ್ನು ಕೂಡಾ ನೀಡುತ್ತಿದೆ. ಇದು ಪಿ2ಪಿ ಸಾಲ ಉತ್ಪನ್ನವಾಗಿದ್ದು, ಇದರ ಅನ್ವಯ ವ್ಯಾಪಾರಿಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಪಾವತಿ ಮಾಡುವ ಮೂಲಕ ಹೆಚ್ಚುವರಿ ನಿಧಿಗೆ ಶೇಕಡ 12ರಷ್ಟು ಅಧಿಕ ಬಡ್ಡಿ ಪಡೆಯಬಹುದಾಗಿದೆ. ಜತೆಗೆ ವಿಮೆ ಹಾಗೂ ಖರೀದಿ ಕಾರ್ಡ್‍ಗಳ ಸೌಲಭ್ಯವನ್ನೂ ಪಡೆಯಲಿದ್ದಾರೆ.

6 ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ 2500 ಮಂದಿಯ ನೇಮಕ: ಭಾರತ್‍ಪೇ6 ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ 2500 ಮಂದಿಯ ನೇಮಕ: ಭಾರತ್‍ಪೇ

25 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸೇವೆ

25 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸೇವೆ

ಅಶ್ನೀರ್ ಗ್ರೋವೆರ್ ಮತ್ತು ಶಾಶ್ವತ್ ನರ್ಕಾಣಿ 2018ರಲ್ಲಿ ಆರಂಭಿಸಿದ ಭಾರತ್‍ಪೇ, ವಿತ್ತೀಯ ಸೇರ್ಪಡೆಯನ್ನು ಭಾರತದಲ್ಲಿ ವಾಸ್ತವಿಕ ನೆಲೆಯಲ್ಲಿ ಜಾರಿಗೊಳಿಸುವ ಉದ್ದೇಶವನ್ನು ಇರಿಸಿಕೊಂಡಿದೆ. ಪಾವತಿಗಳನ್ನು ಮಾಡಲು, ಸಾಲ ಹಾಗೂ ವಿಮಾ ಸೌಲಭ್ಯವನ್ನು ದೇಶದಲ್ಲಿ ತಳಹಂತದಲ್ಲಿ ವ್ಯಾಪಾರಿಗಳ ಮೂಲಕ ಒದಗಿಸುವ ಬದ್ಧತೆಯನ್ನು ಹೊಂದಿದೆ.

ಪ್ರಸ್ತುತ ಭಾರತ್‍ಪೇ ಬೆಂಗಳೂರು, ದೆಹಲಿ, ಹೈದರಾಬಾದ್, ಪುಣೆ, ಮುಂಬೈ, ಜೈಪುರ, ಅಹ್ಮದಾಬಾದ್, ಇಂಧೋರ್, ಭೋಪಾಲ್, ನಾಗ್ಪುರ, ಚಂಡೀಗಢ, ಜೋಧಪುರ, ಲೂಧಿಯಾನಾ, ಸೂರತ್, ಪಾಟ್ನಾ, ಕರೀಂನಗರ, ಮೈಸೂರು, ವಿಶಾಖಪಟ್ಟಣಂ, ವಿಜಯವಾಡ ಮತ್ತು ವಾರಂಗಲ್‍ನಲ್ಲಿ 25 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸೇವೆ ಒದಗಿಸುತ್ತಿದೆ.

ಒಂದು ಲಕ್ಷ ರೂಪಾಯಿವರೆಗೂ ಸಾಲ

ಒಂದು ಲಕ್ಷ ರೂಪಾಯಿವರೆಗೂ ಸಾಲ

ಭಾರತ್‍ಪೇನಿಂದ ಸಾಲವನ್ನು ಯಾವುದೇ ಭದ್ರತೆ ಪಡೆಯದೇ ವಿತರಿಸಲಾಗುತ್ತದೆ. ಭಾರತ್‍ಪೇ ಕ್ಯೂಆರ್‍ನಲ್ಲಿ ಚಿಲ್ಲರೆ ಮಾರಾಟಗಾರರು ನಡೆಸುವ ವಹಿವಾಟಿನ ಆಧಾರದಲ್ಲಿ ಅವರ ಸಾಲದ ಮಿತಿಯನ್ನು ನಿರ್ಧರಿಸಲಾಗುತ್ತದೆ. ಸರಾಸರಿ ಮಾಸಿಕ ಶೇಕಡ 1.67ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಇದು ದೇಶದಲ್ಲಿ ವ್ಯಾಪಾರಿಗಳಿಗೆ ದೊರಕುವ ಅತ್ಯುತ್ತಮ ಸಾಲಸೌಲಭ್ಯವಾಗಿದೆ. ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿನಿಂದ ಅರಂಭಿಸಿ ಒಂದು ಲಕ್ಷ ರೂಪಾಯಿವರೆಗೂ ಸಾಲ ನೀಡಲಾಗುತ್ತದೆ. ಈ ವಿನೂತನ ಯೋಜನೆಗಾಗಿ ಕಂಪನಿಯು ಅಪೋಲೊ ಫಿನ್‍ವೆಸ್ಟ್ ಜತೆ ಪಾಲುದಾರಿಕೆ ಮಾಡಿಕೊಂಡಿದೆ.

ಭಾರತ್‍ಪೇನಿಂದ ಸಣ್ಣ ವ್ಯಾಪಾರಿಗಳಿಗೆ 70 ಕೋಟಿ ರೂಪಾಯಿ ಸಾಲಭಾರತ್‍ಪೇನಿಂದ ಸಣ್ಣ ವ್ಯಾಪಾರಿಗಳಿಗೆ 70 ಕೋಟಿ ರೂಪಾಯಿ ಸಾಲ

English summary
BharatPe shopkeepers won 10,000 Gold & Silver coins this Festive Season for accepting payments through their BharatPe QR codes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X