• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ್‍ಪೇನಿಂದ ಸಣ್ಣ ವ್ಯಾಪಾರಿಗಳಿಗೆ 70 ಕೋಟಿ ರೂಪಾಯಿ ಸಾಲ

|

ಬೆಂಗಳೂರು, ಜುಲೈ 14: ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಭಾರತೀಯ ಫಿನ್‍ಟೆಕ್ ಕಂಪನಿ ಭಾರತ್‍ಪೇ, ಆಫ್‍ಲೈನ್ ಚಿಲ್ಲರೆ ಮಾರಾಟಗಾರರಿಗೆ ಪ್ರಸಕ್ತ ವರ್ಷದಲ್ಲಿ 70 ಕೋಟಿ ರೂಪಾಯಿ ಸಾಲ ವಿತರಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ತಿಂಗಳ ಕೊನೆಯ ಒಳಗಾಗಿ ಸಣ್ಣ ಹಾಗೂ ಮಧ್ಯಮ ಗಾತ್ರದ ವ್ಯಾಪಾರಿಗಳು ಈ ಪ್ಲಾಟ್‍ಫಾರಂನಿಂದ 7 ಕೋಟಿ ರೂಪಾಯಿ ಸಾಲ ಪಡೆಯಲಿದ್ದಾರೆ.

"ಕೆಲ ತಿಂಗಳ ಹಿಂದಿನವರೆಗೂ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಸಾಲ ಸೌಲಭ್ಯ ಅಸ್ತಿತ್ವದಲ್ಲಿರಲಿಲ್ಲ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಇರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಒಂದು ಕೋಟಿಗೂ ಅಧಿಕ ಚಿಲ್ಲರೆ ಮಾರಾಟಗಾರರ ಪ್ರಗತಿಗೆ ಹಂತ ಹಂತವಾಗಿ ನೆರವಾಗುವ ಮೂಲಕ ತ್ವರಿತ ವಹಿವಾಟು ನಡೆಸುವ ಅವಕಾಶ ಕಲ್ಪಿಸುತ್ತಿದ್ದೇವೆ" ಎಂದು ಭಾರತ್‍ಪೇ ಸಹಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ನೀರ್ ಗ್ರೋವರ್ ಹೇಳಿದ್ದಾರೆ. ಇತ್ತೀಚೆಗೆ ಆಫ್‍ಲೈನ್ ಸಾಲ ಮಂಜೂರಾತಿ ಮತ್ತು ವಿತರಣೆಗೆ ಪ್ರಾಯೋಗಿಕ ಯೋಜನೆಯಿಂದ 700 ಮಂದಿಗೆ 2.5 ಕೋಟಿ ರೂಪಾಯಿ ಸಾಲ ನೀಡಿತ್ತು.

6 ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ 2500 ಮಂದಿಯ ನೇಮಕ: ಭಾರತ್‍ಪೇ

ಹೊಸ ಯೋಜನೆಗಾಗಿ ಭಾರತ್‍ಪೇ ಅಪೋಲೊ ಫಿನ್‍ವೆಸ್ಟ್ ಜತೆ ಪಾಲುದಾರಿಕೆ ಮಾಡಿಕೊಂಡಿದ್ದು, 10 ಸಾವಿರ ರೂಪಾಯಿನಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲ ನೀಡುವ ಇನ್ನೂ ಹೆಚ್ಚಿನ ಪಾಲುದಾರರನ್ನು ಹೊಂದುವ ಕಾರ್ಯ ಪ್ರಗತಿಯಲ್ಲಿದೆ.

ಸಾಲ ನೀಡಿಕೆ ಲೈಸನ್ಸ್ ಪಡೆದ ಬಳಿಕ, ಇತರ ಹಣಕಾಸು ಸಂಸ್ಥೆಗಳ ಜತೆ ಸಹಭಾಗಿತ್ವದಲ್ಲಿ ಸಹ- ಸಾಲ ನೀಡಲು ಉದ್ದೇಶಿಸಿದ್ದು, ಈ ಬಡ್ಡಿದರವನ್ನು ನಿಯಂತ್ರಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆಸಲಿದೆ.

10 ಲಕ್ಷಕ್ಕೂ ಅಧಿಕ ಸಣ್ಣ ವ್ಯಾಪಾರಿಗಳ ಜಾಲ

10 ಲಕ್ಷಕ್ಕೂ ಅಧಿಕ ಸಣ್ಣ ವ್ಯಾಪಾರಿಗಳ ಜಾಲ

ಭಾರತ್‍ಪೇ 10 ಲಕ್ಷಕ್ಕೂ ಅಧಿಕ ಸಣ್ಣ ವ್ಯಾಪಾರಿಗಳ ಜಾಲವನ್ನು ಹೊಂದಿದ್ದು, ಇವರು ಸರ್ಕಾರ ಘೋಷಿಸುವುದಕ್ಕಿಂತ ತೀರಾ ಮುಂಚಿತವಾಗಿಯೇ ಶೇಕಡ ಶೂನ್ಯ ಎಂಡಿಆರ್‍ನಲ್ಲಿ ಕಂಪನಿಯಿಂದ ಯುಪಿಐ ಪಾವತಿಗಳನ್ನು ಕಳೆದ ಹತ್ತು ತಿಂಗಳಿನಿಂದ ಪಡೆಯುತ್ತಿದ್ದಾರೆ. ಈ ಜಾಲ ಇದೀಗ ಕಂಪನಿಗೆ ಸಾಲ ನೀಡಿಕೆಗೆ ಭರವಸೆಯ ಅವಕಾಶವನ್ನು ಕಲ್ಪಿಸಿದೆ. "ಚಿಲ್ಲರೆ ಮಾರಾಟಗಾರರ ಜತೆ ನಿಕಟವಾದ ಸಂಬಂಧವನ್ನು ಹೊಂದಿರುವ ನಾವು, ದೇಶದಲ್ಲಿ ಡಿಜಿಟಲ್ ಪಾವತಿಗೆ ಮತ್ತು ಫಿನ್‍ಟೆಕ್ ಕಂಪನಿಗೆ ಉತ್ತೇಜನ ನೀಡಲು 0%ಎಂಡಿಆರ್ ಇರುವ ಏಕೈಕ ಮಾರ್ಗ ಎಂದು ಬಲವಾಗಿ ನಂಬಿದ್ದೇವೆ. ಕಳೆದ ಹತ್ತು ತಿಂಗಳಿನಿಂದ ಭಾರತ್‍ಪೇ, ವ್ಯಾಪಾರಿಗಳ ಎಂಡಿಆರ್ ವೆಚ್ಚವನ್ನು ಭರಿಸುತ್ತಿದ್ದು, ಇತ್ತೀಚೆಗೆ ಮಂಡಿಸಿದ ಬಜೆಟ್‍ನಲ್ಲಿ ಇದು ಉದ್ಯಮದ ರೂಢಿಯಾಗಿ ಪರಿಗಣಿಸಲ್ಪಟ್ಟಿದೆ" ಎಂದು ಅಶ್ನೀರ್ ವಿವರಿಸಿದ್ದಾರೆ.

ಯಾವುದೇ ಭದ್ರತೆ ಪಡೆಯದೇ ವಿತರಿಸಲಾಗುತ್ತದೆ

ಯಾವುದೇ ಭದ್ರತೆ ಪಡೆಯದೇ ವಿತರಿಸಲಾಗುತ್ತದೆ

ಭಾರತ್‍ಪೇನಿಂದ ಸಾಲವನ್ನು ಯಾವುದೇ ಭದ್ರತೆ ಪಡೆಯದೇ ವಿತರಿಸಲಾಗುತ್ತದೆ. ಭಾರತ್‍ಪೇ ಕ್ಯೂಆರ್‍ನಲ್ಲಿ ಚಿಲ್ಲರೆ ಮಾರಾಟಗಾರರು ನಡೆಸುವ ವಹಿವಾಟಿನ ಆಧಾರದಲ್ಲಿ ಅವರ ಸಾಲದ ಮಿತಿಯನ್ನು ನಿರ್ಧರಿಸಲಾಗುತ್ತದೆ. ಸರಾಸರಿ ಮಾಸಿಕ ಶೇಕಡ 1.67ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಇದು ದೇಶದಲ್ಲಿ ವ್ಯಾಪಾರಿಗಳಿಗೆ ದೊರಕುವ ಅತ್ಯುತ್ತಮ ಸಾಲಸೌಲಭ್ಯವಾಗಿದೆ. ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿನಿಂದ ಅರಂಭಿಸಿ ಒಂದು ಲಕ್ಷ ರೂಪಾಯಿವರೆಗೂ ಸಾಲ ನೀಡಲಾಗುತ್ತದೆ. ಈ ವಿನೂತನ ಯೋಜನೆಗಾಗಿ ಕಂಪನಿಯು ಅಪೋಲೊ ಫಿನ್‍ವೆಸ್ಟ್ ಜತೆ ಪಾಲುದಾರಿಕೆ ಮಾಡಿಕೊಂಡಿದೆ.

ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

25 ಲಕ್ಷ ವ್ಯಾಪಾರಿಗಳಿಗೆ ಸೇವೆ ಒದಗಿಸುವ ಗುರಿ

25 ಲಕ್ಷ ವ್ಯಾಪಾರಿಗಳಿಗೆ ಸೇವೆ ಒದಗಿಸುವ ಗುರಿ

ಈ ವರ್ಷದ ಕೊನೆಯ ಒಳಗಾಗಿ 25 ಲಕ್ಷ ವ್ಯಾಪಾರಿಗಳಿಗೆ ಸೇವೆ ಒದಗಿಸಲು ಕಾರ್ಯಯೋಜನೆ ಹಾಕಿಕೊಂಡಿದೆ. ಸಣ್ಣ ಮೊತ್ತದ ಅಲ್ಪಾವಧಿಯ ಸಾಲವನ್ನು ವ್ಯಾಪಾರಿಗಳಿಗೆ ವಿತರಿಸುವ ಯೋಜನೆಯನ್ನು ಘೋಷಿಸಿದೆ. ಇದು ಏಕೀಕೃತ ಪಾವತಿ ಇಂಟರ್‍ಫೇಸ್ ಮೂಲಕ ಪಾವತಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದು, ಗ್ರಾಹಕರು ಗೂಗಲ್‍ಪೇ, ಪೇಟಿಎಂ ಅಥವಾ ಫೋನ್‍ಪೇ ಹೀಗೆ ಯಾವುದೇ ಯುಪಿಐ ಆ್ಯಪ್ ಬಳಸಿಕೊಂಡು ಪಾವತಿ ಮಾಡಬಹುದಾಗಿದೆ.

13 ನಗರಗಳಲ್ಲಿ ತನ್ನ ಕಾರ್ಯಾಚರಣೆ ಆರಂಭ

13 ನಗರಗಳಲ್ಲಿ ತನ್ನ ಕಾರ್ಯಾಚರಣೆ ಆರಂಭ

ಭಾರತ್‍ಪೇ 13 ನಗರಗಳಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಪುಣೆ, ಮುಂಬೈ, ಜೈಪುರ, ಅಹ್ಮದಾಬಾದ್, ಇಂದೋರ್, ಭೋಪಾಲ್, ನಾಗ್ಪುರ, ಚಂಡೀಗಢ, ಮೈಸೂರು ಮತ್ತು ವಿಶಾಖಪಟ್ಟಣಂ ನಗರಗಳ 9 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸೇವೆ ಸಲ್ಲಿಸುತ್ತಿದೆ. ಭಾರತ್‍ಪೇ ತನ್ನ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಸುಲಭವಾಗಿ ಹಾಗೂ ಡಿಜಿಟಲ್ ಮಾರ್ಗದ ಮೂಲಕ ನಿರ್ವಹಿಸಲು ನೆರವಾಗುತ್ತಿದೆ.

English summary
BharatPe, the fastest growing ‘Indian’ fintech company serving offline retailers with payments, lending and other financial services, today announced that it is set to disburse loans worth over Rs.70 crores in 2019. Within this month, small and mid-size shopkeepers are expected to avail loans of over Rs. 7 crores from the platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X