ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಅಧಿಸೂಚನೆ ಬಳಸುವ ಮೊದಲ ವ್ಯಾಪಾರಿ ಕಂಪನಿ ಭಾರತ್‍ಪೇ

|
Google Oneindia Kannada News

ಬೆಂಗಳೂರು, ಫೆಬ್ರವರಿ 7: ತನ್ನ ಎಲ್ಲ ವ್ಯಾಪಾರಿಗಳ ಜತೆ ಸಂವಹನಕ್ಕೆ ಭಾರತ್ ಪೇ ವಾಟ್ಸಾಪ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಆರಂಭಿಸಿದೆ. ಇದೀಗ ಎಲ್ಲ ವಹಿವಾಟು ಅಧಿಸೂಚನೆಗಳು, ಓಟಿಪಿಗಳು, ದಿನದ ಕೊನೆಯ ಬ್ಯಾಲೆನ್ಸ್ ಮತ್ತು ಸಾಲದ ಬಾಕಿಯಂಥ ಎಲ್ಲ ವಿವರಗಳು ಭಾರತ್‍ಪೇಯ ಬಿಳಿಪಟ್ಟಿಯ ವಾಟ್ಸಾಪ್ ಸಂಪರ್ಕ ಸಂಖ್ಯೆಯ ಮೂಲಕ ಲಭ್ಯವಾಗಲಿವೆ.

ವ್ಯಾಪಾರಿಗಳು ಎಸ್‍ಎಂಎಸ್ ಹಾಗೂ ವಾಟ್ಸಾಪ್ ನೋಟಿಫಿಕೇಶನ್‍ಗಳನ್ನು ಎರಡು ವಾರಗಳ ಕಾಲ ಪಡೆಯಲಿದ್ದು, ಅವರು ಬಳಸುವ ದರಕ್ಕೆ ಅನುಗುಣವಾಗಿ ಕ್ರಮೇಣ ವ್ಯಾಪಾರಿ ಸಮುದಾಯವನ್ನು ವಾಟ್ಸಾಪ್ ಅಥವಾ ಎಸ್‍ಎಂಎಸ್ ವಲಯವಾಗಿ ವಿಂಗಡಿಸಲಾಗುತ್ತದೆ.

ರೀಟೈಲ್ ಗ್ರಾಹಕರಿಗೆ ಎಸ್ಬಿಐನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ರೀಟೈಲ್ ಗ್ರಾಹಕರಿಗೆ ಎಸ್ಬಿಐನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ

ಈ ಬಗ್ಗೆ ಹೇಳಿಕೆ ನೀಡಿದ ಭಾರತ್‍ಪೇ ಸಿಇಓ ಮತ್ತು ಸಹಸಂಸ್ಥಾಪಕ ಅಶ್ನೀರ್ ಗ್ರೋವೆರ್, "ವ್ಯಾಪಾರಿಗಳ ಜೀವನ ಸುಲಭವಾಗುವಂತೆ ಮಾಡಲು ನಾವು ಸದಾ ನೋಡುತ್ತಿರುತ್ತೇವೆ. ಭಾರತ ಇದೀಗ ವಾಟ್ಸಾಪ್‍ನಿಂದ ಚಾಲಿತವಾಗಿದೆ. ಆದ್ದರಿಂದ ನಮ್ಮ ವ್ಯಾಪಾರಿ ಸಮುದಾಯದ ಜತೆ ಸಂವಹನಕ್ಕೆ ನಾವು ವಾಟ್ಸಾಪ್ ಆಯ್ಕೆ ಮಾಡಿಕೊಂಡಿರುವುದು ಸಹಜ. ಅವರ ಹಣಕಾಸು ಅಗತ್ಯತೆಗಳಿಗಾಗಿ ನಾವು ಅವರ ಜತೆ ಆಳವಾಗಿ ತೊಡಗಿಸಿಕೊಂಡಿದ್ದೇವೆ. ವಾಟ್ಸಾಪ್ ಸಂವಹನವನ್ನು ಕ್ಲಿಕ್ ಮಾಡುವ ದರ ಎಸ್‍ಎಂಎಸ್ ನೋಡುವ ದರಕ್ಕಿಂತ 15-20 ಪಟ್ಟು ಅಧಿಕ. ಇದು ಈಗಾಗಲೇ ವಿಭಿನ್ನ ವಿಶ್ವಾಸಾರ್ಹತೆಯನ್ನೂ ಪಡೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಏಕಮುಖ ಸಂವಹನ ವ್ಯವಸ್ಥೆಯಾಗಿರುವ ಎಸ್‍ಎಂಎಸ್‍ಗಿಂತ ಭಿನ್ನವಾಗಿ ಇದು ದ್ವಿಮುಖ ಸೇವಾ ವಾಹಿನಿಯಾಗಿದೆ" ಎಂದು ವಿವರಿಸಿದರು.

ಸಹಸಂಸ್ಥಾಪಕ ಅಶ್ನೀರ್ ಗ್ರೋವೆರ್

ಸಹಸಂಸ್ಥಾಪಕ ಅಶ್ನೀರ್ ಗ್ರೋವೆರ್

"ಪೇಟಿಎಂ, ಫೋನ್‍ಪೇ ಮತ್ತು ಗೂಗಲ್‍ಪೇ ವಾಟ್ಸಾಪ್‍ನತ್ತ ಮುಖಮಾಡುವ ಸಾಧ್ಯತೆ ಇಲ್ಲದಿರುವುದರಿಂದ ವಾಟ್ಸಾಪ್ ನಮಗೆ ತೀರಾ ಪ್ರಮುಖ ಹಾಗೂ ತಂತ್ರಗಾರಿಕೆಯ ನಡೆಯೂ ಆಗಿದೆ. ಈ ಸಂಸ್ಥೆಗಳು ವಾಟ್ಸಾಪ್ ಬಗ್ಗೆ ಭೀತಿ ಹೊಂದಿದ್ದು, ವಾಟ್ಸಾಪ್ ಕ್ರಮೇಣ ಯುಪಿಐನಲ್ಲಿ ಗ್ರಾಹಕ ವಹಿವಾಟನ್ನು ಕಿತ್ತುಕೊಳ್ಳಲಿದೆ ಮತ್ತು ಉದಯೋನ್ಮುಖ ಮುಂಚೂಣಿ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ ಎಂಬ ಭೀತಿ ಇದೆ. ಭಾರತ್‍ಪೇ ತನ್ನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಯೋಚಿಸುತ್ತಿರುವುದರಿಂದ ಇದು ಅವರ ಪಾಲಿಗೆ ವೈರುದ್ಧ್ಯಕ್ಕೂ ಕಾರಣವಾಗುತ್ತದೆ. ಆದ್ದರಿಂದ ವ್ಯಾಪಾರಿ ವಲಯಕ್ಕೆ ನಾಯಕತ್ವ ವಿಸ್ತರಿಸಲಾಗಿದೆ. ಪರಿಮಾಣದಲ್ಲಿ ಭಾರತ್‍ಪೇ ಬಹುಶಃ ಭಾರತದಲ್ಲಿ ವಾಟ್ಸಾಪ್‍ಗೆ ಅತಿದೊಡ್ಡ ಗ್ರಾಹಕನಾಗಲಿದೆ" ಎಂದು ಹೇಳಿದರು.

2018ರಲ್ಲಿ ಸ್ಥಾಪನೆಯಾದ ಭಾರತ್ ಪೇ

2018ರಲ್ಲಿ ಸ್ಥಾಪನೆಯಾದ ಭಾರತ್ ಪೇ

ಭಾರತ್‍ಪೇ ಸಂಸ್ಥೆಯನ್ನು 2018ರಲ್ಲಿ ಅಶ್ನೀರ್ ಗ್ರೋವೆರ್ ಮತ್ತು ಶಾಶ್ವತ್ ನಕ್ರಾಣಿ ಸ್ಥಾಪಿಸಿದ್ದು, ಎಲ್ಲ ಭಾರತೀಯ ವ್ಯಾಪಾರಿಗಳಿಗೆ ವಿತ್ತೀಯ ಸೇರ್ಪಡೆಯನ್ನು ಸಾಕಾರಗೊಳಿಸುವ ಉದ್ದೇಶವನ್ನು ಇದು ಹೊಂದಿದೆ. ಭಾರತ್‍ಪೇ ಭಾರತದ ಮೊಟ್ಟಮೊದಲ ಯುಪಿಐ ಜತೆಗೆ ಕಾರ್ಯನಿರ್ವಹಿಸಬಹುದಾದ ಕ್ಯೂಆರ್ ಕೋಡ್ ಪರಿಚಯಿಸಿದೆ. ಜತೆಗೆ ಮೊಟ್ಟಮೊದಲ ಬಾರಿಗೆ ಶೂನ್ಯ ಎಂಡಿಆರ್ ಪಾವತಿ ಸ್ವೀಕೃತಿ ಸೇವೆ, ಮೊದಲ ವ್ಯಾಪಾರಿ ನಗದು ಸಾಲ ಉತ್ಪನ್ನದ ಯುಪಿಐ ಪಾವತಿ ಸೇವೆ ಮತ್ತು ಪಿ2ಪಿ ಎನ್‍ಬಿಎಫ್‍ಸಿ ಹೂಡಿಕೆ ಉತ್ಪನ್ನವನ್ನು ವ್ಯಾಪಾರಿಗಳಿಗೆ ಒದಗಿಸಿದ್ದು, ಇದಕ್ಕೆ ಶೇಕಡ 12ರವರೆಗೂ ಬಡ್ಡಿದರ ನೀಡುತ್ತದೆ.

30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳಿಗೆ ಸೇವೆ

30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳಿಗೆ ಸೇವೆ

ಪ್ರಸ್ತುತ ಭಾರತದಾದ್ಯಂತ 30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳಿಗೆ ಸೇವೆ ಒದಗಿಸುತ್ತಿದೆ. 2019ರಲ್ಲಿ ಕಂಪನಿಯ ವಹಿವಾಟು 30 ಪಟ್ಟು ಹೆಚ್ಚಿದ್ದು, ಯುಪಿಐ ಆಫ್‍ಲೈನ್ ವಲಯದಲ್ಲಿ ಅಗ್ರಗಣ್ಯ ಸಂಸ್ಥೆ ಎನಿಸಿಕೊಂಡಿದೆ. ಪ್ರತಿ ತಿಂಗಳು 4 ಕೋಟಿಗೂ ಅಧಿಕ ಯುಪಿಐ ವಹಿವಟನ್ನು ಸಂಸ್ಕರಿಸುತ್ತಿದೆ. (ವಾರ್ಷಿಕ ಟಿಪಿವಿ 2.5 ಶತಕೋಟಿ ಡಾಲರ್), ಕಂಪನಿ ಈಗಾಗಲೇ 17500 ಸಾಲಗಳನ್ನು ಕಳೆದ ನಾಲ್ಕು ತಿಂಗಳಲ್ಲಿ ವಿತರಿಸಿದ್ದು, 2020ರ ಮಾರ್ಚ್ ವೇಳೆಗೆ 250 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಿದೆ.

7 ಲಕ್ಷ ಆಫ್‍ಲೈನ್ ವ್ಯಾಪಾರಿಗಳಿದ್ದಾರೆ.

7 ಲಕ್ಷ ಆಫ್‍ಲೈನ್ ವ್ಯಾಪಾರಿಗಳಿದ್ದಾರೆ.

ಭಾರತ್‍ಪೇ ತನ್ನ ಆಫ್‍ಲೈನ್ ವ್ಯಾಪಾರಿ ನೆಲೆಯನ್ನು ಕ್ಷಿಪ್ರವಾಗಿ ವೃದ್ಧಿಸಿಕೊಂಡಿದ್ದು, ಇದುವರೆಗೆ 7 ಲಕ್ಷ ಆಫ್‍ಲೈನ್ ವ್ಯಾಪಾರಿಗಳನ್ನು ಹೊಂದಿದೆ. ಈ ಪೈಕಿ ಆರೋಗ್ಯಕರ ಶೇಕಡಾವಾರು ವ್ಯಾಪಾರಿಗಳು ಈ ಪ್ಲಾಟ್‍ಫಾರಂನಲ್ಲಿ ಸಕ್ರಿಯರಾಗಿದ್ದಾರೆ. ಇದು ಏಕೀಕೃತ ಪಾವತಿ ಇಂಟರ್‍ಫೇಸ್ ಮೂಲಕ ಪಾವತಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದು, ಗ್ರಾಹಕರು ಗೂಗಲ್‍ಪೇ, ಪೇಟಿಎಂ ಅಥವಾ ಫೋನ್‍ಪೇ ಹೀಗೆ ಯಾವುದೇ ಯುಪಿಐ ಆ್ಯಪ್ ಬಳಸಿಕೊಂಡು ಪಾವತಿ ಮಾಡಬಹುದಾಗಿದೆ.

English summary
BharatPe has announced that it has moved all of its communication with merchants to WhatsApp from February, 1, 2020. With this BharatPe becomes the 1st merchant focused Fintech to use WhatsApp as default mode of communication.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X