• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

6 ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ 2500 ಮಂದಿಯ ನೇಮಕ: ಭಾರತ್‍ಪೇ

|

ಬೆಂಗಳೂರು, ಜುಲೈ 9: ಭಾರತದ ಅತಿದೊಡ್ಡ ವ್ಯಾಪಾರಿ ಸೇವಾ ಮತ್ತು ಯುಪಿಐ ಪಾವತಿ ಆ್ಯಪ್ ಆಗಿರುವ ಭಾರತ್ ಪೇ, ದಕ್ಷಿಣ ಭಾರತದಲ್ಲಿ ಮುಂದಿನ ಆರು ತಿಂಗಳ ಅವಧಿಯಲ್ಲಿ 2500 ಮಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ.

ಭಾರತೀಯ ಫಿನ್‍ಟೆಕ್ ಕಂಪನಿಯಾದ ಭಾರತ್‍ಪೇ ಆಫ್‍ಲೈನ್ ಚಿಲ್ಲರೆ ಮಾರಾಟಗಾರರು ಮತ್ತು ವ್ಯವಹಾರದಾರರಿಗೆ ಸೇವೆ ಒದಗಿಸುತ್ತಿದೆ. ಬೆಂಗಳೂರು ಹಾಗೂ ಹೈದರಾಬಾದ್‍ನಲ್ಲಿ ತಲಾ 1000 ಮಂದಿ ಹಾಗೂ ಇತರೆ ನಗರಗಳಲ್ಲಿ 500 ಮಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

ಭಾರತ್‍ಪೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ ಈ ಕುರಿತ ಮಾತನಾಡಿ, "ಪ್ರತಿಯೊಬ್ಬ ಆಫ್‍ಲೈನ್ ವ್ಯಾಪಾರಿಗಳಿಗೆ ಕೂಡಾ ಸುಲಲಿತವಾದ ಯುಪಿಐ ಪಾವತಿ ವ್ಯವಸ್ಥೆಯನ್ನು ಒದಗಿಸುವುದು ನಮ್ಮ ದೃಷ್ಟಿಕೋನವಾಗಿದೆ. ಭಾರತದಲ್ಲಿ ಪ್ರಬಲ ಹಾಗೂ ಬೆಳೆಯುತ್ತಿರುವ ಅಸ್ತಿತ್ವದಿಂದಾಗಿ, ದಕ್ಷಿಣ ಭಾರತದಾದ್ಯಂತ ನಮ್ಮ ಸೇವೆಯನ್ನು ಕ್ಷಿಪ್ರವಾಗಿ ವಿಸ್ತರಿಸುವುದು ನಮ್ಮ ಉದ್ದೇಶ ಎಂದಿದ್ದಾರೆ.

2500ಕ್ಕೂ ಹೆಚ್ಚು ಮಂದಿಯನ್ನು ನೇಮಕ

2500ಕ್ಕೂ ಹೆಚ್ಚು ಮಂದಿಯನ್ನು ನೇಮಕ

ಹೊಸದಾಗಿ 2500ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಡಿಜಿಟಲ್ ಪಾವತಿಯನ್ನು ನಗದಿನಷ್ಟೇ ಮೂಲ ವಿಧಾನವಾಗಿ ಪರಿವರ್ತಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಚಾಲನೆ ನೀಡುವ ಪ್ರಯತ್ನವಾಗಿ, ಉತ್ತಮ ತರಬೇತಿ ಪಡೆದ ಮಾರಾಟ ಪ್ರತಿನಿಧಿಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ಇವರು ವ್ಯಾಪಾರಿಗಳನ್ನು ತಲುಪುವ ಜತೆಗೆ ಅವರೊಂದಿಗೆ ಉತ್ತಮ ಸಂಬಂಧವನ್ನು ನಿರ್ವಹಿಸುವಲ್ಲಿ ಕೂಡಾ ನೆರವಾಗಲಿದ್ದಾರೆ" ಎಂದು ಹೇಳಿದ್ದಾರೆ.

 2000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ

2000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ

ಭಾರತ್ ಪೇ: ಸುಮಾರು 2000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ತನ್ನ ಮಾಲೀಕತ್ವದ ಅಂತರ ಕಾರ್ಯನಿರ್ವಹಣೆ ಕ್ಯೂಆರ್ ಕೋಡ್ ಹಾಗೂ ವ್ಯಾಪಾರಿ ಸ್ನೇಹಿ ಅಪ್ಲಿಕೇಶನ್ ಮೂಲಕ, ಭಾರತ್‍ಪೇ ತನ್ನ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಸುಲಭವಾಗಿ ಹಾಗೂ ಡಿಜಿಟಲ್ ಮಾರ್ಗದ ಮೂಲಕ ನಿರ್ವಹಿಸಲು ನೆರವಾಗುತ್ತಿದೆ.

ಭಾರತ್ ಪೇ 11 ಶಾಪ್ ಕೀಪರ್ ಗಳಿಗೆ ಇಂಗ್ಲೆಂಡ್ ಪ್ರವಾಸ ಬಹುಮಾನ

 13 ನಗರಗಳಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ

13 ನಗರಗಳಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ

ಭಾರತ್‍ಪೇ 13 ನಗರಗಳಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಪುಣೆ, ಮುಂಬೈ, ಜೈಪುರ, ಅಹ್ಮದಾಬಾದ್, ಇಂದೋರ್, ಭೋಪಾಲ್, ನಾಗ್ಪುರ, ಚಂಡೀಗಢ, ಮೈಸೂರು ಮತ್ತು ವಿಶಾಖಪಟ್ಟಣಂ ನಗರಗಳ 9 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸೇವೆ ಸಲ್ಲಿಸುತ್ತಿದೆ.

 25 ಲಕ್ಷ ವ್ಯಾಪಾರಿಗಳಿಗೆ ಸೇವೆ ಒದಗಿಸುವ ಗುರಿ

25 ಲಕ್ಷ ವ್ಯಾಪಾರಿಗಳಿಗೆ ಸೇವೆ ಒದಗಿಸುವ ಗುರಿ

ಈ ವರ್ಷದ ಕೊನೆಯ ಒಳಗಾಗಿ 25 ಲಕ್ಷ ವ್ಯಾಪಾರಿಗಳಿಗೆ ಸೇವೆ ಒದಗಿಸಲು ಕಾರ್ಯಯೋಜನೆ ಹಾಕಿಕೊಂಡಿದೆ. ಸಣ್ಣ ಮೊತ್ತದ ಅಲ್ಪಾವಧಿಯ ಸಾಲವನ್ನು ವ್ಯಾಪಾರಿಗಳಿಗೆ ವಿತರಿಸುವ ಯೋಜನೆಯನ್ನು ಘೋಷಿಸಿದೆ.

ಇದು ಏಕೀಕೃತ ಪಾವತಿ ಇಂಟರ್‍ಫೇಸ್ ಮೂಲಕ ಪಾವತಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದು, ಗ್ರಾಹಕರು ಗೂಗಲ್‍ಪೇ, ಪೇಟಿಎಂ ಅಥವಾ ಫೋನ್‍ಪೇ ಹೀಗೆ ಯಾವುದೇ ಯುಪಿಐ ಆ್ಯಪ್ ಬಳಸಿಕೊಂಡು ಪಾವತಿ ಮಾಡಬಹುದಾಗಿದೆ.

ಭಾರತ್ ಪೇ ನಿಂದ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BharatPe has announced that it plans to hire 2,500 new employees in the next 6 months as part of its aggressive expansion strategy across South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more