• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಷ್ ನಿಂದ ಭಾರತದಲ್ಲಿ 100 ಮಿಲಿಯನ್ ಯುರೋ ಹೂಡಿಕೆ

|

ಬೆಂಗಳೂರು, ನವೆಂಬರ್ 20: ತಂತ್ರಜ್ಞಾನ ಮತ್ತು ಸೇವಾ ಪೂರೈಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ ಬೆಳೆಯುತ್ತಿರುವ ಮೂಲಸೌಕರ್ಯ ಮತ್ತು ಗ್ರಾಹಕ ಬೇಡಿಕೆಯನ್ನು ಆಧರಿಸಿ ಸ್ಮಾರ್ಟ್ ಸಲೂಷನ್ಸ್ ಗಳೊಂದಿಗೆ ಮೊಬಿಲಿಟಿ ಬ್ಯುಸಿನೆಸ್‍ನಿಂದಾಚೆಗೆ ಸಾಕಷ್ಟು ಪ್ರಗತಿ ಸಾಧಿಸುವತ್ತ ದಾಪುಗಾಲು ಇಟ್ಟಿದೆ. ಭಾರತದಲ್ಲಿ ಸುಮಾರು 700 ಮಿಲಿಯನ್ ಯುರೋ ಹೂಡಿಕೆ ಮಾಡಲು ಸಂಸ್ಥೆ ಮುಂದಾಗಿದೆ.

ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್‍ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು ಮಾತನಾಡಿ, "ಹಾರ್ಡ್‍ವೇರ್ ಗಮನ ಕೇಂದ್ರೀಕೃತ ವ್ಯವಹಾರದಿಂದ ಸೇವೆ ಮತ್ತು ದತ್ತಾಂಶಗಳ ಮೇಲೆ ಹೆಚ್ಚಿನ ಗಮನ ಹೊಂದುವ ಕಡೆಗೆ ನಮ್ಮ ವಹಿವಾಟು ಅಪಾರ ಪರಿವರ್ತನೆಯ ಪ್ರಕ್ರಿಯೆಯಲ್ಲಿದೆ. ನಾವು ಹೊಸತಲೆಮಾರಿಗೆ ಪೂರಕವಾಗಿ ಗ್ರೀನ್‍ಫೀಲ್ಡ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಾಮಥ್ರ್ಯವನ್ನು ಹೊಂದಿದ್ದೇವೆ" ಎಂದು ತಿಳಿಸಿದರು.

ಬಾಷ್ Q2 ತ್ರೈಮಾಸಿಕದಲ್ಲಿ ಶೇ 14ರಷ್ಟು ಆದಾಯ ಹೆಚ್ಚಳ

ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ)ಯಂತಹ ರಚನಾತ್ಮಕ ಸುಧಾರಣೆಗಳ ನಡುವೆ ಭಾರತ ಸರ್ಕಾರದ ಪ್ರಚೋದನೆಯೊಂದಿಗೆ ಚಾಲಿತಗೊಂಡು, ದೇಶ ಕೂಡ ಕ್ಷಿಪ್ರ ಪರಿವರ್ತನೆಗೆ ಒಳಗಾಗುತ್ತಿದೆ. ಇದು ಸಾಂಪ್ರದಾಯಿಕ ವಹಿವಾಟು ಕ್ಷೇತ್ರಗಳನ್ನು ಮೊಬಿಲಿಟಿಯಿಂದಾಚೆಗೆ ಡಿಜಿಟಲ್‍ಆಗಿ ಬದಲಾಯಿಸುತ್ತಿದೆ.

ಕಳೆದ ಕೆಲವು ವರ್ಷಗಳಲ್ಲಿ ಬಾಷ್ ಲಿಮಿಟೆಡ್ ಮೊಬಿಲಿಟಿ ಕ್ಷೇತ್ರದ ಹೊರತಾಗಿ ಶೇ.35 ರಷ್ಟು ಪ್ರಗತಿಯನ್ನು ಸಾಧಿಸಿದ್ದು, ಸಮೂಹ ಸಂಸ್ಥೆಯ ಒಟ್ಟಾರೆ ವ್ಯವಹಾರ ವೃದ್ಧಿಗೆ ಕಾರಣವಾಗಿದೆ. ಜಿಎಸ್‍ಟಿ ಸೇರಿದಂತೆ ಸರ್ಕಾರದ ಮತ್ತಿತರೆ ಉಪಕ್ರಮಗಳಿಂದಾಗಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಿದೆ.

ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?

ಭಾರತದಲ್ಲಿ ಬಾಷ್‍ನ ಉಪಕ್ರಮಗಳಲ್ಲಿ ಒಂದಾದ ಡಿಜಿಟಲ್ ಸಲೂಶನ್ಸ್ ಮೇಲ್‍ಸ್ತರದಲ್ಲಿ ಪ್ರಗತಿ ಕಾಣುತ್ತಿದೆ. ಸ್ಮಾಟ್ ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಉದ್ಯಮದ ಸಂಪರ್ಕ, ಇಂಧನ ಕ್ಷಮತೆ, ಸ್ಮಾರ್ಟ್ ಹೋಂ ಸೇರಿದಂತೆ ಇನ್ನಿತರೆ ಪರಿಹಾರಗಳನ್ನು ಬಾಷ್ ಪೂರೈಸುವತ್ತ ಮುನ್ನೆಜ್ಜೆ ಇಡುತ್ತಿದೆ.

ಪರ್ಸನಲೈಸ್ಡ್ ಹೋಂ ಅಪ್ಲೈಯನ್ಸಸ್

ಪರ್ಸನಲೈಸ್ಡ್ ಹೋಂ ಅಪ್ಲೈಯನ್ಸಸ್

ಸ್ಮಾರ್ಟ್ ಸೆಕ್ಯೂರಿಟಿ ಸಲೂಶನ್ಸ್

ಸಾರಿಗೆ ಮತ್ತು ಸ್ಮಾರ್ಟ್ ಸಿಟಿಗಳ ಸುಧಾರಣೆಗೆ ಸ್ಮಾರ್ಟ್ ಸೆಕ್ಯೂರಿಟಿ ಪರಿಹಾರಗಳನ್ನು ಬಾಷ್ ನೀಡುತ್ತಿದೆ. ಈ ಮೂಲಕ ಬಾಷ್ ದೇಶದ ಭದ್ರತಾ ವ್ಯವಸ್ಥೆಗೊಂದು ರೂಪುರೇಷೆಯನ್ನು ತಂದಿದೆ. ಅಲ್ಲದೇ ಸ್ಮಾರ್ಟ್ ಸೆಕ್ಯೂರಿಟಿ ಪರಿಹಾರಗಳೊಂದಿಗೆ ರೂಪಾಂತರದ ಇತಿಹಾಸವನ್ನು ಸೃಷ್ಟಿಸಿದೆ. ದೇಶದ ಜನಸಂಖ್ಯೆ 1.3 ಬಿಲಿಯನ್‍ಗೂ ಅಧಿಕ ಇದ್ದು, ಜನರು ಮೆಟ್ರೋ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹೋಗಿ ಬರುತ್ತಿರುತ್ತಾರೆ. ಈ ಜನರಿಗೆ ಭದ್ರತೆಯ ಪರಿಹಾರಗಳ ಅಗತ್ಯವಿದೆ. ಇಂತಹ ಜನರು ತಮ್ಮ ದೊಡ್ಡ ದೊಡ್ಡ ಡೇಟಾಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸೂಕ್ತವಾದ ಡಿಜಿಟಲ್ ತಂತ್ರಜ್ಞಾನಗಳನ್ನು ಬಯಸುತ್ತಾರೆ. ಇಂತಹ ತಂತ್ರಜ್ಞಾನಗಳನ್ನು ಒದಗಿಸುವ ಮೂಲಕ ಬಾಷ್ ಈ ಜನರಿಗೆ ನೆರವಾಗುತ್ತಿದೆ. ಇಂಟಲಿಜೆಂಟ್ ಕ್ಯಾಮೆರಾ, ಪಬ್ಲಿಕ್ ಅಡ್ರೆಸ್ ಸಿಸ್ಟಂ ಮತ್ತು ಅರ್ಬನ್ ಟ್ರಾನ್ಸ್‍ಪೋರ್ಟೇಶನ್ ಮತ್ತು ಸೀಮ್‍ಲೆಸ್ ಡಿಜಿಟಲ್ ಪ್ಲಾಟ್‍ಫಾರ್ಮ್ ಮೂಲಕ ಭದ್ರತಾ ಪರಿಹಾರಗಳನ್ನು ನೀಡುತ್ತಿದೆ.

ಎಲ್ಲಾ ವರ್ಗಗಳಿಗೂ ಪರ್ಸನಲೈಸ್ಡ್ ಹೋಂ ಅಪ್ಲೈಯನ್ಸಸ್ ಮತ್ತು ಡಿಜಿಟಲ್ ಸರ್ವೀಸಸ್

ಬಾಷ್ ಹಾರ್ಡ್‍ವೇರ್ ಪ್ಲಸ್ ಕಂಪನಿಯಾಗಿ ರೂಪುಗೊಳ್ಳುತ್ತಿದೆ. ಇದಲ್ಲದೇ ವೈಯಕ್ತಿಕವಾದ ಹೋಂ ಅಪ್ಲೈಯನ್ಸಸ್ ಮತ್ತು ಡಿಜಿಟಲ್ ಸೇವೆಗಳನ್ನು ಪ್ರತಿಯೊಂದು ಮನೆಗಳಿಗೆ ಅನ್ವಯವಾಗುವಂತಹ ರೀತಿಯಲ್ಲಿ ನೀಡುವ ಮೂಲಕ ಬಾಷ್ ಭಾರತದಲ್ಲಿ ತನ್ನ ಸೇವಾ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಈ ನಿಟ್ಟಿನಲ್ಲಿ ಬಾಷ್ ಹೋಂ ಅಪ್ಲೈಯನ್ಸಸ್ ವಿಭಾಗದಲ್ಲಿ 100 ದಶಲಕ್ಷ ಯೂರೋದಷ್ಟು ಬಂಡವಾಳವನ್ನು ಮುಂದಿನ 3-4 ವರ್ಷಗಳಲ್ಲಿ ತೊಡಗಿಸಲಿದೆ. ಈ ಬಂಡವಾಳವನ್ನು ಪರ್ಸನಲೈಸ್ಡ್ ಸಲೂಶನ್ಸ್, ಬ್ರ್ಯಾಂಡ್ ಬಿಲ್ಡಿಂಗ್, ತಂತ್ರಜ್ಞಾನ ಕೇಂದ್ರದ ಬಲವರ್ಧನೆ ಮತ್ತು ರೆಫ್ರಜರೇಟರ್ ಫ್ಯಾಕ್ಟರಿಯನ್ನು ಆರಂಭಿಸಲು ತೊಡಗಿಸಲಿದೆ. ಈ ಮೂಲಕ ಬಾಷ್ ಭಾರತದಲ್ಲಿ ಹಾರ್ಡ್‍ವೇರ್ ಪ್ಲಸ್ ಕಂಪನಿಯಾಗಿ ಮಾರ್ಪಡಲಿದೆ.

ಗ್ರಾಹಕ ಕೇಂದ್ರಿತ ಇಂಧನ ಪರಿಹಾರಗಳು

ಗ್ರಾಹಕ ಕೇಂದ್ರಿತ ಇಂಧನ ಪರಿಹಾರಗಳು

ಇಂಧನ ಕ್ಷಮತೆ ಮತ್ತು ಸುಸ್ಥಿರವಾದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಬಾಷ್ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ತನ್ನ 7 ವರ್ಷಗಳ ಯಶಸ್ವಿ ಗ್ರಾಹಕ ಸೇವೆಯನ್ನು ಸಲ್ಲಿಸಿರುವ ಬಾಷ್ ಸುಸ್ಥಿರವಾದ ಗುರಿ ಮತ್ತು ಇಂಧನ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಬಾಷ್ ಎನರ್ಜಿ ಅಂಡ್ ಬಿಲ್ಡಿಂಗ್ ಸಲೂಶನ್ಸ್ (ಬಿಇಬಿಎಸ್) ವಾಣಿಜ್ಯ ಮತ್ತು ಕೈಗಾರಿಕಾ ಸೌಲಭ್ಯಗಳನ್ನು ನೀಡುವ ಮೂಲಕ ಇಂಧನದ ಮೇಲಿನ ವೆಚ್ಚವನ್ನು ಕಡಿಮೆಯಾಗುವಂತೆ ಮಾಡಿದೆ. ಇದಲ್ಲದೇ, ಕಂಪನಿಯು ಇಂಧನ ಬಳಕೆಯನ್ನು ಸುಲಭವಾಗಿ ನಿರ್ವಹಣೆ ಮಾಡುವುದು ಮತ್ತು ನಿಯಂತ್ರಿಸುವ ಸೇವೆಗಳನ್ನು ಒದಗಿಸುತ್ತಿದೆ. ಬಾಷ್ ಎನರ್ಜಿ ಅಂಡ್ ಬಿಲ್ಡಿಂಗ್ ಸಲೂಶನ್ಸ್ (ಬಿಇಬಿಎಸ್) ಹಲವಾರು ಉದ್ದಿಮೆಗಳೊಂದಿಗೆ ಇಂಧನ ಉಳಿತಾಯಕ್ಕಾಗಿ ಪಾಲುದಾರಿಕೆಯನ್ನು ಹೊಂದಿದ್ದು, ಈ ಪಾಲುದಾರಿಕೆ ಸಂಖ್ಯೆ ಹೆಚ್ಚಳವಾಗುವಂತೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಾಷ್ ಸೌಲಭ್ಯಗಳನ್ನು ಭವಿಷ್ಯದ ಸ್ಮಾರ್ಟ್ ಫ್ಯಾಕ್ಟರಿಗಳಾಗುವತ್ತ ಪರಿವರ್ತಿಸುವುದು

ಚಲನಶೀಲತೆಯ ಹೊರತಾಗಿ ಬಾಷ್ ಕಾಂಪೊನೆಂಟ್ ಇಂಡಸ್ಟ್ರಿ 4.0 ಸ್ಪೇಸ್ ಅನ್ನು ತುಂಬಲಿದೆ. ಭವಿಷ್ಯದ ಆಟೋಮೇಷನ್, ಡಿಜಿಟಲೀಕರಣ ಕ್ಷೇತ್ರದಲ್ಲಿ ಬಾಷ್ ಮುಂಚೂಣಿಯನ್ನು ಕಾಯ್ದುಕೊಳ್ಳಲಿದೆ. ಎಐ ಮತ್ತು ಐಒಟಿಗಳು ಉತ್ಪಾದಕತೆ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಹೆಚ್ಚಿಲಿಸುವತ್ತ ದಾಪುಗಾಲು ಹಾಕಿದೆ. ಇಂಡಸ್ಟ್ರಿ 4.0 ಪರಿಹಾರಗಳನ್ನು ಒದಗಿಸುವ ಮೂಲಕ ಬಾಷ್ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಹೊಂದಿದೆ. ಇಕೋಸಿಸ್ಟಂ ಮತ್ತು ತಂತ್ರಜ್ಞಾನದ ಮೂಲಕ ಎಸ್‍ಎಂಇಗಳಿಗೆ ಮತ್ತು ಗ್ರಾಹಕರಿಗೆ ಡಿಜಿಟಲ್ ಪರಿಹಾರಗಳನ್ನು ನೀಡುತ್ತಿದೆ.

 ರೋಬೋಟಿಕ್ಸ್ ಮತ್ತು ಆಟೋಮೇಶನ್

ರೋಬೋಟಿಕ್ಸ್ ಮತ್ತು ಆಟೋಮೇಶನ್

ನಮ್ಮ ಕೆಲಸ ಮತ್ತು ಜೀವನದ ರೀತಿಯನ್ನು ಬದಲಾಯಿಸಿಕೊಳ್ಳಲು ರೋಬೋಟಿಕ್ಸ್ ಮತ್ತು ಆಟೋಮೇಶನ್

ರೋಬೋಟಿಕ್ಸ್ ಮತ್ತು ಆಟೋಮೇಶನ್ ಪರಿಹಾರಗಳನ್ನು ಅಳವಡಿಸುವ ಮೂಲಕ ಬಾಷ್ ಸ್ಮಾರ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಕೈಗಾರಿಕೆ ಪರಿಹಾರಗಳನ್ನು ನೀಡುತ್ತಿದೆ. ಸಮಗ್ರವಾದ ರೋಬೋಟ್ಸ್, ಐಒಟಿ ಮತ್ತು ಮಶಿನ್ ಲರ್ನಿಂಗ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಬಾಷ್ ಯಶಸ್ವಿಯಾಗಿದೆ. "ಫ್ಯಾಕ್ಟರಿ ಆಫ್ ದಿ ಫ್ಯೂಚರ್'' ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವ ಬಾಷ್ ಇಂಡಿಯಾ ಉದ್ಯಮಗಳಲ್ಲಿ ಒಇಎಂಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಈ ಮೂಲಕ ರೋಬೋಟಿಕ್ಸ್ ಮತ್ತು ಆಟೋಮೇಶನ್ ಪರಿಹಾರಗಳನ್ನು ಉತ್ಪಾದನಾ ವಲಯಗಳಿಗೆ ನೀಡುತ್ತಿದೆ.

ಕೈಗಾರಿಕೆಗಳಿಗೆ ಹೊಸ ಪೀಳಿಗೆಯ ತಂತ್ರಜ್ಞಾನಗಳನ್ನು ಪೂರೈಸುವ ಆವಿಷ್ಕಾರಕ ಹಬ್

ಆವಿಷ್ಕಾರಕ ಬದಲಾವಣೆ ಎಲ್ಲಾ ಕ್ಷೇತ್ರಗಳ ಜೀವಾಳವಾಗಿದೆ. ಈ ನಿಟ್ಟಿನಲ್ಲಿ ಬಾಷ್ ಆವಿಷ್ಕಾರಕ ಹಬ್ ಆಗುವತ್ತ ಹೆಜ್ಜೆ ಇಟ್ಟಿದೆ. ಎಐ, ಬ್ಲಾಕ್‍ಚೈನ್, ಸೆನ್ಸಾರ್‍ಗಳು ಮತ್ತು ಇನ್ನಿತರೆ ಭವಿಷ್ಯದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸುಸ್ಥಿರವಾದ ಪರಿಸರಸ್ನೇಹಿ ಪರಿಹಾರಗಳನ್ನು ಕೈಗಾರಿಕೆಗಳಿಗೆ ನೀಡುತ್ತಾ ಬಾಷ್ ವಿಶ್ವದ ಭೂಪಟದಲ್ಲಿ ಸ್ಥಾನ ಹೊಂದುತ್ತಿದೆ. ಎಐ ಪರಿಹಾರಗಳು ಮತ್ತು ರೂಪಾಂತರಗಳನ್ನು ಹೊಂದುವ ಜಾಗತಿಕ ಆವಿಷ್ಕಾರಕ ಕೇಂದ್ರಗಳನ್ನು ಬೆಂಗಳೂರು ಹೊಂದಿದೆ. ಬಾಷ್‍ನ 3-ಎಸ್ ಸ್ಟ್ರಾಟರ್ಜಿನಲ್ಲಿ ಸೆನ್ಸಾರ್, ಸಾಫ್ಟ್ ವೇರ್ ಮತ್ತು ಸೇವೆಗಳನ್ನು ಹೊಂದಿದೆ. ವಿಸ್ತøತವಾದ ಜಾಲವನ್ನು ಹೊಂದುವ ಮೂಲಕ ಬಾಷ್‍ನ ಆವಿಷ್ಕಾರ ಕ್ರಮಗಳು ಬೆಳವಣಿಗೆಗೆ ಪೂರಕವಾಗಿವೆ.

ಉದ್ಯಮಗಳ ಡಿಜಿಟಲ್ ಪರಿವರ್ತನೆಗೆ ಬಾಷ್ ವೇಗ ಹೆಚ್ಚಿಸುತ್ತಿದ್ದು

ಉಪಯೋಗಿಗಳು ಮತ್ತು ಪೂರೈಕೆದಾರ ಉದ್ಯಮ ಡಿಜಿಟಲ್ ಪರಿವರ್ತನೆ ಪಾಲುದಾರಿಕೆ - ಉದ್ಯಮಗಳ ಡಿಜಿಟಲ್ ಪರಿವರ್ತನೆಗೆ ಬಾಷ್ ವೇಗ ಹೆಚ್ಚಿಸುತ್ತಿದ್ದು, ಭಾರತೀಯ ಗ್ರಾಹಕರ ಬಳಕೆ ಯೋಗ್ಯತೆ ಮತ್ತು ಕೈಗೆಟುಕುವ ಸಾಧ್ಯತೆಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸೆನ್ಸರ್‍ಗಳು, ಸಾಫ್ಟ್‍ವೇರ್ ಮತ್ತು ಸೇವೆಗಳನ್ನೊಳಗೊಂಡ 3ಎಸ್ ಯೋಜನೆಯಾದ ತನ್ನ ಡಿಜಿಟಲ್ ಸಲಹಾ ಭಾಗವನ್ನು ಬಳಸಿ ಎಲ್ಲಾ ಕೈಗಾರಿಕಾ ಕ್ಷೇತ್ರಗಳಲ್ಲಿ ಪ್ರಸ್ತುತ ಇರುವ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳನ್ನು ವಿಸ್ತರಿಸುತ್ತಿದೆ.

ತನ್ನ ಅನನ್ಯವಾದ ಲೀಡ್ ಯುಸರ್-ಲೀಡ್ ಪ್ರೊವೈಡರ್ ಯೋಜನೆಯಡಿಯಲ್ಲಿ ಕಂಪನಿ ಕಾರ್ಯಾಚರಣೆ ನಡೆಸುತ್ತಿದ್ದು, ತನ್ನದೇ ಘಟಕಗಳು ಮತ್ತು ಸೌಲಭ್ಯಗಳಲ್ಲಿ ಮೊದಲು ಬಳಸುವುದರೊಂದಿಗೆ ಡಿಜಿಟಲ್ ಪರಿಹಾರಗಳನ್ನು ಬಾಷ್ ಶ್ರೇಷ್ಟವಾಗಿಸುತ್ತದೆ. ನಂತರ ತನ್ನ ಪಾಲುದಾರರು ಮತ್ತು ಗ್ರಾಹಕರಿಗೆ ಅವರ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳನ್ನು ಡಿಜಿಟಲ್ ತಂತ್ರಜ್ಞಾನದ ಮತ್ತು ನೂತನ ಪೀಳಿಗೆಯ ಪರಿಹಾರಗಳೊಂದಿಗೆ ವಿಸ್ತರಿಸಲು ನೆರವಾಗುತ್ತಿದೆ.

ಬಾಷ್ ಒಳಗಿನ ಮತ್ತು ಹೊರಗಿನ ಪೂರಕ ಶಕ್ತಿಗಳನ್ನು ಒಂದುಗೂಡಿಸಿ ಸಹಭಾಗಿತ್ವದೊಂದಿಗೆ ಮತ್ತು ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಸಮಗ್ರೀಕರಣದಲ್ಲಿ ಸಾಮಥ್ರ್ಯವನ್ನು ಒಂದುಗೂಡಿಸಿ ಕಂಪನಿ ಪರಿವರ್ತನಾಶೀಲ ಮಾರ್ಗದಲ್ಲಿದ್ದು, ಡಿಜಿಟಲೀಕರಣ ಮತ್ತು ಸ್ವಯಂಚಾಲನೆಯ ಯುಗದಲ್ಲಿ ಮುಂಚೂಣಿಯ ಸೇವಾ ಪೂರೈಕೆದಾರ ಸಂಸ್ಥೆಯಾಗುವತ್ತ ಸಾಗಿದೆ.

English summary
Bosch Home Appliances will invest 100 million euros over the next four years into personalised solutions, brand building, strengthening its technology center, and setting up a robust refrigerator factory in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X