ಬೆಂಗಳೂರಿನ ಪೆಟ್ರೋಲ್ ಬಂಕ್ಗಳಲ್ಲೂ EV ಚಾರ್ಜಿಂಗ್ ಕಿಯೋಸ್ಕ್
ಬೆಂಗಳೂರು, ಸೆ. 6: ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನ ಬಳಕೆಗೆ ಬೇಕಾದ ಮೂಲ ಸೌಕರ್ಯ ಒದಗಿಸುವತ್ತ ಕೇಂದ್ರ ಸರ್ಕಾರ ಹೆಜ್ಜೆ ಇರಿಸುತ್ತಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಪೆಟ್ರೋಲ್ ಬಂಕ್ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಚಾರ್ಜಿಂಗ್ ಕಿಯೋಸ್ಕ್ ಆರಂಭಿಸಲು ಒಪ್ಪಿಗೆ ಸಿಕ್ಕಿದೆ.
ಹೀಗಾಗಿ, ಸರಿ ಸುಮಾರು 69,000 ಪೆಟ್ರೋಲ್ ಪಂಪ್ ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟವನ್ನು ಕಾಣಬಹುದು ಎಂದು ಇಂಧನ ಸಚಿವ ಆರ್.ಕೆ.ಸಿಂಗ್ ಅವರು ಹೇಳಿದರು. ಇಂಧನ ಸಚಿವಾಲಯದ ಹೊಸ ಮಾರ್ಗಸೂಚಿ ಪ್ರಕಾರ, ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿ ಒಂದು ಪರ್ಯಾಯ ಇಂಧನ ಭರ್ತಿಗೆ ವ್ಯವಸ್ಥೆ ಮಾಡಬೇಕು, Company-Owned, Company-Operated (COCO) ಪೆಟ್ರೋಲ್ ಬಂಕ್ಗಳು EV ಚಾರ್ಜಿಂಗ್ ಸೌಲಭ್ಯ ಒದಗಿಸಬೇಕು ಎಂದಿದ್ದಾರೆ.
ನಿಮ್ಮ ಇ-ವಾಹನಗಳನ್ನು ಇನ್ಮುಂದೆ ಬೆಸ್ಕಾಂ ಚಾರ್ಜ್ ಮಾಡುತ್ತೆ
ಆರಂಭಿಕ ಹಂತದಲ್ಲಿ ಬೆಂಗಳೂರು, ದೆಹಲಿ ಎನ್ ಸಿಆರ್, ಕೋಲ್ಕತಾ, ಚೆನ್ನೈ, ಹೈದರಾಬಾದ್,ವಡೋದರಾ, ಭೋಪಾಲ್ ಮುಂತಾದೆಡೆ EV ಚಾರ್ಜಿಂಗ್ ಕಿಯೋಸ್ಕ್ ಆರಂಭಿಸಲಾಗುತ್ತದೆ. ಈ ಮೂಲಕ ಇ ಮೊಬಿಲಿಟಿಗೆ ಹೆಚ್ಚಿನ ಬೆಂಬಲ ದೊರೆಯಲಿದೆ ಎಂದು ಸಚಿವಾಲಯ ಹೇಳಿದೆ.
2030ರ ವೇಳೆಗೆ ಸಾಗಣೆ ವ್ಯವಸ್ಥೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಬಳಕೆಗೆ ಫ್ಲಿಪ್ಕಾರ್ಟ್ ಸಂಕಲ್ಪ
ಎಸಿ ಚಾರ್ಜಿಂಗ್ ವ್ಯವಸ್ಥೆಯನ್ನು ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಬಿಬಿಎಂಪಿ, ಬಿಎಂಆರ್ ಸಿಎಲ್, ಬಿಎಂಟಿಸಿಗಳಲ್ಲಿ ಅಳವಡಿಸಲು ಈ ಹಿಂದೆ ಕರ್ನಾಟಕ ಸರ್ಕಾರ ಯತ್ನಿಸಿತ್ತು. ಈ ಮೂಲಕ ಸರ್ಕಾರಿ ನೌಕರರು ಎಲೆಕ್ಟ್ರಾನಿಕ್ ವಾಹನಗಳ ಸವಾರರು ತಮ್ಮ ಬ್ಯಾಟರಿಗಳನ್ನು ಸುಲಭವಾಗಿ ಚಾರ್ಜ್ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು.