ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕ್ಷೇತ್ರದಲ್ಲಿ 2025ರ ಹೊತ್ತಿಗೆ 30 ಲಕ್ಷ ಉದ್ಯೋಗ ಸೃಷ್ಟಿ : ಆರ್‌ವಿಡಿ

|
Google Oneindia Kannada News

ಬೆಂಗಳೂರು, ನವೆಂಬರ್ 29 : ಮುಂದಿನ ವರ್ಷದಿಂದ (2019ರಿಂದ) ವಾರ್ಷಿಕವಾಗಿ 'ಬೆಂಗಳೂರು ಸ್ಕಿಲ್' ಶೃಂಗಸಭೆಯನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಸಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಗುರುವಾರ ಆರಂಭಗೊಂಡ 'ಬೆಂಗಳೂರು ಟೆಕ್ ಸಮ್ಮಿಟ್'ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, "ಬೆಂಗಳೂರು ಸ್ಕಿಲ್' ಹೆಸರಿನಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಉಪಕ್ರಮವನ್ನು ಆರಂಭಿಸಲು ಇದು ತಕ್ಕ ಸಮಯವಾಗಿದೆ" ಎಂದು ನುಡಿದರು.

ತಂತ್ರಜ್ಞಾನದಿಂದ ಮನುಷ್ಯ ಸಂಬಂಧಗಳು ಬೆಸೆದಿವೆ: ಸಚಿವ ದೇಶಪಾಂಡೆತಂತ್ರಜ್ಞಾನದಿಂದ ಮನುಷ್ಯ ಸಂಬಂಧಗಳು ಬೆಸೆದಿವೆ: ಸಚಿವ ದೇಶಪಾಂಡೆ

"ಸದ್ಯಕ್ಕೆ ನಮ್ಮಲ್ಲಿ ಬೆಳವಣಿಗೆಯ ದರವೇನೋ ಕ್ಷಿಪ್ರ ಗತಿಯಲ್ಲಿದೆ. ಆದರೆ, ಉದ್ಯೋಗ ಸೃಷ್ಟಿಯು ಇದೇ ವೇಗದಲ್ಲ ನಡೆಯುತ್ತಿಲ್ಲ. ಹೀಗಾಗಿ, ಸರಕಾರ ಮತ್ತು ಉದ್ದಿಮೆಗಳು ಉದ್ಯೋಗಸೃಷ್ಟಿಗೆ ಒತ್ತು ನೀಡಲೇಬೇಕಾಗಿದೆ. ಉದ್ಯೋಗದೊಂದಿಗೆ ಬೆಳವಣಿಗೆ' ಎನ್ನುವುದು ನಮ್ಮ ಮೂಲಮಂತ್ರವಾಗಬೇಕಾಗಿದ್ದು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿಯು ನಿರ್ಣಾಯಕ ಪಾತ್ರ ವಹಿಸಲಿದೆ" ಎಂದು ದೇಶಪಾಂಡೆ ನುಡಿದರು.

Bengaluru Tech Summit with a focal theme of Innovation and Impact

ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 2025ರ ಹೊತ್ತಿಗೆ 30 ಲಕ್ಷ ಉದ್ಯೋಗಿಗಳಿರುವ ನಿರೀಕ್ಷೆ ಇದೆ. ಹಾಗೆಯೇ, ನವೋದ್ಯಮಗಳ ಸಂಖ್ಯೆಯು 25 ಸಾವಿರವನ್ನು ಮುಟ್ಟಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದೆ. ಇದರ ಜತೆಗೆ, ದೇಶದ ಐಟಿ ಉತ್ಪನ್ನ/ಸೇವೆಗಳ ಮೂಲಕ ಈಗ ಹರಿದು ಬರುತ್ತಿರುವ ಶೇ.17ರಷ್ಟು ಆದಾಯವನ್ನು ಶೇ.25ಕ್ಕೆ ಹೆಚ್ಚಿಸಬೇಕೆಂಬ ಆಶಯವಿದೆ ಎಂದು ಅವರು ವಿವರಿಸಿದರು.

ಸರಕಾರವು ಈಗಾಗಲೇ ಪ್ರತ್ಯೇಕ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನೇ ಸ್ಥಾಪಿಸಿದೆ. ಇದರ ಜತೆಗೆ ಸ್ಕಿಲ್ ಮಿಷನ್ ಮತ್ತು ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರಗಳು ಕೂಡ ಇವೆ. ಈ ಮೂಲಕ ಸರಕಾರವು ಉದ್ಯೋಗಸೃಷ್ಟಿಯೆಡೆಗೆ ತನಗಿರುವ ಬದ್ಧತೆಯನ್ನು ಪ್ರದರ್ಶಿಸಿದೆ. ಸಮಾಜದ ಅಂಚಿನಲ್ಲಿರುವವರಿಗೆ ಕೌಶಲ್ಯವನ್ನು ಒದಗಿಸುವ ಮೂಲಕ ಸಾಮಾಜಿಕ ಸೌಹಾರ್ದವನ್ನು ಕಾಪಾಡಬೇಕಾಗಿದೆ ಎಂದು ಅವರು ಹೇಳಿದರು.

ತಾಂತ್ರಿಕ ಉದ್ಯಮಕ್ಕೆ ಏಷ್ಯಾದಲ್ಲಿ ಬೆಂಗಳೂರೇ ದಿ ಬೆಸ್ಟ್ ಸಿಟಿ!ತಾಂತ್ರಿಕ ಉದ್ಯಮಕ್ಕೆ ಏಷ್ಯಾದಲ್ಲಿ ಬೆಂಗಳೂರೇ ದಿ ಬೆಸ್ಟ್ ಸಿಟಿ!

ತಂತ್ರಜ್ಞಾನವನ್ನು ಜನರ ಉಪಯೋಗಕ್ಕೆ ಬಳಸಿಕೊಳ್ಳುವಲ್ಲಿ ಕರ್ನಾಟಕ ರಾಜ್ಯವು ಸದಾ ಮುಂಚೂಣಿಯಲ್ಲಿದೆ. ಮಾಹಿತಿ ತಂತ್ರಜ್ಞಾನವು ಇನ್ನೂ ಅಷ್ಟಾಗಿ ಬೆಳೆಯದಿದ್ದ 20 ವರ್ಷಗಳ ಹಿಂದೆಯೇ ನಾವು ಬೆಂಗಳೂರು ಐಟಿ' ಎನ್ನುವ ಶೃಂಗಸಭೆಯನ್ನು ಚಾಲ್ತಿಗೆ ತಂದೆವು. ಇದು ಜಾಗೃತಿ ಮೂಡಿಸಲು ಸಹಾಯವಾಯಿತಲ್ಲದೆ, ರಾಜ್ಯಕ್ಕೆ ಅಗಾಧ ಪ್ರಮಾಣದ ಬಂಡವಾಳವು ಹರಿದು ಬರಲೂ ನೆರವು ನೀಡಿತು ಎಂದು ಸಚಿವರು ನುಡಿದರು.

ಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಜಪಾನ್ ತಂತ್ರಜ್ಞಾನಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಜಪಾನ್ ತಂತ್ರಜ್ಞಾನ

ನಂತರದ ದಿನಗಳಲ್ಲಿ ರಾಜ್ಯವು ಬೆಂಗಳೂರು ಬಯೋ' ಎನ್ನುವ ಹೆಸರಿನಲ್ಲಿ ಜೈವಿಕ ತಂತ್ರಜ್ಞಾನಕ್ಕೆ ಒತ್ತು ನೀಡಿತು. ಇದನ್ನು ನಂತರ ಇತರೆ ರಾಜ್ಯಗಳು ಅನುಕರಿಸಿದವು. ನ್ಯಾನೊ ತಂತ್ರಜ್ಞಾನದಲ್ಲಿ ಕೂಡ ರಾಜ್ಯವು ಬೆಂಗಳೂರು ನ್ಯಾನೊ' ಬ್ರ್ಯಾಂಡ್ ಅನ್ನು ಪರಿಚಿಯಿಸಿತು. ಹೀಗೆ, ಹಲವು ವಿಕ್ರಮಗಳು ರಾಜ್ಯದ ಬತ್ತಳಿಕೆಯಲ್ಲಿವೆ ಎಂದು ಕೌಶಲ್ಯಾಭಿವೃದ್ಧಿ ಸಚಿವರು ನೆನಪಿಸಿದರು.

English summary
Bengaluru Tech Summit with a focal theme of Innovation and Impact. Karnataka expects to triple its IT workforce to 3 million by 2025, said R.V. Deshpande, Hon’ble Minister for Revenue, Skill Development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X