ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೋದ್ಯಮ ಹೂಡಿಕೆಯಲ್ಲಿ ಸಿಂಗಪುರ, ಪ್ಯಾರೀಸ್ ಮೀರಿಸಿದ ಬೆಂಗಳೂರು

|
Google Oneindia Kannada News

ಬೆಂಗಳೂರು, ಜೂನ್ 15: ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡು ಹಲವು ವರ್ಷಗಳಿಂದ ಜಾಗತಿಕ ಐಟಿ ಭೂಪಟದಲ್ಲಿ ಹೈಲೈಟ್ ಆಗಿರುವ ಬೆಂಗಳೂರು ನಗರಕ್ಕೆ ಈಗ ಇನ್ನೊಂದು ಗರಿಮೆ ಸಿಕ್ಕಿದೆ. ಹೊಸ ಮಾದರಿ ತಂತ್ರಜ್ಞಾನ ಆಧರಿತ ಉದ್ಯಮಗಳ ವ್ಯವಸ್ಥೆಯಲ್ಲಿ ಬೆಂಗಳೂರು ಪ್ರಮುಖ ಶಕ್ತಿಯಾಗಿ ಬೆಳೆಯುತ್ತಿದೆ. ಈ ವರ್ಷ ಇಂಥ ಉದ್ಯಮಗಳ ಮೇಲೆ ಹೂಡಲಾದ ಬಂಡವಾಳದ (ವೆಂಚರ್ ಕ್ಯಾಪಿಟಲ್) ಲೆಕ್ಕಾಚಾರದಲ್ಲಿ ಬೆಂಗಳೂರು ವಿಶ್ವದಲ್ಲೇ ಐದನೇ ಸ್ಥಾನ ಹೊಂದಿದೆ. ಏಷ್ಯಾದಲ್ಲಿ ಬೆಂಗಳೂರು ಅಗ್ರಪಂಕ್ತಿಯಲ್ಲಿ ನಿಂತಿದೆ.

ಮೊನ್ನೆ ಸೋಮವಾರ ಆರಂಭವಾದ ಲಂಡನ್ ಟೆಕ್ ವೀಕ್‌ನಲ್ಲಿ ಬಿಡುಗಡೆಯಾದ ಗ್ಲೋಬಲ್ ಸ್ಟಾರ್ಟಪ್ ಇಕೋಸಿಸ್ಟಂ ರಿಪೋರ್ಟ್‌ನಲ್ಲಿ ಈ ಮಾಹಿತಿ ಇದೆ. ಈ ವರ್ಷದ ಮೊದಲ ಐದು ತಿಂಗಳಲ್ಲಿ ಬೆಂಗಳೂರಿನ ಟೆಕ್ ಸಂಸ್ಥೆಗಳು 7.5 ಬಿಲಿಯನ್ ಡಾಲರ್ (58 ಸಾವಿರ ಕೋಟಿ ರೂಪಾಯಿ) ಮೊತ್ತದಷ್ಟು ವಿಸಿ ಫಂಡಿಂಗ್ ಪಡೆದಿವೆ ಎನ್ನಲಾಗಿದೆ.

ಜನರಿಗೆ ಸಿಹಿಸುದ್ದಿ; ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಜನರಿಗೆ ಸಿಹಿಸುದ್ದಿ; ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ

ಏನಿದು ವಿಸಿ ಫಂಡಿಂಗ್?
ವಿಸಿ ಫಂಡಿಂಗ್ ಎನ್ನುವುದು ವೆಂಚರ್ ಕ್ಯಾಪಿಟಲ್ ಫಂಡಿಂಗ್. ನವೋದ್ಯಮಗಳಿಗೆ ಹೂಡಲಾಗುವ ಬಂಡವಾಳ ಇದು. ಸಾಂಪ್ರದಾಯಿಕ ವ್ಯವಹಾರ ಅಲ್ಲದ ಮತ್ತು ಅಪಾಯ ಹೆಚ್ಚು ಇರುವ ವ್ಯವಹಾರಗಳ ಮೇಲೆ ಬಂಡವಾಳ ಹೂಡುವುದಕ್ಕೆ ವೆಂಚರ್ ಕ್ಯಾಪಿಟಲ್ ಎನ್ನುವುದು. ಬೆಂಗಳೂರಿನಲ್ಲಿ ನವೋದ್ಯಮಗಳ ದೊಡ್ಡ ಗುಂಪೇ ಇದೆ. ಜಾಗತಿಕವಾಗಿ ಹೂಡಿಕೆದಾರರು ಬೆಂಗಳೂರಿನ ಸ್ಟಾರ್ಟಪ್‌ಗಳ ಮೇಲೆ ಹಣ ತೊಡಗಿಸುತ್ತಿದ್ದಾರೆ. ಪ್ಯಾರಿಸ್, ಸಿಂಗಾಪುರ ಮೊದಲಾದ ನಗರಗಳ ಉದ್ಯಮಗಳಿಗೆ ಸಿಗದಷ್ಟು ಬಂಡವಾಳ ಬೆಂಗಳೂರಿನ ಸ್ಟಾರ್ಟಪ್‌ಗಳಿಗೆ ಹರಿದುಬರುತ್ತಿರುವುದು ವಿಶೇಷ.

Bengaluru Ahead of Paris, Berlin in Tech VC Funding This Year

ಸ್ಯಾನ್ ಫ್ರಾನ್ಸಿಸ್ಕೋ ನಂಬರ್ ಒನ್:
ಸಿಲಿಕಾನ್ ವ್ಯಾಲಿ ಎನಿಸಿರುವ ಸ್ಯಾನ್ ಫ್ರಾನ್ಸಿಸ್ಕೋ ನಗರ ಅತಿ ಹೆಚ್ಚು ವೆಂಚರ್ ಕ್ಯಾಪಿಟಲ್ ಪಡೆಯುವುದರಲ್ಲಿ ಈ ವರ್ಷವೂ ಮುಂದಿದೆ. ಈ ವರ್ಷದಲ್ಲಿ ಈವರೆಗೆ ಇಲ್ಲಿಯ ನವೋದ್ಯಮ ಸಂಸ್ಥೆಗಳಿಗೆ 44.5 ಬಿಲಿಯನ್ ಡಾಲರ್ (ಸುಮಾರು 3.47 ಲಕ್ಷಕೋಟಿ ರೂಪಾಯಿ) ಹೂಡಿಕೆ ಸಿಕ್ಕಿದೆ. ಅಮೆರಿಕದ ಮತ್ತೊಂದು ನಗರಿ ನ್ಯೂಯಾರ್ಕ್‌ನ ಸ್ಟಾರ್ಟಪ್‌ಗಳು 15.4 ಬಿಲಿಯನ್ ಡಾಲರ್ ಬಂಡವಾಳ ಪಡೆದಿವೆ. ನಂತರದ ಸ್ಥಾನದಲ್ಲಿ ಲಂಡನ್, ಬೋಸ್ಟನ್ ಮತ್ತು ಬೆಂಗಳೂರು ನಗರಗಳು ಇವೆ.

ರೆಪೋ ದರ ಹೆಚ್ಚಳ ಪರಿಣಾಮ: ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಳರೆಪೋ ದರ ಹೆಚ್ಚಳ ಪರಿಣಾಮ: ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಳ

ಕುತೂಹಲವೆಂದರೆ, ಟಾಪ್-5 ಪಟ್ಟಿಯಲ್ಲಿ ಅಮೆರಿಕದ ಮೂರು ನಗರಗಳಿವೆ. ಈ ಮೂರೂ ನಗರಗಳ ನವೋದ್ಯಮಗಳು ಕಳೆದ ವರ್ಷದಕ್ಕಿಂತ ಈ ವರ್ಷ ಕಡಿಮೆ ಬಂಡವಾಳ ಪಡೆದಿರುವುದು ಗಮನಾರ್ಹ. ಲಂಡನ್, ಬೆಂಗಳೂರು, ಪ್ಯಾರೀಸ್ ನಗರಗಳ ಉದ್ಯಮಗಳಿಗೆ ಕಳೆದ ವರ್ಷಕ್ಕಿಂತ ಹೆಚ್ಚು ಬಂಡವಾಳ ಸಿಕ್ಕಿದೆ.

Bengaluru Ahead of Paris, Berlin in Tech VC Funding This Year

ಬೆಂಗಳೂರಿನ ನವೋದ್ಯಮ ಸಂಸ್ಥೆಗಳಿಗೆ ಕಳೆದ ವರ್ಷದ ಮೊದಲ ಆರು ತಿಂಗಳಲ್ಲಿ 5.2 ಬಿಲಿಯನ್ ಡಾಲರ್ (ಸುಮಾರು 40 ಸಾವಿರ ಕೋಟಿ ರೂಪಾಯಿ) ಹೂಡಿಕೆ ಬಂದಿತ್ತು. ಈ ವರ್ಷ ಮೊದಲ ಐದು ತಿಂಗಳಲ್ಲೇ 58 ಸಾವಿರ ಕೋಟಿ ರೂಪಾಯಿ ಹೂಡಿಕೆ ಪಡೆದಿವೆ.

Recommended Video

South Africa ವಿರುದ್ಧ ಗೆದ್ಮೇಲೆ Rishab Pant ಹೊಗಳಿಕೆ‌ ಸಿಕ್ಕಿದ್ದು ಯಾರಿಗೆ? | Oneindia Kannada

ಗ್ಲೋಬಲ್ ಸ್ಟಾರ್ಟಪ್ ಇಕೋಸಿಸ್ಟಂ ರಿಪೋರ್ಟ್‌ನಲ್ಲಿ ಇನ್ನೂ ಕೆಲ ಕುತೂಹಲಕರ ಮಾಹಿತಿ ಇದೆ. ಭಾರತದ ಉದ್ಯಮಿಗಳಿಗೆ ಭಾರತದ ಆಚೆ ಸ್ಟಾರ್ಟಪ್ ಆರಂಭಿಸಲು ಲಂಡನ್ ನಗರದ ಮೇಲೆ ಹೆಚ್ಚು ಒಲವು ಇದೆಯಂತೆ. ಕಳೆದ ಐದು ವರ್ಷದಲ್ಲಿ ಭಾರತದಿಂದ ಹರಿದುಹೋಗಿರುವ ಬಂಡವಾಳದಲ್ಲಿ ದುಬೈ ಬಿಟ್ಟರೆ ಹೆಚ್ಚಿನ ಪಾಲು ಪಡೆದಿರುವುದು ಲಂಡನ್ ನಗರ ಎನ್ನಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Bengaluru is in 5th in the list of world cities getting tech venture capital investment this year. Bengaluru is ahead of Paris, Singapore, Tokyo, Berlin and other cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X