• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೀಣ್ಯ-ನಾಗಸಂದ್ರ ಮೆಟ್ರೋ ಜೊತೆ ರಿಯಲ್ ಎಸ್ಟೇಟ್ ನಾಗಾಲೋಟ!

By ಜೇಮ್ಸ್ ಮಾರ್ಟಿನ್
|

ಬೆಂಗಳೂರು, ಜುಲೈ 16: ಮೂಲಸೌಕರ್ಯ ಯೋಜನೆಗಳು ತಾವಿರುವ ಪ್ರದೇಶದಲ್ಲಿ ಸಮಗ್ರ ಪ್ರಗತಿಯನ್ನು ತರುತ್ತವೆ. ಬೆಂಗಳೂರಿನ ನಮ್ಮ ಮೆಟ್ರೋ ಕೂಡಾ ಇದಕ್ಕೆ ಹೊರತಲ್ಲ, ಮತ್ತು ಮೆಟ್ರೋ ಕಾರಿಡಾರ್ ನುದ್ದಕ್ಕೂ ಇರುವ ಪ್ರದೇಶಗಳು ಈ ನಗರ ಸಾರಿಗೆ ಯೋಜನೆಗಳ ಅನುಕೂಲ ಪಡೆಯುತ್ತಿವೆ. ಪೀಣ್ಯ -ನಾಗಸಂದ್ರ ಮಾರ್ಗದ ನಮ್ಮ ಮೆಟ್ರೋ ಚಾಲನೆಗೊಂಡ ದಿನ ಉದ್ಯಮಿಗಳು ನಿರೀಕ್ಷಿಸಿದಂತೆ ರಿಯಲ್ ಎಸ್ಟೇಟ್ ವ್ಯವಹಾರ ಸಕತ್ತಾಗಿ ಕುದುರಿದೆ.

ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಸ್ಟ್ ನಿಂದ ನಗರದ ಉತ್ತರ ಭಾಗದ ಉಪನಗರವಾದ ನಾಗಸಂದ್ರದವರೆಗಿನ ಸ್ಟ್ರೆಚ್ ನ ಕಾರ್ಯಾಚರಣೆಯ ಆರಂಭದಿಂದಾಗಿ ಅಲ್ಲಿನ ಸುತ್ತಲಿನ ಪ್ರದೇಶಗಳು ಹೊಸದಾಗಿ ಇದರ ಲಾಭ ಪಡೆದಿವೆ. [ಪೀಣ್ಯ ಮೆಟ್ರೋ ಪ್ರಯಾಣದರ ಪಟ್ಟಿ]

ಈ ಮೆಟ್ರೋ ಸ್ಟ್ರೆಚ್ ರಿಯಲ್ ಎಸ್ಟೇಟ್ ನ ಬೆಲೆಗೆ ಕೂಡಾ ಕೊಡುಗೆ ನೀಡಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿದೆ. ಮೆಟ್ರೋ ಸೇವೆಯು ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭವಾದಾಗ, ಮೆಜೆಸ್ಟಿಕ್ ಮತ್ತು ಅದಕ್ಕಿಂತ ಆಚೆಗಿನ ನಿವಾಸಿಗಳ ಪ್ರಯಾಣಕ್ಕೆ ವರದಾನವಾಗಲಿರುವುದು ಸಾಬೀತಾಗಲಿದೆ.[2ನೇ ಹಂತದ ಕಾಮಗಾರಿ ವಿವರಗಳು]

ಸಂಪರ್ಕ ಸುಧಾರಣೆ : ಕ್ರೆಡೈ ಬೆಂಗಳೂರು ಕಾರ್ಯದರ್ಶಿ ಸುರೇಶ್ ಹರಿ ಅವರ ಪ್ರಕಾರ, "ಸಣ್ಣ ಹಂತವಾದ ಪೀಣ್ಯ ಮತ್ತು ನಾಗಸಂದ್ರ ಮಾರ್ಗವು ಇತ್ತೀಚೆಗಷ್ಟೇ ತೆರೆದಿದ್ದರೂ ಈ ಭಾಗದ ಸ್ಥಳೀಯ ಜನರಿಗೆ ಅಥವಾ ಇದರ ಸೇವೆಯನ್ನು ಉಪಯೋಗಿಸುವವರಿಗೆ ಇದರ ಪೂರ್ತಿ ಪರಿಣಾಮವನ್ನು ಕಾಣಲು 3-4 ತಿಂಗಳು ಬೇಕಾಗುತ್ತವೆ. [ಹಿಂದಿ ಹೇರಿಕೆ ಕಂಡರೆ ಸಂಸದ ಪ್ರತಾಪ್ ಗೆ ತಿಳಿಸಿ]

ಧನಾತ್ಮಕ ಸಂಗತಿ ಎಂದರೆ, ಮೆಜೆಸ್ಟಿಕ್ ನಿಂದ ಮತ್ತು ಅಲ್ಲಿಗೆ ಮೆಟ್ರೋದ ಸಂಪರ್ಕವು ಈ ವರ್ಷಾಂತ್ಯದೊಳಗೆ ಲಭ್ಯವಾಗಲಿದೆ" ಎಂದರು. ಮೆಟ್ರೋದಿಂದ ಆಗುವ ವಾಣಿಜ್ಯ ಅನುಕೂಲದ ಬಗ್ಗೆ ಮುಂದೆ ಓದಿ...[ಮಲ್ಲೇಶ್ವರಂ ಟು ನಾಗಸಂದ್ರ= 25 ನಿಮಿಷ]

ಮೆಜೆಸ್ಟಿಕ್ ಸಂಚಾರ ಆರಂಭವಾದರೆ ಅನುಕೂಲ

ಮೆಜೆಸ್ಟಿಕ್ ಸಂಚಾರ ಆರಂಭವಾದರೆ ಅನುಕೂಲ

* ನಂತರ ಬೈಯಪ್ಪನಹಳ್ಳಿ ಮತ್ತು ನಾಗಸಂದ್ರದ ನಡುವಿನ ಅಡ್ಡ ಸಂಚಾರ ಸಾಧ್ಯವಾಗುತ್ತದೆ.

* ಲೆಪ್ರಸಿ ಆಸ್ಪತ್ರೆ-ಮೈಸೂರು ರಸ್ತೆಯ ನಡುವಿನ ಮೆಟ್ರೋ ರೀಚ್ 2 ಕೂಡಾ ಕಾರ್ಯಾಚರಣೆ ಆರಂಭಗೊಳ್ಳಲಿದೆ.

* 2015ರ ಅಂತ್ಯದೊಳಗೆ ಅಥವಾ 2016ರ ಆರಂಭದಲ್ಲಿ ಹಂತ 1ರ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣದ ಕಾರಿಡಾರ್ ಗಳು ಪೂರ್ತಿಯಾಗಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.

 ಬ್ರಿಗೇಡ್ ಗ್ರೂಪ್ ಓಮ್ ಅಹುಜಾ, ಸಿಇಓ

ಬ್ರಿಗೇಡ್ ಗ್ರೂಪ್ ಓಮ್ ಅಹುಜಾ, ಸಿಇಓ

ಮೆಟ್ರೋ ಫೇಸ್ 1ರ ಆರಂಭದಿಂದ ಅತಿ ಹೆಚ್ಚು ಪ್ರಯೋಜನ ಪಡೆಯುವುದು ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರು. ಹೊಸ ಮೆಟ್ರೋ ಮಾರ್ಗ, ಉತ್ತರ- ಪಶ್ಚಿಮ ಭಾಗದಲ್ಲಿ ಬಂದರೂ,ಈ ಭಾಗಗಳು ಅಗಾಧವಾಗಿ ಅನುಕೂಲ ಪಡೆಯಲಿವೆ.

ಮೆಟ್ರೋ ಮಾರ್ಗದುದ್ದದ / ಸಮೀಪದ ಕೆಲವು ಭಾಗಗಳು, ವಿಶೇಷವಾಗಿ ದಾಸರಹಳ್ಳಿ ಮತ್ತು ನಾಗಸಂದ್ರವು ಈಗ ನಗರಕ್ಕೆ ತುಂಬಾ ಸುಧಾರಿತ ಹಾಗೂ ವೇಗದ ಸಂಪರ್ಕವನ್ನು ಕಂಡಿದೆ. ಪರಿಣಾಮವಾಗಿ, ಮೇಲೆ ಹೇಳಿದ ಪ್ರದೇಶಗಳು ದೂರವೆಂದು ಪರಿಗಣಿಸಲಾಗಿತ್ತು, ಆದರೆ ಈಗ ಬಂಡವಾಳ ಮೌಲ್ಯಗಳಲ್ಲಿ ಗಣನೀಯ ಏರಿಕೆ ಕಾಣಲಿವೆ

ಮೆಟ್ರೋ ವ್ಯಾಪ್ತಿಯ ವಸತಿ ಆಸ್ತಿಗಳು

ಮೆಟ್ರೋ ವ್ಯಾಪ್ತಿಯ ವಸತಿ ಆಸ್ತಿಗಳು

ಮೆಟ್ರೋ ವ್ಯಾಪ್ತಿಯ ವಸತಿ ಆಸ್ತಿಗಳು 2011-14ರ ಅವಧಿಯಲ್ಲಿ ಶೇ.20-25ರಷ್ಟು ಏರಿದ್ದವು. ಬಾಡಿಗೆಗಳು ವಸತಿ ಆಸ್ತಿಗಳಲ್ಲಿ ಶೇ.50ರಷ್ಟು ಹಾಗೂ ವಾಣಿಜ್ಯ ಆಸ್ತಿಗಳಿಗೆ ಶೇ.40-50ರಷ್ಟು ಮೇಲಕ್ಕೆ ಹೋಗಿವೆ.

ಪೀಣ್ಯ- ನಾಗಸಂದ್ರ ಸ್ಟ್ರೆಚ್ ಈ ಕಾರ್ಯಾಚರಣೆ ಆರಂಭಿಸಿರುವುದರೊಂದಿಗೆ, ಈ ಸ್ಟ್ರೆಚ್‍ನಾದ್ಯಂತ ಮುಂದಿನ 6- 12 ತಿಂಗಳಲ್ಲಿ ಎಲ್ಲಾ ಅಭಿವೃದ್ಧಿಗಳಲ್ಲಿ ಶೇ.10-15ರಷ್ಟು ಬೆಲೆ ಏರಿಕೆಯಾಗಲಿದೆ. ಯಶವಂತಪುರ- ನಾಗಸಂದ್ರ ಕಾರಿಡಾರ್ ಹೊಸದಾಗಿ ಆರಂಭವಾಗಲಿರುವ ಅಭಿವೃದ್ಧಿಗಳನ್ನು ಕಾಣಲಿದೆ ಅಥವಾ ಕಳೆದ ಎರಡು ವರ್ಷಗಳಲ್ಲಿ ಪೂರ್ಣಗೊಂಡಿವೆ.

ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭಾರಿ ಅವಕಾಶ

ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭಾರಿ ಅವಕಾಶ

ಈ ಕಾರಿಡಾರ್ ನಲ್ಲಿ ಕೆಲವು ಪ್ರಾಜೆಕ್ಟ್ ಗಳು ಆರಂಭವಾಗುವ ಹಾದಿಯಲ್ಲಿವೆ. ಈ ಪ್ರದೇಶಗಳಲ್ಲಿ ಹೂಡಿಕೆ ಮಾಡಲು ಖರೀದಿದಾರರಿಗೆ ಇದು ಉತ್ತಮ ಸಮಯ.

ವಿಶೇಷವಾಗಿ ಯಶವಂತಪುರಕ್ಕೆ ಇದು ನಿಜವಾಗಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭಾರಿ ಅವಕಾಶವನ್ನು ಹೊಂದಿದೆ. ಉದಾಹರಣೆಗೆ, ಯಶವಂತಪುರದಲ್ಲಿ, ಸದ್ಯ ಚದರ ಅಡಿಗೆ 6,000- 8,000 ರೂ. ಚಾಲ್ತಿಯಲ್ಲಿದ್ದರೆ, ಮುಂದಿನ ವರ್ಷ 7,000- 10,000 ರೂ. ತನಕ ಹೋಗಬಹುದಾಗಿದೆ" ಎಂದು ಕ್ರೆಡೈ ಬೆಂಗಳೂರು ಕಾರ್ಯದರ್ಶಿ ಸುರೇಶ್ ಹರಿ ಹೇಳಿದರು.

ರಿಯಲ್ ಎಸ್ಟೇಟ್‍ನಲ್ಲಿ ಬಂಡವಾಳ ಹೆಚ್ಚಳ

ರಿಯಲ್ ಎಸ್ಟೇಟ್‍ನಲ್ಲಿ ಬಂಡವಾಳ ಹೆಚ್ಚಳ

ಯಶವಂತಪುರ- ನಾಗಸಂದ್ರ ಸ್ಟ್ರೆಚ್‍ನಲ್ಲಿ ಅನೇಕ ಯೋಜನೆಗಳು ಆರಂಭಗೊಳ್ಳಲಿರುವುದರಿಂದ ಹೆಚ್ಚಿನ ಪ್ರಗತಿ ಕಾಣಲಿದೆ. ಜೊತೆಗೆ ಸಂಪೂರ್ಣ ಮೆಟ್ರೋ ಫೇಸ್ 1ರೊಂದಿಗೆ, ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆಯ ಸುತ್ತಲಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಸುಧಾರಿಸುವುದರೊಂದಿಗೆ ಅವು ಪ್ರಗತಿ ಹಾಗೂ ರಿಯಲ್ ಎಸ್ಟೇಟ್‍ನಲ್ಲಿ ಬಂಡವಾಳ ಹೆಚ್ಚಳದಲ್ಲಿ ಡಾರ್ಕ್ ಹಾರ್ಸ್‍ಗಳಾಗಲಿವೆ. ಈ ನಿರ್ದಿಷ್ಟ ವಲಯಗಳಲ್ಲ ಮುಂದಿನ 12-18 ತಿಂಗಳಲ್ಲಿ ಬಂಡವಾಳ ಮೌಲ್ಯಗಳು ಶೇ.25ರಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೇವೆ ಓಮ್ ಅಹುಜಾ ತಿಳಿಸಿದರು.

ಹೆಚ್ಚಿನ ಬಿಲ್ಟಪ್ ಏರಿಯಾಗೆ ಅವಕಾಶ

ಹೆಚ್ಚಿನ ಬಿಲ್ಟಪ್ ಏರಿಯಾಗೆ ಅವಕಾಶ

ಮೆಟ್ರೋ ಕಾರಿಡಾರ್ ಗಳ ಸುತ್ತಲಿನ ಪ್ರದೇಶದ ಎಫ್‍ಎಆರ್ ವಾಣಿಜ್ಯ ಮತ್ತು ವಸತಿ ಅಭಿವೃದ್ಧಿ ಯೋಜನೆಗಳಲ್ಲಿ ಏರಿಕೆ ಕಂಡಿದ್ದು, ಇದು ನಿರ್ಮಾಣಕ್ಕಾಗಿ ಹೆಚ್ಚಿನ ಬಿಲ್ಟಪ್ ಏರಿಯಾಗೆ ಅವಕಾಶ ನೀಡುತ್ತದೆ. ಉದಾಹರಣೆಗೆ, ವಾಣಿಜ್ಯ ನಿರ್ಮಾಣದ ಎಫ್‍ಎಆರ್ ಮೆಟ್ರೋ ನಿಲ್ದಾಣದ 3 ಕಿ.ಮೀ. ದೂರದಲ್ಲಿದ್ದು 3.2 ರಿಂದ 4 ಕಿ.ಮೀ. ಗೆ ವಿಸ್ತರಿಸಿದೆ. ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಮತ್ತು ವಸತಿ ರಿಯಲ್ ಎಸ್ಟೇಟ್ ಈ ಭಾರಿ ಅವಕಾಶವನ್ನು ಬಾಚಿಕೊಳ್ಳಬೇಕಿದೆ.

ವಿಶಾಲ್ ಮಿರ್ಚಂದಾನಿ, ಬ್ರಿಗೇಡ್ ಗ್ರೂಪ್

ವಿಶಾಲ್ ಮಿರ್ಚಂದಾನಿ, ಬ್ರಿಗೇಡ್ ಗ್ರೂಪ್

ಬ್ರಿಗೇಡ್ ಗ್ರೂಪ್, ಮೆಟ್ರೋದ ಕಾರ್ಯಾಚರಣೆಯೊಂದಿಗೆ ಹಾಗೂ ಬ್ರಿಗೇಡ್ ಗೇಟ್ ವೇ ಕ್ಯಾಂಪಸಿನ ಹೊರಗಡೆಯಲ್ಲೇ ನಿಲುಗಡೆ ಇದೆ, ಮಾಲ್ ನಿಂದ ತುಸು ದೂರದ ಪ್ರದೇಶಗಳಲ್ಲಿರು ಜನರು ಕೂಡಾ ಹೆಚ್ಚು ಬಾರಿ ಬಂದು ನಮ್ಮ ಆಫರ್ ಗಳನ್ನು ಅನುಭವಿಸುವ ಅವಕಾಶ ಪಡೆದಿದ್ದಾರೆ. ಮೆಟ್ರೋದ ಉಳಿದ ಯೋಜಿತ ಮಾರ್ಗಗಳು ಕೂಡಾ ಶೀಘ್ರವೇ ಕಾರ್ಯಾರಂಭಗೊಳ್ಳುತ್ತವೆ ಎಂಬ ನಿರೀಕ್ಷೆ ನಮಗಿದೆ. ಆಗ ಸಂಪೂರ್ಣ ನಗರವು ದಕ್ಷಯುತವಾಗಿ ಜೋಡಿಕೊಳ್ಳುತ್ತದೆ ಮತ್ತು ಅಭಿವೃದ್ಧಿ ಸಾಧಿಸಲು ಸುಲಭವಾಗುತ್ತದೆ'' ಎಂದು ಹೇಳಿದರು.

English summary
The Metro Rail connecting Peenya Industrial Area and Nagasandra will boost realty prices in the area by 10-15%. There will be a price increase of 10-15 per cent across developments on the stretch over the next six to twelve months said Suresh Hari, secretary, CREDAI Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X