ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್, ಇನ್ಫೋಸಿಸ್, ವಿಪ್ರೋಗೆ ಕಾದಿದೆ ಅಪಾಯ!

By Mahesh
|
Google Oneindia Kannada News

ಬೆಂಗಳೂರು, ಸೆ.27: ಭಾರತದ ಪ್ರಮುಖ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್ ಹಾಗೂ ವಿಪ್ರೋಗಳಿಗೆ ಹ್ಯಾಕರ್ಸ್ ಗಳಿಂದ ಅಪಾಯ ಕಾದಿದೆ ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ಎಚ್ಚರಿಸಿದೆ.

ಕೇರಳ ಸರ್ಕಾರದ ವೆಬ್ ಸೈಟ್ ಹ್ಯಾಕ್ ಸುದ್ದಿ ಬಂದ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ ಐಟಿ ಕಂಪನಿಗಳ ಮೇಲೆ ಸೈಬರ್ ಯುದ್ಧ ಪರಿಣತರ ದಾಳಿಯ ಭೀತಿಯ ಬಗ್ಗೆ ಮಾಹಿತಿ ಹೊರಬಿದ್ದಿದೆ. ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳು ಹ್ಯಾಕರ್ಸ್ ನಿಂದ ಬಚಾವ್ ಆಗಲು ಬೇಕಾದ ಸುರಕ್ಷಿತ ಕ್ರಮಗಳನ್ನು ಅನುಸರಿಸಿಲ್ಲ.[ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಮಾಡಿದ ಭಾಷಣ ಕೇಳಿ]

ಕಂಪನಿಗಳ ಅಧಿಕೃತ ವೆಬ್ ಸೈಟ್ ಹ್ಯಾಕ್, ಡಾಟಾ ಕದಿಯುವುದು, ಉದ್ಯೋಗಿಗಳ ಖಾಸಗಿ ಮಾಹಿತಿ ಸೋರಿಕೆ, ಕಂಪನಿಯ ಪ್ರಮುಖರ ವೆಬ್ ಸೈಟ್, ಬ್ಲಾಗ್ ಗಳಿಗೆ ಕನ್ನ ಹಾಕಲು ಸಂಚು ರೂಪಿಸಲಾಗಿದೆ.

Bengaluru: IT world faces severe security challenges, says expert

"ಪ್ರಮುಖ ಐಟಿ ಸಂಸ್ಥೆಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇನ್ನು ಸಣ್ಣ ಪುಟ್ಟ ಐಟಿ ಕಂಪನಿಗಳು ಹೇಗೆ ಹೆಚ್ಚಿನ ಭದ್ರತೆ ಪಡೆಯಲು ಸಾಧ್ಯ. ಅಲ್ಲದೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಣ್ಣಪುಟ್ಟ ಕಂಪನಿಗಳ ಬಳಿ ಇರುವ ದೊಡ್ಡ ಕಂಪನಿಗಳ ಮಾಹಿತಿಗೂ ಅಪಾಯ ಇರುತ್ತದೆ ಎಂದು ಇನ್ಫೋಸಿಸ್ ನ ಸಹ ಸ್ಥಾಪಕರೊಬ್ಬರು ಹೇಳಿಕೊಂಡಿದ್ದಾರೆ" ಎಂದು ಸಿನರ್ಜಿಯಾ ಫೌಂಡೇಷನ್ ನ ಅಧ್ಯಕ್ಷ ಟಾಬಿ ಸಿಮನ್ ಅವರು ಹೇಳಿದ್ದಾರೆ.[ಟೆಕ್ಕಿಗಳ ಅಕೌಂಟಿಗೆ ಕನ್ನ ಹಾಕಿದ ಐನಾತಿ ಹ್ಯಾಕರ್!]

ಸೈಬರ್ ಸೆಕ್ಯುರಿಟಿ ಕಾರ್ಯಾಗಾರ: ಪ್ರಮುಖ ಐಟಿ ಸಂಸ್ಥೆಗಳಲ್ಲದೆ ಇತರೆ ಸಂಸ್ಥೆಗಳಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಲು ಸಿನರ್ಜಿಯಾ ಸಂಸ್ಥೆ ಎರಡು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಸೈಬರ್ ಸೆಕ್ಯುರಿಟಿ ಕಾನ್ ಕ್ಲೇವ್ ಆಯೋಜಿಸಿದೆ. ಸೆಪ್ಟೆಂಬರ್ 29 ಹಾಗೂ 30ರಂದು ಕಾರ್ಯಕ್ರಮ ನಡೆಯಲಿದೆ.[ಬೆಂಗಳೂರು ಈಗ 'ಸೈಬರ್ ಕ್ರೈಂ' ರಾಜಧಾನಿ]

ಎಲ್ಲಾ ಬಗೆಯ ಮಾಹಿತಿಗೂ ಕನ್ನ ಹಾಕಬಹುದು. ಮೊಬೈಲ್, ಸಾಮಾಜಿಕ ಜಾಲ ತಾಣ, ಕ್ಲೌಡ್ ಹಾಗೂ ಭಾರಿ ಗಾತ್ರದ ಮಾಹಿತಿಗಳನ್ನು ಸೋರಿಕೆ ಮಾಡಬಹುದು. ಇತ್ತೀಚೆಗೆ ಅಮೆರಿಕದ ಟಾರ್ಗೆಟ್ ಹಾಗೂ ಆಶ್ಲೆ ಮ್ಯಾಡಿಸನ್ ವೆಬ್ ಸೈಟ್ ನಿಂದ ಲಕ್ಷಾಂತರ ಗ್ರಾಹಕರ ಮಾಹಿತಿ ಸೋರಿಕೆಯಾಗಿದ್ದನ್ನು ಇಲ್ಲಿ ಉದಾಹರಿಸಬಹುದು. ಇದು ಸಂಸ್ಥೆಗಷ್ಟೇ ಅಲ್ಲ, ಸಾರ್ವಜನಿಕರಿಗೂ ಸಮಸ್ಯೆ ತಂದೊಡ್ಡುತ್ತದೆ.

ಮಾರ್ಚ್ ತಿಂಗಳಿನಲ್ಲಿ ಭಾರತೀಯ ಭೂ ಸೇನಾಧಿಕಾರಿಗಳ ಮಾಹಿತಿ ಸೋರಿಕೆಯಿಂದ ಆದ ಅನರ್ಥಗಳು ನೆನಪಿರಬಹುದು. ಹೀಗಾಗಿ ಹೆಚ್ಚಿನ ಸುರಕ್ಷಿತೆ ಅಗತ್ಯವಿದೆ ಎಂದು ಸಿಮನ್ ಹೇಳಿದ್ದಾರೆ. (ಐಎಎನ್ ಎಸ್)

English summary
In this era of technological advancements, the information technology (IT) world carries a lot of security challenges, a cyber security expert has said in the run-up to an international cyber security conclave here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X