ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಬಳಿಕ: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಬೂಮ್!

|
Google Oneindia Kannada News

ಬೆಂಗಳೂರು, ಮೇ 18: ಕೋವಿಡ್- 19 ಸಾಂಕ್ರಾಮಿಕವು ದೇಶಾದ್ಯಂತ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪರಿಣಾಮ ಬೀರಿದ್ದರೂ, ಬೆಂಗಳೂರು ಮತ್ತು ಪುಣೆ ಮಾರುಕಟ್ಟೆಯಲ್ಲಿ ಮನೆ ಖರೀದಿದಾರರ ಭಾವನೆಗಳ ಮೇಲೆ ಇದು ಕನಿಷ್ಠ ಪರಿಣಾಮ ಬೀರಿದೆ. ದೆಹಲಿ/ಎನ್‍ಸಿಆರ್ ಮತ್ತು ಮುಂಬೈ ಮಹಾನಗರಗಳಲ್ಲಿ ಬೆಲೆ ವಿಚಾರದಲ್ಲಿ ಅನಿಶ್ಚಿತತೆ ಗೃಹ ಖರೀದಿದಾರರಲ್ಲಿ ಇರುವುದು ಇತ್ತೀಚಿನ ಮ್ಯಾಜಿಕ್‍ಬ್ರಿಕ್ಸ್ ಕೋವಿಡ್-19 ಆಸ್ತಿ ಖರೀದಿದಾರರ ಭಾವನೆಗಳ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

Recommended Video

ಗೌಡರ ಹೆಸರಲ್ಲಿ ರಕ್ತದಾನ ಮಾಡಿದ ಶರವಣ | TA Sharavana | JDS

ಮ್ಯಾಜಿಕ್‍ಬ್ರಿಕ್ಸ್ ಸಮೀಕ್ಷೆಯಿಂದ ತಿಳಿದುಬರುವಂತೆ, ಕೋವಿಡ್-19 ಸಾಂಕ್ರಾಮಿಕದಿಂದಾಗಿ ತಾತ್ಕಾಲಿಕ ಪರಿಣಾಮ ಉಂಟಾಗಿದ್ದು, ಒಂದನೇ ಸ್ತರದ ನಗರಗಳಲ್ಲಿ ಗೃಹ ಖರೀದಿದಾರರ ಖರೀದಿ ಭಾವನೆಗಳ ಮೇಲೆ ಶೇಕಡ 80ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಪರಿಣಾಮ ಬೀರಿದೆ.

ಕೋವಿಡ್19 ನಡುವೆ ಬೆಂಗಳೂರಿನ ವಸತಿ, ಅಪಾರ್ಟ್ಮೆಂಟ್ ಬೆಲೆ ಏರಿಕೆಕೋವಿಡ್19 ನಡುವೆ ಬೆಂಗಳೂರಿನ ವಸತಿ, ಅಪಾರ್ಟ್ಮೆಂಟ್ ಬೆಲೆ ಏರಿಕೆ

ಆದಾಗ್ಯೂ ಪುಣೆ ಮತ್ತು ಬೆಂಗಳೂರು ಮಹಾನಗರಗಳಲ್ಲಿ ಕೋವಿಡ್-19 ಬಳಿಕವೂ ಖರೀದಿದಾರರಲ್ಲಿ ಗೃಹ ಖರೀದಿಯ ಮನೋಭಾವನೆಗಳು ಉಳಿದುಕೊಂಡಿದೆ. ಸಮೀಕ್ಷೆಯಿಂದ ತಿಳಿದುಬರುವಂತೆ ಗ್ರಾಹಕರ ಖರೀದಿ ಭಾವನೆಗಳು ದೆಹಲಿ/ ಎನ್‍ಸಿಆರ್ ಮತ್ತು ಮುಂಬೈ ಮಹಾನಗರಗಳಲ್ಲಿ ರಾಷ್ಟ್ರೀಯ ಲಾಕ್‍ಡೌನ್‍ಗಿಂತ ಮುನ್ನವೇ ಇಳಿಮುಖವಾಗಿದ್ದು, ಅದೇ ಪರಿಸ್ಥಿತಿ ಈ ಸಂಕಷ್ಟದ ಬಳಿಕವೂ ಮುಂದುವರಿಯಲಿದೆ.

ಮ್ಯಾಜಿಕ್‍ಬ್ರಿಕ್ಸ್ ಸಿಇಓ ಸುಧೀರ್ ಪೈ

ಮ್ಯಾಜಿಕ್‍ಬ್ರಿಕ್ಸ್ ಸಿಇಓ ಸುಧೀರ್ ಪೈ

ಗ್ರಾಹಕರ ಭಾವನೆಗಳ ಸಮೀಕ್ಷೆ ಬಗ್ಗೆ ಮಾತನಾಡಿದ ಮ್ಯಾಜಿಕ್‍ಬ್ರಿಕ್ಸ್ ಸಿಇಓ ಸುಧೀರ್ ಪೈ, "ಕೋವಿಡ್-19 ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾಗಿ ಜಾರಿಯಾದ ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದ ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗಿದೆ. ಆದಾಗ್ಯೂ ಸಮೀಕ್ಷೆಯಿಂದ ತಿಳಿದು ಬರುವಂತೆ, ಶೇಕಡ 67ರಷ್ಟು ಗೃಹ ಖರೀದಿದಾರರು ತಮ್ಮ ನಿರ್ಧಾರದಂತೆ ಮುಂದುವರಿಯಲು ಬಯಸಿದ್ದಾರೆ ಹಾಗೂ ಕಡಿಮೆ ಬಜೆಟ್‍ನ ಆಸ್ತಿಯನ್ನು ಖರೀದಿಸಲು ಬಯಸಿದ್ದಾರೆ. ಕಳೆದ ಆರು ತಿಂಗಳಲ್ಲಿ, ಬಳಕೆದಾರರಿಂದ ಚಾಲಿತವಾಗಿರುವ ಬೆಂಗಳೂರು ಮತ್ತು ಪುಣೆ ಮಾರುಕಟ್ಟೆಗಳು, ಇಡೀ ಭಾರತದಲ್ಲೇ ಅತ್ಯುತ್ತಮ ಸಾಧನೆ ತೋರಿದ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಾಗಿವೆ. ಮಾರುಕಟ್ಟೆಯ ಭಾವನೆಗಳಿಂದ ತಿಳಿದು ಬರುವಂತೆ ಈ ಪ್ರವೃತ್ತಿ ಮುಂದುವರಿಯಲಿದೆ. ಆಸ್ತಿಗಳ ಪೈಕಿ ಪೂರ್ಣಗೊಂಡ ಮನೆಗಳತ್ತ ಗ್ರಾಹಕರ ಒಲವು ಹೆಚ್ಚುತ್ತಿದೆ. ಜತೆಗೆ ತ್ವರಿತ ಹಾಗೂ ಸಾಕಷ್ಟು ಪೂರೈಕೆ ಇರುವುದು ಪುನಶ್ಚೇತನದ ಪ್ರಮುಖ ಅಂಶವಾಗಲಿದೆ" ಎಂದು ವಿವರಿಸಿದರು.

ಕನಿಷ್ಠ ಬೆಲೆ ಇಳಿಕೆ ಕಂಡುಬಂದಿದೆ

ಕನಿಷ್ಠ ಬೆಲೆ ಇಳಿಕೆ ಕಂಡುಬಂದಿದೆ

ದೊಡ್ಡ ಮಾರುಕಟ್ಟೆಗಳಾದ್ಯಂತ ಬೆಲೆ ವಿಚಾರದಲ್ಲಿ ಅನಿಶ್ಚಿತತೆ ಕಂಡುಬಂದಿದ್ದು, ಬೆಂಗಳೂರು (5%) ಮತ್ತು ಪುಣೆ (2%) ಮಾರುಕಟ್ಟೆಗಳಲ್ಲಿ ಮಾತ್ರ ಹೈದರಾಬಾದ್ ಮತ್ತು ಅಹ್ಮದಾಬಾದ್ ಮಹಾನಗರಗಳಿಗೆ ಹೋಲಿಸಿದರೆ ಲಾಕ್‍ಡೌನ್ ಅವಧಿಯಲ್ಲಿ ಕನಿಷ್ಠ ಬೆಲೆ ಇಳಿಕೆ ಕಂಡುಬಂದಿದೆ. ಕಳೆದ ಒಂದು ವರ್ಷದಲ್ಲಿ ಇಲ್ಲಿ ಬೆಲೆ ಏರಿಕೆ ಪ್ರವೃತ್ತಿ ಕಂಡುಬಂದಿದ್ದರೆ, ಇದೀಗ ಕೋವಿಡ್-19 ನಿಂದಾಗಿ ಹೈದರಾಬಾದ್ ಮತ್ತು ಅಹ್ಮದಾಬಾದ್ ಮಾರುಕಟ್ಟೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ.

ಕಳೆದ 12 ತಿಂಗಳಲ್ಲಿ, ಹೈದರಾಬಾದ್‍ನ ವಸತಿ ರಿಯಲ್ ಎಸ್ಟೇಟ್ ಹಿಂದಿನ ಒಂದು ವರ್ಷಕ್ಕೆ ಹೋಲಿಸಿದರೆ, ಶೇಕಡ 15ರಷ್ಟು ಬೆಲೆ ಹೆಚ್ಚಳ ಕಂಡಿತ್ತು.

ರಿಯಲ್ ಎಸ್ಟೇಟ್ ಬೆಲೆ ಶೇಕಡ 9ರಷ್ಟು ಇಳಿಕೆ

ರಿಯಲ್ ಎಸ್ಟೇಟ್ ಬೆಲೆ ಶೇಕಡ 9ರಷ್ಟು ಇಳಿಕೆ

ಆದರೆ ಲಾಕ್‍ಡೌನ್ ಕಾರಣದಿಂದ, ಇದೀಗ ರಿಯಲ್ ಎಸ್ಟೇಟ್ ಬೆಲೆ ಶೇಕಡ 9ರಷ್ಟು ಇಳಿದಿದೆ. ಅಹ್ಮದಾಬಾದ್ ವಿಚಾರದಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ. ಹಿಂದಿನ ಒಂದು ವರ್ಷ ಇಲ್ಲಿನ ಬೆಲೆಯಲ್ಲಿ ಶೇಕಡ 8ರಷ್ಟು ಏರಿಕೆ ಕಂಡುಬಂದರೆ, ಲಾಕ್‍ಡೌನ್ ಕಾರಣದಿಂದ ಇದೀಗ ಬೆಲೆ ಶೇಕಡ 7ರಷ್ಟು ಕುಸಿದಿದೆ.

ಎಂಟು ಒಂದನೇ ಸ್ತರದ ನಗರಗಳಲ್ಲಿ ಸರಾಸರಿ ಬೆಲೆ ಇಳಿಕೆ ಶೇಕಡ 4ರಷ್ಟಿದ್ದರೆ, ಬೆಂಗಳೂರು, ಅಹ್ಮದಾಬಾದ್, ಪುಣೆ ಮತ್ತು ಚೆನ್ನೈನ ಬಹುತೇಕ ಗೃಹ ಖರೀದಿದಾರರು, ಈ ಸಂಕಷ್ಟದದಿಂದಾಗಿ ಬೆಲೆಯಲ್ಲಿ ವ್ಯತ್ಯಯವಾಗುವುದು ನಿಶ್ಚಿತ ಎಂದು ನಂಬಿದ್ದಾರೆ.

ಆನ್‍ಲೈನ್ ವೀಕ್ಷಣೆ, ಖರೀದಿ

ಆನ್‍ಲೈನ್ ವೀಕ್ಷಣೆ, ಖರೀದಿ

ಕೋವಿಡ್-19 ಬಳಿಕ, ಬಹುತೇಕ ಮಂದಿ ಗೃಹ ಖರೀದಿದಾರರು ನಿರ್ದಿಷ್ಟ ರಿಯಾಯ್ತಿ ದರದಲ್ಲಿ ತಕ್ಷಣವೇ ಖರೀದಿ ಮಾಡಲು ಬಯಸಿದ್ದಾರೆ. ಸರಾಸರಿ 20% ರಿಯಾಯ್ತಿಯು ಖರೀದಿ ಪ್ರಕ್ರಿಯೆಗೆ ವೇಗ ನೀಡುವಲ್ಲಿ ಸಹಕಾರಿಯಾಗಲಿದ್ದು, ರಿಯಲ್ ಎಸ್ಟೇಟ್ ಬೆಲೆ ಶೇಕಡ 10ಕ್ಕಿಂತ ಅಧಿಕ ಪ್ರಮಾಣದಲ್ಲಿ ಇಳಿದರೆ ತಕ್ಷಣವೇ ಖರೀದಿ ಮಾಡಲು ಶೇಕಡ 2ರಷ್ಟು ಮಂದಿ ಬಯಸಿದ್ದಾರೆ.

ಸಮೀಕ್ಷೆಯಿಂದ ತಿಳಿದು ಬರುವ ಇನ್ನೊಂದು ಅಂಶವೆಂದರೆ, ಬೆಲೆಯಲ್ಲಿ ಇಳಿಕೆಯಾಗುವ ಜತೆಗೆ, ಮನೆ ಖರೀದಿ ನಿರ್ಧಾರದಂತೆ ಮುಂದೆ ಹೆಜ್ಜೆ ಇಡಲು ಬಯಸುವ ಗೃಹ ಖರೀದಿದಾರರು, ಡೌನ್‍ಪೇಮೆಂಟ್, ವುಡ್‍ವರ್ಕ್ ಮತ್ತು ಕಿಚನ್ ಫಿಟ್ಟಿಂಗ್‍ಗಳ ಹಣಕಾಸು ಷರತ್ತುಗಳು ಸಡಿಲಗೊಳ್ಳಬೇಕು ಎಂದು ಬಯಸಿದ್ದಾರೆ. ಇದು ಖರೀದಿ ಬಳಿಕದ ಹೊರೆಯನ್ನು ಕಡಿಮೆ ಮಾಡಲಿದ್ದು, ಅಂತೆಯೇ ವಿಡಿಯೊ ಮತ್ತು ಫೋಟೊಗಳ ಮೂಲಕ, ಆನ್‍ಲೈನ್ ದಾಖಲೆಗಳು ಮತ್ತು ಆನ್‍ಲೈನ್ ರಿಜಿಸ್ಟ್ರಿ ಮೂಲಕ ಕನಿಷ್ಠ ಸ್ಥಳ ವೀಕ್ಷಣೆಗೆ ಒಲವು ತೋರಿದ್ದಾರೆ.

English summary
The outbreak of COVID-19 has impacted real estate activities across the country, however had the least impact on the home buyers’ sentiment in the markets of Bengaluru and Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X