ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ದಾಖಲೆ ನಿರ್ಮಿಸಿದ 'Ancestral'

|
Google Oneindia Kannada News

ಬೆಂಗಳೂರು, ಮೇ. 25: ಬೆಂಗಳೂರಿನ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಎರಡು ಕಟ್ಟಡಗಳು ದಾಖಲೆ ಬೆಲೆಗೆ ಮಾರಾಟವಾಗಿದೆ! ಲ್ಯಾವೆಲ್ಲೆ ರಸ್ತೆಯಲ್ಲಿರುವ ಬಂಗಲೆ ಚದರಡಿ 64 ಸಾವಿರ ರೂ.ಗೆ ಮಾರಾಟವಾಗಿ ಮೊದಲ ದಾಖಲೆ ಸೃಷ್ಟಿಸಿದೆ. ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಮತ್ತೊಂದು ಬಂಗಲೆ ಚದರಡಿ 42 ಸಾವಿರ ರೂ.ಗೆ ಮಾರಾಟವಾಗುವ ಮೂಲಕ ಎರಡನೇ ದಾಖಲೆ ಸೃಷ್ಟಿಸಿದೆ.

ಕೋವಿಡ್ ನಂತರ ತಣ್ಣಗಾಗಿದ್ದ ರಿಯಲ್ ಎಸ್ಟೇಟ್ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಎರಡು ಕಟ್ಟಡಗಳು ದಾಖಲೆ ಬೆಲೆಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿವೆ. ಐದು ವರ್ಷದ ಹಿಂದಿನ ದರಕ್ಕೆ ಹೋಲಿಸಿದ್ರೆ ಶೇ. 40 ರಷ್ಟು ಬೆಲೆ ಹೆಚ್ಚಳವಾಗಿದೆ. ಈ ಎರಡೂ ಕಟ್ಟಡಗಳ ಮಾರಾಟ ಬೆಲೆ ನೋಡಿ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮವೇ ದಂಗಾಗಿದೆ.

ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಸಾದ್ವಾನಿ ರಿಯಲ್ ಎಸ್ಟೇಟ್ ಹೋಂಲ್ಡಿಂಗ್ಸ ನಿರ್ಮಿಸಿರುವ 4300 ಚದರಡಿಯ ಬಂಗಲೆ ಚದರಡಿ 64,000 ರೂ.ನಂತೆ 27.05 ಕೋಟಿ ರೂ.ಗೆ ಮಾರಾಟವಾಗಿದೆ. ಬೆಂಗಳೂರು ಕೇಂದ್ರ ಭಾಗದಲ್ಲಿರುವ ಈ ಬಂಗಲೆ ಮಾರಾಟ ಇದೀಗ ಬೆಂಗಳೂರಿನಲ್ಲಿ ಈ ಹಿಂದೆ ಇದ್ದ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದೆ. ಚದರಡಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕಟ್ಟಡ ಎಂಬ ಕೀರ್ತಿಗೆ ಒಳಗಾಗಿದೆ. ಈ ಬಂಗಲೆಯನ್ನು ಐದು ವರ್ಷದ ಹಿಂದೆ ನಿರ್ಮಾಣವಾಗಿತ್ತು. ಲ್ಯಾವೆಲ್ಲೆ ರಸ್ತೆಯಲ್ಲಿ ಚದರಡಿ ಜಾಗದ ಬೆಲೆ 40,000 ರೂ. ಇತ್ತು. ಇದೀಗ ಕಟ್ಟಡ ಒಳಗೊಂಡಂತೆ ಚದರಡಿ 64 ಸಾವಿರ ರೂ.ಗೆ ಪರಭಾರೆಯಾಗಿ ದಾಖಲೆ ಸೃಷ್ಟಿಯಾಗಿದೆ.

8321 ಚದರಡಿ ಕಟ್ಟಡ ಬರೋಬ್ಬರಿ 35 ಕೋಟಿ

8321 ಚದರಡಿ ಕಟ್ಟಡ ಬರೋಬ್ಬರಿ 35 ಕೋಟಿ

ಇನ್ನು ಪ್ರೆಸ್ಟೀಜ್ ಗ್ರೂಪ್ ನ ಕಟ್ಟಡದ ಕಥೆ ಬೇರೆ. ವಿಠ್ಠಲ್ ಮಲ್ಯ ರಸ್ತೆಯಲ್ಲಿ ಪ್ರೆಸ್ಟೀಜ್ ಗ್ರೂಫ್ ನಿರ್ಮಿಸಿರುವ ಕಿಂಗ್ ಫಿಷರ್ ಟವರ್ ನಲ್ಲಿ ಚದರಡಿ 42,000 ರೂ.ಗೆ ಮಾರಾಟವಾಗಿದೆ. 8321 ಚದರಡಿ ಕಟ್ಟಡ ಬರೋಬ್ಬರಿ 35 ಕೋಟಿ ರೂಪಾಯಿಗೆ ಮಾರಾಟವಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಎರಡನೇ ದಾಖಲೆ ಸೃಷ್ಟಿಸಿದೆ.

ಕೋವಿಡ್ ನಂತರ ಉತ್ತಮ ಬೆಲೆ

ಕೋವಿಡ್ ನಂತರ ಉತ್ತಮ ಬೆಲೆ

ಕೋವಿಡ್ ನಂತರ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರ ಹುಬ್ಬೆರುವಂತೆ ಮಾಡಿದೆ. ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಕಿಂಗ್ ಫಿಷರ್ ಟವರ್ ನಲ್ಲಿ 34 ಅಂತಸ್ತಿನ ಆಲ್ಟ್ರಾ ಲಕ್ಸುರಿ ಅಪಾರ್ಟ್ ಮೆಂಟ್ ನಿರ್ಮಾಣವಾಗಿದೆ. ಈ ಜಾಗ ವಿಜಯ ಮಲ್ಯ ಅವರಿಗೆ ಸೇರಿದ್ದಾಗಿದೆ.

ಜಂಟಿ ಒಡಂಬಡಿಕೆ

ಜಂಟಿ ಒಡಂಬಡಿಕೆ

ಪ್ರೆಸ್ಟೀಜ್ ಗ್ರೂಪ್ ಮತ್ತು ವಿಜಯ ಮಲ್ಯ ಜಂಟಿ ಅಭಿವೃದ್ಧಿ ಒಡಂಬಡಿಕೆ ಮಾಡಿಕೊಂಡು 2010 ರಲ್ಲಿ ಲಕ್ಸುರಿ ಅಪಾರ್ಟ್ ಮೆಂಟ್ ಟವರ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ಶೇ. 41 ಪಾಲು ವಿಜಯ ಮಲ್ಯ ಅವರಿಗೆ ನೀಡಲಾಗಿತ್ತು. ಕಿಂಗ್ ಫಿಷರ್ ಟವರ್ ನಿರ್ಮಾಣ ಮಾಡುವ ವೇಳೆ ಒಂದು ಚದರಡಿ 22 ಸಾವಿರ ರೂ.ಗೆ ಮಾರಾಟ ವಾಗಿತ್ತು. ಹದಿನಾಲ್ಕು ವರ್ಷಗಳಿಗೆ ಹೋಲಿಸಿದ್ರೆ, ದುಪ್ಪಟ್ಟು ಬೆಲೆ ಆಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರೆಸ್ಟೀಜ್ ಗ್ರೂಪ್ ನ ಅಧ್ಯಕ್ಷ ಇರ್ಫಾನ್ ರಜಾಕ್, "ಲಕ್ಸುರಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇದು ಮೈಲಿಗಲ್ಲೇ. ಜಾಗ ಮತ್ತು ಅಲ್ಲಿನ ಸೌಲಭ್ಯಗಳು ಮರು ಮಾರಾಟದ ಬೆಲೆಯನ್ನು ಹೆಚ್ಚಿಸಿದೆ," ಎಂದು ತಿಳಿಸಿದ್ದಾರೆ.

ಎಂಬೆಸಿ ಗ್ರೂಪ್

ಎಂಬೆಸಿ ಗ್ರೂಪ್

2017 ರಲ್ಲಿ ಎಂಬೆಸಿ ಗ್ರೂಪ್ ಬೆಂಗಳೂರಿನ ಹೆಬ್ಬಾಳದಲ್ಲಿರುವ ಅಪಾರ್ಟ್‌ಮೆಂಟ್‌ ಅನ್ನು ಕ್ವೆಸ್ಟ್ ಗ್ಲೋಬಲ್ ಸಂಸ್ಥೆಗೆ ಮಾರಾಟ ಮಾಡಿತ್ತು. ಚದಡಿ 31 ಸಾವಿರ ರೂ.ಗೆ ಮಾರಾಟ ಮಾಡುವ ಮೂಲಕ ಬೆಂಗಳೂರಿನಲ್ಲಿ ಅತಿ ದುಬಾರಿ ಬೆಲೆಗೆ ಮಾರಾಟವಾದ ಕಟ್ಟಡ ಎಂಬ ದಾಖಲೆ ಸೃಷ್ಟಿಯಾಗಿತ್ತು. ಕ್ವಿಸ್ಟ್ ಗ್ಲೋಬಲ್ ನ ಮಾಲೀಕ ಅಜಿತ್ ಪ್ರಭು ಚದರಡಿಯನ್ನು 31 ಸಾವಿರ ರೂ. ನಂತೆ ಖರೀದಿ ಮಾಡಿದ್ದರು. ಇದೀಗ ಎಲ್ಲಾ ದಾಖಲೆಗಳನ್ನು ಇತ್ತೀಚೆಗೆ ನಡೆದ ರಿಯಲ್ ಎಸ್ಟೇಟ್ ನ ಎರಡು ವಹಿವಾಟು ಅಳಿಸಿ ಹಾಕಿವೆ.

Recommended Video

Gujarat ವಿರುದ್ಧ Rajastan ಸೋಲೋದಕ್ಕೆ ಪ್ರಮುಖ ಮೂರು ಕಾರಣ ಇಲ್ಲಿದೆ | #cricket #ipl2022 | Oneindia Kannada

English summary
Bengaluru Real Estate Record: Two recent real estate transactions in the city center appear to have set new bench mark. An ancestral bungalow on Lavelle road spread across 4300 sq ft was sold 27 Crore know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X