ಅಮೇಜಾನ್, ಪ್ಲಿಪ್ ಕಾರ್ಟ್, ಸ್ನಾಪ್ ಡೀಲ್, ಪೇಟಿಯಂನಿಂದ ಭರಪೂರ ಕೊಡುಗೆಗಳು

Posted By:
Subscribe to Oneindia Kannada

ಬೆಂಗಳೂರು ಏಪ್ರಿಲ್ 12 : ಆನ್ ಲೈನ್ ಶಾಪಿಂಗ್ ತಾಣಗಳಲ್ಲಿ ಜನಮನ್ನಣೆ ಗಳಿಸಿರುವ ಭಾರತದ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್, ಪ್ಲಿಪ್ ಕಾರ್ಟ್, ಸ್ನಾಪ್ ಡೀಲ್, ಪೇಟಿಯಂ ಹಾಗೂ ಡಾಮಿನೋಸ್ ಗ್ರಾಹರನ್ನು ತಮ್ಮ ಸೆಳೆಯಲು ಈ ವಾರದ ಬೇಸಿಗೆಯ ಭರಪೂರ ಕೊಡುಗೆಗಳು ಹೊತ್ತು ತಂದಿವೆ.

ಆನ್ ಲೈನ್ ಮಾರುಕಟ್ಟೆಗಳಲ್ಲಿ ತಮ್ಮದೆ ಛಾಪು ಮೂಡಿಸಿರುವ ಅಮೇಜಾನ್, ಪ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್, ಪೇಟಿಯಂ ಹಾಗೂ ಡಾಮಿನೋಸ್ ಸಂಸ್ಥೆಗಳು ತನ್ನ ಗ್ರಾಹಕರಿಗೆ ಒಂದಲ್ಲ ಒಂದು ಆಫರ್ಸ್ ಗಳನ್ನು ನೀಡುತ್ತಾ ಬಂದಿವೆ. ಅಷ್ಟೇ ಅಲ್ಲದೇ ನಾ ಮುಂದು ನೀ ಮುಂದು ಎಂದು ಶಾಪಿಂಗ್ ತಾಣಗಳು ಗ್ರಾಹಕರ ಮನೆ ಬಾಗಿಲಿಗೆ ಹೋಗಿ ತಲುಪಿಸುತ್ತಿವೆ.

ಹಬ್ಬ-ಹರಿದಿನಗಳು, ಮಳೆ ಚಳಿ ಹಾಗೂ ಬೇಸಿಗೆ ಕಾಲಗಳಲ್ಲೂ ವಿವಿಧ ತರಹನಾದ ಅಭೂತ ಪೂರ್ವ ಕೈಗೆಟಕುವ ದರದಲ್ಲಿ ನೀಡುತ್ತಿವೆ. ಅದರಂತೆಯೇ ನಿಮಗಾಗಿ ಈ ವಾರದ ಬೇಸಿಗೆ ಕೊಡುಗಳನ್ನು ನೀಡುತ್ತಿವೆ. ಹಾಗಾದರೇ ಇನ್ನೇಕೆ ತಡ ಆಫರ್ಸ್ ಗಳಾವುವು ಎಂದು ತಿಳಿದು ಈಗಲೇ ಖರೀದಿಸಿ ಆನಂದಿಸಿ.

ಅಮೇಜಾನ್ ಇಂಡಿಯಾ

ಅಮೇಜಾನ್ ಇಂಡಿಯಾ

ಕಳೆದ ಐದು ವರ್ಷಗಳ ಹಿಂದೆ ಬಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಆನ್ ಲೈನ್ ಮಾರುಕಟ್ಟೆ ತಾಣ ಅಮೇಜಾನ್ ಭಾರತದ ಇ-ಕಾಮರ್ಸ್ ಸಂಸ್ಥೆಗಳಲ್ಲಿ ತನ್ನದೆಯಾದ ಹೆಸರು ಮಾಡಿದೆ. ವಿಶ್ವದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ಜೆಫ್ ಬೆಜೋಸ್ ಅವರು ಅಮೇಜಾನ್ ಕಂಪನಿಯ ಸಿಇಒ ಆಗಲಿದ್ದಾರೆಂಬ ಗುಸು-ಗುಸು ಸುದ್ದಿಗಳು ಕೇಳಿಬರುತ್ತಿವೆ. ಇನ್ನು ಇದರ ಕೊಡುಗಳು ತಿಳಿಯುವುದರೆ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ರಿಯಾಯಿತಿ.. ಪ್ರೈಮ್ ಗ್ರಾಹಕರು ಮೋಟೋ ಜಿs ಮೊಬೈಲ್ ಮೇಲೆ 1000 ರು.ಕ್ಯಾಶ್ ಬ್ಯಾಕ್. ಸ್ಯಾಮ್ಸಂಗ್ ಗ್ಯಾಲಕ್ಸಿ C7 ಫೋನ್ ಮೇಲೆ 2000 ರು ಕಡಿತ. ಹಾಗೂ ಕ್ರೆಡಿಟ್ ಕಾರ್ಡ್ ನಿಂದ ಇಎಂಐ ಸೌಲಭ್ಯ ಸೇರಿದಂತೆ ಇತರೆ ಕೆಲ ವಸ್ತುಗಳ ಮೇಲೆ ಶೇ 50ರಷ್ಟು ರಿಯಾಯಿತಿ ನೀಡುತ್ತಿದೆ.

ಡಾಮಿನೋಸ್

ಡಾಮಿನೋಸ್

ಡಾಮಿನೋಸ್ ಎಂದಾಕ್ಷಣ ಎಲ್ಲರ ಬಾಯಲ್ಲಿ ನೀರು ಬರುವುದು ಸರ್ವೇ ಸಾಮಾನ್ಯ. ಏಕೆಂದರೆ ಡಾಮಿನೋಸ್ ಪಿಜ್ಜಾ ನೆನಪಿಗೆ ಬರುತ್ತದೆ. ಹೌದು. ಡಾಮಿನೋಸ್ ತನ್ನ ಗ್ರಾಹರಿಗೆ ರುಚಿಕರವಾದ ಪಿಜ್ಜಾವನ್ನು ಮನೆ-ಮನೆ ತಲುಪಿಸಿ ಬಹಳಷ್ಟು ಗ್ರಾಹರನ್ನು ಹೊಂದಿದೆ. 295 ರೂಪಾಯಿಯ ಪಿಜ್ಜಾವನ್ನು ಕೇವಲ 199 ರುಗೆ ನೀಡುತ್ತಿದೆ. "MOB20" ಕೋಡನ್ನು ಬಳಸಿ 500 ರು ಪಿಜ್ಜಾವನ್ನು 300ರುಗೆ ಪಡೆಯಿರಿ. ಇನ್ನು "0L020" ಈ ಕೋಡ್ ಬಳಿಸಿದರೆ ಶೇ 20ರಷ್ಟು ರಿಯಾಯಿತಿ.

ಪೇಟಿಯಂ

ಪೇಟಿಯಂ

ಕ್ಯಾಶ್ ಲೆಸ್ ಎನ್ನುವ ಮಾತುಗಳು ಕೇಳಿ ಬಂದಾಗಿನಿಂದ ಕಾಮರ್ಸ್ ಕಂಪೆನಿ ‘ಪೇಟಿಯಂ' ಜಾಲವನ್ನು ಮೊರೆ ಹೋಗಿದ್ದಾರೆ. ಇನ್ನು ಈ ಪೇಟಿಯಂನಿಂದ ಹಲವು ಆಫರ್ಸ್ ಗಳು ಕೂಡ ಗ್ರಾಹರಿಗೆ ದೊರೆಯಲಿವೆ. ಪೇಟಿಯಂನಿಂದ ಜೀನ್ಸ್ ಪ್ಯಾಂಟ್ ಖರೀದಿಸಿದೆ ಶೇ 70ರಷ್ಟು ರಿಯಾಯಿತಿ. ವಿಮಾನಗಳ ಟಿಕೆಟ್ ಬುಕಿಂಗ್ ವೇಳೇ "FLYDAY" ಕೋಡ್ ಬಳಸಿದರೆ 750 ರು ಕ್ಯಾಶ್ ಬ್ಯಾಕ್ ಸಿಗಲಿದೆ. ಹಾಗೂ ಪೇಟಿಯಂ ಸಹಾಯದಿಂದ ಸಿನಿಮಾ ಟಿಕೆಟ್, ಹ್ಯಾಡ್ ಬ್ಯಾಗ್ಸ್, ಸೋರ್ಟ್ಸ್ ಶೂಗಳ ದರದ ಮೇಲೆ ರಿಯಾಯಿತಿ ನೀಡಲಾಗಿದೆ.

ಪ್ಲಿಪ್ ಕಾರ್ಟ್

ಪ್ಲಿಪ್ ಕಾರ್ಟ್

ಆನ್ ಲೈನ್ ಶಾಪಿಂಗ್ ಮಾರುಕಟ್ಟೆಗಳಲ್ಲಿ ಪ್ರಮುಖ ಶಾಪಿಂಗ್ ತಾಣವಾದ ಪ್ಲಿಪ್ ಕಾರ್ಟ್ ದೇಶದ ಮೂಲೆ-ಮೂಲೆಗಳಲ್ಲಿ ತನ್ನ ಗ್ರಾಹಕರನ್ನು ಹೊಂದಿದೆ. ಹಾಗೂ ಪ್ಲಿಪ್ ಕಾರ್ಟ್ ಪ್ರತಿಯೊಂದು ವಸ್ತುಗಳ ಮೇಲೆ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡಿ ಬಹಳಷ್ಟು ಗ್ರಾಹರನ್ನು ಸಂಪಾದಿಸಿದೆ. ಅದರಂತೆ ಈ ವಾರದಲ್ಲಿ ಸ್ಯಾಮ್ಸಂಗ್ ಮೊಬೈಲ್, ಮೈಕ್ರೋಮ್ಯಾಕ್ಸ್ ಪವರ್ ಬ್ಯಾಂಕ್ ಸೇರಿದಂತೆ ವಿವಿಧ ವಸ್ತುಗಳ ಮೇಲೆ ಭರಪೂರ ಕೊಡುಗೆಗಳನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ ಇಎಂಐಗಳ ಮೇಲೆ ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ.

ಸ್ನಾಪ್ ಡೀಲ್

ಸ್ನಾಪ್ ಡೀಲ್

ಈ ವಾರದ ಬೇಸಿಗೆ ಕೊಡುಗೆಗಳನ್ನು ಸ್ನ್ಯಾಪ್ ಡೀಲ್ ತನ್ನ ಗ್ರಾಹಕರಿಗೆ ಹೊತ್ತು ತಂದಿದೆ. ಬ್ರ್ಯಾಂಡೆಡ್ ಕಂಪನಿಗಳಾದ ಪೂಮಾ. ಸ್ಪರ್ಕ್ಸ್ ಶೂಗಳ ಮೇಲೆ ರಿಯಾಯಿತಿ ನೀಡಿದೆ. ಹಾಗೂ 1899 ರು. ಮೌಲ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3 ಮೊಬೈಲ್ ನ್ನು ಡಿಸ್ಕೌಂಟ್ ಆಫರ್ ನಲ್ಲಿ ಕೇವಲ 7490 ರು. ಗೆ ನೀಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The e-commerce giants are involved in a tight war when it comes to giving the best offers to lure the customers. Anyways, it's us, the customers, who are bound to gain from these offers, right? My today's pick for the top 5 companies is Amazon, Dominos, Paytm, Flipkart and Snapdeal. Let us have a look at the exciting deals these companies have to offer.
Please Wait while comments are loading...