ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಟಾ ಇಂಡಿಯಾ ತ್ರೈಮಾಸಿಕ ವರದಿ: 101 ಕೋಟಿ ರೂ. ನಷ್ಟ

|
Google Oneindia Kannada News

ನವದೆಹಲಿ, ಆಗಸ್ಟ್‌ 08: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೂ ತಯಾರಿಕಾ ಕಂಪನಿ ಬಾಟಾ ಇಂಡಿಯಾಗೆ 100.88 ಕೋಟಿ ರೂಪಾಯಿ ನಷ್ಟವಾಗಿದೆ.

ಕೊರೊನಾವೈರಸ್ ಪರಿಣಾಮ ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ವ್ಯಾಪಾರದಲ್ಲಿ ತೀವ್ರ ಕುಸಿತವಾದ ಹಿನ್ನೆಲೆಯಲ್ಲಿ ಭಾರೀ ಮಟ್ಟದಲ್ಲಿ ತ್ರೈಮಾಸಿಕ ನಷ್ಟ ಕಂಡಿದೆ. ಒಂದು ವರ್ಷದ ಹಿಂದೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 100.97 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು ಎಂದು ಬಾಟಾ ಇಂಡಿಯಾ ಬಿಎಸ್ಇ ಫೈಲಿಂಗ್ ನಲ್ಲಿ ತಿಳಿಸಿದೆ

Bata India Q1 Report: Net Loss 101 Crore

ಪ್ರಸಕ್ತ ತ್ರೈಮಾಸಿಕದಲ್ಲಿ ಅದರ ಆದಾಯವು ಶೇ. 84.69ಕ್ಕೆ ಇಳಿದಿದ್ದು 135.07 ಕೋಟಿ ರೂ.ಗೆ ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ 882.75 ಕೋಟಿ ರೂ. ಆಗಿತ್ತು.

ವೊಡಾಫೋನ್ ಐಡಿಯಾ ತ್ರೈಮಾಸಿಕ ನಷ್ಟ 25,460 ಕೋಟಿ ರೂಪಾಯಿವೊಡಾಫೋನ್ ಐಡಿಯಾ ತ್ರೈಮಾಸಿಕ ನಷ್ಟ 25,460 ಕೋಟಿ ರೂಪಾಯಿ

ತ್ರೈಮಾಸಿಕದ ಕಾರ್ಯಾಚರಣೆಗಳಿಂದ ಅದರ ಆದಾಯವು "ಕಳೆದ ವರ್ಷ ಇದೇ ಅವಧಿಯಲ್ಲಿ ಹೋಲಿಸಿದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್‌ಡೌನ್ ಆಗಿದ್ದರಿಂದ ಶೇಕಡಾ 85 ರಷ್ಟು ಕಡಿಮೆಯಾಗಿದೆ "ನಮ್ಮ ಗ್ರಾಹಕರು ಮತ್ತು ನೌಕರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಸರ್ಕಾರ ಮತ್ತು ನಮ್ಮ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ನಾವು ನಮ್ಮ ಕಾರ್ಯಾಚರಣೆಯನ್ನು ಪುನಃ ಪ್ರಾರಂಭಿಸಿದ್ದೇವೆ. ಫಲಿತಾಂಶಗಳನ್ನುಇನ್ನಷ್ಟೇ ನೋಡಬೇಕಿದೆ., "ಎಂದು ಸಂಸ್ಥೆ ಹೇಳಿದೆ.

ಬಾಟಾ ಇಂಡಿಯಾದ ಒಟ್ಟು ವೆಚ್ಚ 321.85 ಕೋಟಿ ರೂ.ಗಳಾಗಿದ್ದು, ಈ ಹಿಂದಿನ 743.81 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 56.72 ರಷ್ಟು ಇಳಿಕೆಯಾಗಿದೆ.

English summary
Shoemaker Bata india ltd on friday reported Rs 100.88 crore for the first quarter ended June 2020 as sales were hit by the coronavirus-related lockdowns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X