ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್, ರೆಸ್ಟೋರೆಂಟ್ ಸದ್ಯಕ್ಕೆ ಓಪನ್ ಮಾಡಲ್ಲ: ಸಚಿವ ನಾಗೇಶ್

|
Google Oneindia Kannada News

ಬೆಂಗಳೂರು, ಮೇ 6: ಮೂರನೇ ಅವಧಿಯ ಲಾಕ್ಡೌನ್ ನಡುವೆಯೂ ಷರತ್ತುಗಳ ನಡುವೆ ಮೇ.04ರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರವು ಸಂಪೂರ್ಣ ಅನುಮತಿ ನೀಡಿದೆ. ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ಭರ್ಜರಿ ಗಳಿಕೆಯೂ ಆಗುತ್ತಿದೆ.

ಆದರೆ, ಇದರ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬುತ್ತಿದೆ. ಆದ್ರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.

ಕರ್ನಾಟಕದ ಗ್ರೀನ್ ಜೋನ್ ನಲ್ಲೂ ಮದ್ಯ ಮಾರಾಟವಿಲ್ಲವೇಕೆ? ಕರ್ನಾಟಕದ ಗ್ರೀನ್ ಜೋನ್ ನಲ್ಲೂ ಮದ್ಯ ಮಾರಾಟವಿಲ್ಲವೇಕೆ?

ಬಾರ್ ಅಂಡ್ ರೆಸ್ಟೋರೆಂಟ್ ಸದ್ಯ ಓಪನ್ ಮಾಡುವ ಚಿಂತನೆ ಇಲ್ಲ, ಬಜೆಟ್ ನಲ್ಲಿ ಹೇಳಿದಂತೆ ಶೇ 6 ರಷ್ಟು ಹಾಗೂ ಈಗ ಶೇ 11ರಷ್ಟು ಸೇರಿಸಿ ಶೇ 17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ, ಈ ಬಗ್ಗೆ ಅಧಿಕೃತ ಅದೇಶದಲ್ಲಿ ವಿವರಣೆ ಸಿಗಲಿದೆ ಎಂದು ಅಬಕಾರಿ ಸಚಿವ ನಾಗೇಶ್
ತಿಳಿಸಿದರು.

ಇನ್ನೂ ಹದಿನೈದು ದಿನಕ್ಕೆ ಬೇಕಾದಷ್ಟು ಮದ್ಯ ನಮ್ಮ ಬಳಿ ಇದೆ. ನಿನ್ನೆಗಿಂತಲೂ ಹೆಚ್ಚು ಆದಾಯ ಇವತ್ತು ಸರ್ಕಾರಕ್ಕೆ ಬಂದಿದೆ.ಇವತ್ತು ಹೊಸ ತೆರಿಗೆ ಸೇರಿದೆ. ಹೀಗಾಗಿ ಹೆಚ್ಚು ರಾಜಧನ ಸರ್ಕಾರಕ್ಕೆ ಬರುತ್ತೆ ಎಂದು ಹೇಳಿದರು.

ಅಕಟಕಟಾ.. 24 ಗಂಟೆಗಳಲ್ಲೇ 197 ಕೋಟಿ ರೂಪಾಯಿ ಮದ್ಯ ಮಾರಾಟ! ಅಕಟಕಟಾ.. 24 ಗಂಟೆಗಳಲ್ಲೇ 197 ಕೋಟಿ ರೂಪಾಯಿ ಮದ್ಯ ಮಾರಾಟ!

ಆಂಧ್ರ ಹಾಗೂ ಮಹಾರಾಷ್ಟ್ರ ಮಾದರಿ ಸೇಲ್

ಆಂಧ್ರ ಹಾಗೂ ಮಹಾರಾಷ್ಟ್ರ ಮಾದರಿ ಸೇಲ್

ಕೊರೊನಾ ನಿಯಂತ್ರಣಕ್ಕಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹದ ಉದ್ದೇಶದಿಂದ ಮದ್ಯಕ್ಕೆ ಹೆಚ್ಚುವರಿ ಬೆಲೆ ಹಾಕುವುದು ಉತ್ತಮ. ಶೇಕಡ 50 ರಷ್ಟು ಅಲ್ಲದಿದ್ದರೂ ಹೆಚ್ಚು ಮಾಡುವುದು ಒಳಿತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಮದ್ಯಪ್ರಿಯರು ಎಷ್ಟೇ ದುಬಾರಿಯಾದರೂ ಖರೀದಿ ಮಾಡ್ತಾರೆ. ದೆಹಲಿ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಾದರಿ ಅಳವಡಿಸುವ ಬಗ್ಗೆ ಚಿಂತನೆ
ಇದ್ದು, ಈ ಸಂಬಂಧ ಚರ್ಚೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಒಂದೇ ದಿನ 197 ಕೋಟಿ ರು

ಒಂದೇ ದಿನ 197 ಕೋಟಿ ರು

ಮಂಗಳವಾರ ಒಂದೇ ದಿನ ಕರ್ನಾಟಕದಲ್ಲಿ 197 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. 2020-21ರ ಪ್ರಸಕ್ತ ಸಾಲಿನಲ್ಲಿ ಅಬಕಾರಿ ಇಲಾಖೆಯು ಬರೋಬ್ಬರಿ 26,440 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಮಂಗಳವಾರ ಒಂದೇ ದಿನ 197 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದು ಹೊಸ ದಾಖಲೆ ಬರೆದಿದೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ

ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ

ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ರಾಜ್ಯ ಅಬಕಾರಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮದ್ಯ ಮಾರಾಟವನ್ನು ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಕೇವಲ 5 ಜನ ಗ್ರಾಹಕರು ಮಾತ್ರ ಅಂಗಡಿ ಪ್ರವೇಶಿಸಬಹುದು

ಕೇವಲ 5 ಜನ ಗ್ರಾಹಕರು ಮಾತ್ರ ಅಂಗಡಿ ಪ್ರವೇಶಿಸಬಹುದು

ಒಂದು ಬಾರಿಗೆ ಕೇವಲ 5 ಜನ ಗ್ರಾಹಕರು ಮಾತ್ರ ಅಂಗಡಿ ಪ್ರವೇಶಿಸಲು ಅನುಮತಿ ನೀಡಿದ್ದು, 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ - ಮದ್ಯ ಮಾರಾಟ ಮಾಡುವ ಸನ್ನದಿನಲ್ಲಿನ ನೌಕರರು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯ. ಸ್ಯಾನಿಟೈಸರ್ ಗಳನ್ನು ಬಳಸುವುದು ಕಡ್ಡಾಯ. - ಕೇವಲ ಸ್ಟಾಂಡ್ ಅಲೋನ್ ಸಿಎಂಲ್-2 ಹಾಗೂ ಸಿಎಲ್ 11-ಸಿ ಸನ್ನದುಗಳನ್ನು ಮಾತ್ರ ಕಾರ್ಯನಿರ್ವಹಿಸುವುದು. ಮಾಲ್ ಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಸದರಿ ಸನ್ನದುಗಳು ಇದ್ದಲ್ಲಿ ಈ ಅನುಮತಿ ಅನ್ವಯವಾಗುವುದಿಲ್ಲ

English summary
Bar and Restaurants will not be opened in any zones soon said Karnataka excise Minister Nagesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X