ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿಯಲ್ಲಿ ಈ ಎರಡು ದಿನ ಬ್ಯಾಂಕ್‌ ಬಂದ್‌: ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಜನವರಿ 13: ಕೇಂದ್ರ ಸರ್ಕಾರದ 'ಕಾರ್ಮಿಕ ವಿರೋಧಿ' ನೀತಿಗಳನ್ನು ವಿರೋಧಿಸಿ ಹಲವಾರು ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 23 ಮತ್ತು ಫೆಬ್ರವರಿ 24, 2022 ರಂದು ಎರಡು ದಿನಗಳ ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿದೆ. ಜನವರಿ 3, 2022 ರಂದು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಕೇಂದ್ರ ಸಮಿತಿಯು ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಇದಕ್ಕೂ ಮೊದಲು, ಮಾರ್ಚ್ 2021 ರಲ್ಲಿ, ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧ ಮಾಡಿ ಬ್ಯಾಂಕ್‌ ಬ್ಯಾಂಕ್ ಒಕ್ಕೂಟಗಳು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದ್ದವು. ಆ ಸಂದರ್ಭದಲ್ಲಿ ಹಲವಾರು ಬ್ಯಾಂಕ್‌ ವಹಿವಾಟುಗಳಿಗೆ ಅಡೆ ತಡೆ ಉಂಟಾಗಿದ್ದವು.

16-17 ಕ್ಕೆ ಬ್ಯಾಂಕ್‌ ಮುಷ್ಕರ: ಯಾವೆಲ್ಲಾ ಬ್ಯಾಂಕ್‌ಗಳ ಸೇವೆ ವ್ಯತ್ಯಯ?

2021 ಡಿಸೆಂಬರ್ 16 ಮತ್ತು 17 ರಂದು ಬ್ಯಾಂಕ್ ಯೂನಿಯನ್‌ಗಳ ಬೃಹತ್ ಅಖಿಲ ಭಾರತ ಮುಷ್ಕರ ನಡೆದಿದೆ. ದಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಮುಷ್ಕರದ ಮುಖ್ಯ ಘೋಷಣೆಯು 'ಜನರನ್ನು ಉಳಿಸಿ ಮತ್ತು ರಾಷ್ಟ್ರವನ್ನು ಉಳಿಸಿ' ಆಗಿದೆ. ಒಕ್ಕೂಟಗಳು 12 ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿವೆ.

Banks To Remain Shut On These Two Days In February, Heres Details

ಫೆಬ್ರವರಿ 23-24ರ ಮುಷ್ಕರಕ್ಕೆ ಬ್ಯಾಂಕ್ ಯೂನಿಯನ್‌ಗಳ ಬೇಡಿಕೆಗಳೇನು?

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಜೊತೆಗೆ ಬ್ಯಾಂಕ್ ಯೂನಿಯನ್‌ಗಳು ಕಾರ್ಮಿಕ ಸಂಹಿತೆಗಳು ಮತ್ತು ಅಗತ್ಯ ರಕ್ಷಣಾ ಸೇವೆಗಳ ಕಾಯಿದೆಯನ್ನು ರದ್ದು ಮಾಡುವಂತೆ ಒತ್ತಾಯ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಹೆಚ್ಚುವರಿಯಾಗಿ, 2021 ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರಿಚಯಿಸಿದ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧ ಒಕ್ಕೂಟಗಳು ಧ್ವನಿ ಎತ್ತಿದ್ದವು. ಇನ್ನು ಇಷ್ಟು ಮಾತ್ರವಲ್ಲದೇ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರದ ನಂತರ ರೈತ ಸಂಘಗಳ ಆರು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಒಕ್ಕೂಟಗಳು ಆಗ್ರಹ ಮಾಡಿದೆ. ಇನ್ನು ಒಕ್ಕೂಟವು ತೆರಿಗೆ ಪಾವತಿಸದ ಕುಟುಂಬಗಳಿಗೆ ತಿಂಗಳಿಗೆ ಪ್ರತಿ ಕುಟುಂಬಕ್ಕೆ 7,500 ರೂ.ಗಳ ಕನಿಷ್ಠ ಆದಾಯದ ಖಾತರಿಯನ್ನು ನೀಡಬೇಕು ಎಂಬುವುದು ಕೂಡಾ ಬ್ಯಾಂಕ್‌ ಒಕ್ಕೂಟಗಳ ಆಗ್ರಹವಾಗಿದೆ.

ಖಾಸಗೀಕರಣದ ವಿರುದ್ಧ ಒಕ್ಕೂಟಗಳು

ವರದಿಗಳ ಪ್ರಕಾರ, ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಾದ ರೈಲ್ವೆ, ಏರ್‌ಲೈನ್ಸ್, ಸ್ಟೀಲ್, ಟೆಲಿಕಾಂ ಮತ್ತು ಅಂಚೆ ಸೇವೆಗಳು ಸೇರಿದಂತೆ ಪಿಎಸ್‌ಯುಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಒಕ್ಕೂಟಗಳು ವಿರುದ್ಧವಾಗಿವೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ ವೆಂಕಟಾಚಲಂ ಹೇಳಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕಿಂಗ್ ಕಾನೂನುಗಳ ಮಸೂದೆ, 2021 ಅನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಡಿಸೆಂಬರ್ 16 ಮತ್ತು ಡಿಸೆಂಬರ್ 17, 2021 ರಂದು ಎರಡು ದಿನಗಳ ಅಖಿಲ ಭಾರತ ಮುಷ್ಕರದ ಕಾರಣ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧ ಮಾಡಿ ಡಿಸೆಂಬರ್‌ 16-17 ಬ್ಯಾಂಕ್‌ಗಳ ಸಂಘವು ಮುಷ್ಕರವನ್ನು ನಡೆಸಿದೆ. ಈ ಸಂದರ್ಭದಲ್ಲಿ ಹಲವಾರು ಬ್ಯಾಂಕ್‌ಗಳು ಸೇವೆಯಲ್ಲಿ ವ್ಯತ್ಯಯವಾಗಿದ್ದವು. ಬ್ಯಾಂಕಿನಲ್ಲಿ ಚೆಕ್‌ನ ವಹಿವಾಟಿಗೂ ಈ ಮುಷ್ಕರದಿಂದಾಗಿ ಪೆಟ್ಟು ಬಿದ್ದಿದೆ ಎಂದು ಎಐಬಿಇಎ ಹೇಳಿದೆ. "ಬ್ಯಾಂಕ್‌ ನೌಕರರು ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ, ಇದರಿಂದಾಗಿ ಬಹಳಷ್ಟು ತೊಂದರೆ ಉಂಟಾಗಿದೆ. ಈ ಎರಡು ದಿನಗಳ ಮುಷ್ಕರದ ಸಂದರ್ಭದಲ್ಲಿ ಈವರೆಗೆ 37,000 ಕೋಟಿ ರೂಪಾಯಿ ಮೌಲ್ಯದ ಚೆಕ್‌ ವಹಿವಾಟಿಗೆ ಅಡೆತಡೆ ಉಂಟಾಗಿದೆ," ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ, ಸಿ ಎಚ್‌ ವೆಂಕಟಚಲಂ ತಿಳಿಸಿದ್ದರು.

English summary
Banks To Remain Shut On These Two Days In February, Here's Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X