ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗೀಕರಣ ವಿರೋಧಿಸಿ ಫೆ.23, 24ರಂದು ಬ್ಯಾಂಕ್ ಮುಷ್ಕರ; ಸೇವೆಯಲ್ಲಿ ವ್ಯತ್ಯಯ

|
Google Oneindia Kannada News

ನವದೆಹಲಿ, ಫೆಬ್ರವರಿ 22: ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧಿಸಿ ದೇಶದ ಸರ್ಕಾರಿ ಬ್ಯಾಂಕ್ ನೌಕರರು ಇದೇ ಫೆಬ್ರವರಿ 23 ಮತ್ತು 24ರಂದು ಮತ್ತೊಮ್ಮೆ ಬ್ಯಾಂಕ್ ಮುಷ್ಕರ ನಡೆಸಲಿದ್ದಾರೆ.

ಸೆಂಟ್ರಲ್ ಟ್ರೇಡ್ ಯೂನಿಯನ್ಸ್ (CTU-central trade union) ಮತ್ತು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ ​​(AIBEA) ಸೇರಿದಂತೆ ಇತರ ಸಂಘಟನೆಗಳು ಜಂಟಿಯಾಗಿ ಬ್ಯಾಂಕ್ ಮುಷ್ಕರವನ್ನು ಘೋಷಿಸಿವೆ.

ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಡಿ.16ರಿಂದ ಬ್ಯಾಂಕ್ ಮುಷ್ಕರ; ಸೇವೆಯಲ್ಲಿ ವ್ಯತ್ಯಯಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಡಿ.16ರಿಂದ ಬ್ಯಾಂಕ್ ಮುಷ್ಕರ; ಸೇವೆಯಲ್ಲಿ ವ್ಯತ್ಯಯ

ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಎಐಬಿಇಎ (AIBEA) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಅವರು ಎಲ್ಲಾ ಬ್ಯಾಂಕ್ ಅಸೋಸಿಯೇಷನ್‌ಗಳು ಮತ್ತು ಸದಸ್ಯರಿಗೆ ಪತ್ರ ಬರೆದು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಮುಷ್ಕರದಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿರಲು ಕೋರಿದ್ದಾರೆ.

Banks Strike on 23 And 24 February To Protest Against Proposed Privatisation of Public Sector Banks

ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕಳೆದ ವರ್ಷ ಮಾರ್ಚ್ 15 ಮತ್ತು 16ರಂದು ಪ್ರತಿಭಟನೆ ನಡೆಸಿತ್ತು ಎಂದು ಹೇಳಿದರು. ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆ 2021 ಅನ್ನು ವಿರೋಧಿಸಿ 16 ಮತ್ತು 17 ಡಿಸೆಂಬರ್ 2021ರಂದು ಮುಷ್ಕರವನ್ನು ನಡೆಸಲಾಯಿತು. ಈಗ ಫೆಬ್ರವರಿ 23 ಮತ್ತು 24 ರಂದು ಮತ್ತೆ ಮುಷ್ಕರಕ್ಕೆ ಸಿದ್ಧರಾಗಿ ಎಂದು ಹೇಳಿದ್ದಾರೆ.

ಎಲ್ಲ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡೊಲ್ಲ: ನಿರ್ಮಲಾ ಸೀತಾರಾಮನ್ಎಲ್ಲ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡೊಲ್ಲ: ನಿರ್ಮಲಾ ಸೀತಾರಾಮನ್

ಫೆ.23 ಮತ್ತು 24ರಂದು ಸಂಘಟನೆಗಳು ಮುಷ್ಕರ ನಡೆಸಿದರೆ ಫೆ.23ರಿಂದ 27ರವರೆಗೆ ಅಂದರೆ 5 ದಿನದಲ್ಲಿ 4 ದಿನ ಬ್ಯಾಂಕ್‌ಗಳಲ್ಲಿ ಕೆಲಸ ಸ್ಥಗಿತಗೊಳ್ಳಲಿದೆ. 23 ಮತ್ತು 24ರಂದು ಮುಷ್ಕರ ಮತ್ತು ಫೆಬ್ರವರಿ 26-27 ರಂದು ಕ್ರಮವಾಗಿ ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ನಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಶುಕ್ರವಾರ ಮಾತ್ರ (ಫೆ.25) ಬ್ಯಾಂಕ್ ಸೇವೆ ಇರಲಿದೆ.

Banks Strike on 23 And 24 February To Protest Against Proposed Privatisation of Public Sector Banks

ಮುಷ್ಕರಕ್ಕೆ ಕಾರಣವೇನು ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2021ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಎರಡು ಬ್ಯಾಂಕ್‌ಗಳ ಖಾಸಗೀಕರಣವನ್ನು ಘೋಷಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಬ್ಯಾಂಕ್ ಖಾಸಗೀಕರಣ ಸಿದ್ಧತೆಯನ್ನೂ ಆರಂಭಿಸಿದೆ.

ಸರ್ಕಾರವು ಹೂಡಿಕೆಯನ್ನು ಕಡಿತಗೊಳಿಸಿದ ಬ್ಯಾಂಕುಗಳಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಬ್ಯಾಂಕ್ ಆಫ್ ಇಂಡಿಯಾ ಸೇರಿದೆ. ಹೀಗಾಗಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC) ಬ್ಯಾಂಕ್ ಮುಷ್ಕರ ಘೋಷಿಸಿತ್ತು.

ಖಾಸಗೀಕರಣದ ನಂತರ ನೌಕರರಿಗೆ ಏನಾಗುತ್ತದೆ?
ಬ್ಯಾಂಕ್‌ಗಳ ಖಾಸಗೀಕರಣದಿಂದ ಉದ್ಯೋಗ ಕಡಿತ ಭೀತಿ ಎದುರಿಸುವಂತಾಗಿತ್ತದೆ. ಆಕರ್ಷಕ ಸಂಬಳದ ಕೊರತೆ ಎದುರಿಸಬಹುದು. ಅಲ್ಲದೇ ಬ್ಯಾಂಕುಗಳು ತಮ್ಮ ಉದ್ಯೋಗಿಗಳಿಗೆ ಆಕರ್ಷಕ ಸ್ವಯಂ ನಿವೃತ್ತಿ ಯೋಜನೆಯನ್ನು (VRS) ನೀಡಬಹುದು. ಇದು ಈ ಬ್ಯಾಂಕ್‌ನ ಉದ್ಯೋಗಿಗಳಿಗೆ ಇದು ಆತಂಕದ ವಿಷಯವಾಗಿದೆ.

ಡಿಸೆಂಬರ್ 2021ರಲ್ಲಿಯೂ ಮುಷ್ಕರ ನಡೆದಿತ್ತು
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣದ ಸರ್ಕಾರದ ಯೋಜನೆಯನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಕಳೆದ ತಿಂಗಳು ಡಿಸೆಂಬರ್ 16 ಮತ್ತು 17 ರಂದು ಮುಷ್ಕರ ನಡೆಸಿದ್ದವು. ನಂತರ ಬ್ಯಾಂಕ್ ಮುಷ್ಕರದ ಪರಿಣಾಮ ಎಸ್‌ಬಿಐ, ಪಿಎನ್‌ಬಿ, ಸೆಂಟ್ರಲ್ ಬ್ಯಾಂಕ್ ಮತ್ತು ಆರ್‌ಬಿಎಲ್ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಚೆಕ್ ಕ್ಲಿಯರೆನ್ಸ್, ಹಣ ವರ್ಗಾವಣೆ, ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ಕೆಲಸವೂ ಸ್ಥಗಿತಗೊಂಡಿತ್ತು.

Recommended Video

11 ವರ್ಷದ ಮಗುವಿನ ಜೀವ ಉಳಿಸಿದ ಕನ್ನಡಿಗ ಕೆಎಲ್ ರಾಹುಲ್ | Oneindia Kannada

English summary
Government Bank employees of India will go on a strike on February 23 and 24 to protest against the privatization of the banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X