ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕುಗಳಿಗೆ ವಾರಾಂತ್ಯ ರಜೆ ಇಲ್ಲ, ನ.10 ರಿಂದ ಹೊಸ ನೋಟು!

ದೇಶದೆಲ್ಲೆಡೆ ಉಂಟಾಗಿರುವ ಗೊಂದಲ ಹಾಗೂ ನೂಕುನುಗ್ಗಲು ಪರಿಸ್ಥಿತಿಯನ್ನು ತಿಳಿಗೊಳಿಸಲು ಆರ್ ಬಿಐ ಮುಂದಾಗಿದೆ. ಮುಖ್ಯವಾಗಿ ವಾರಾಂತ್ಯದ ರಜೆಯನ್ನು ಕಡಿತಗೊಳಿಸಿದೆ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 09: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1,000 ರು ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಹೊಸ ನೋಟು ಪಡೆಯುವ ಧಾವಂತ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.

ದೇಶದೆಲ್ಲೆಡೆ ಉಂಟಾಗಿರುವ ಗೊಂದಲ ಹಾಗೂ ನೂಕುನುಗ್ಗಲು ಪರಿಸ್ಥಿತಿಯನ್ನು ತಿಳಿಗೊಳಿಸಲು ಆರ್ ಬಿಐ ಮುಂದಾಗಿದೆ. ಮುಖ್ಯವಾಗಿ ವಾರಾಂತ್ಯದ ರಜೆಯನ್ನು ಕಡಿತಗೊಳಿಸಿದೆ.[ಹೊಸ 500 ಹಾಗೂ 2,000 ನೋಟು ನೋಡಲು ಹೇಗಿದೆ? ]

ನವೆಂಬರ್ 10 ರಿಂದ ಹೊಸ ನೋಟುಗಳನ್ನು ವಿತರಿಸಲು ಬ್ಯಾಂಕುಗಳು ಸಿದ್ಧ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ನವೆಂಬರ್ 10ರ ಬೆಳಗ್ಗೆ 10 ಗಂಟೆಯಿಂದ ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ನೀಡಿ ಹೊಸ ನೋಟು ಪಡೆದುಕೊಳ್ಳಬಹುದು.

Banks To Remain Open This Weekend; New Notes From Thursday

* ನವೆಂಬರ್ 10 ರಿಂದ ಹೊಸ 500 ಹಾಗೂ 2000 ರು ನೋಟುಗಳು ಲಭ್ಯ.[FAQ : ಹಳೇ 500, 1,000 ರುಪಾಯಿ ನೋಟು ಏನು ಮಾಡೋದು?]

* ನವೆಂಬರ್ 11 ರ ಮಧ್ಯರಾತ್ರಿ ತನಕ ಈ ಹಿಂದೆ ತಿಳಿಸಿದಂತೆ ರಿಯಾಯಿತಿ ನೀಡಿರುವ ಕಡೆಗಳಲ್ಲಿ ವಿಥ್ ಡ್ರಾ ಮಾಡಿಕೊಳ್ಳಬಹುದು.

* ನವೆಂಬರ್ 12 ಹಾಗೂ 13ರಂದು ಬ್ಯಾಂಕುಗಳಿಗೆ ರಜೆ ಇಲ್ಲ. [500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್]
* ನವೆಂಬರ್ 10 ರಂದು ಬೆಳಗ್ಗೆ 10 ರಿಂದ ಎಲ್ಲಾ ಬ್ಯಾಂಕುಗಳು, ಎಟಿಎಂಗಳು ಕಾರ್ಯಾರಂಭ.
* ನವೆಂಬರ್ 10 ರಿಂದ ಡಿಸೆಂಬರ್ 30ರ ತನಕ ನೋಟುಗಳ ಬದಲಿಗೆ ಅವಕಾಶ.


* ಡಿಸೆಂಬರ್ 31 ರ ನಂತರವೂ ನಿಮ್ಮ ಬಳಿ ಹಳೆ ನೋಟು ಇದ್ದರೆ ಆರ್ ಬಿಐನಲ್ಲಿ ಮಾರ್ಚ್ 31, 2017ರ ತನಕ ಅವಕಾಶ.
* ಪ್ರತಿ ಎಟಿಎಂ ಕಾರ್ಡಿನಿಂದ ದಿನವೊಂದಕ್ಕೆ 2,000 ರು ಮಾತ್ರ ವಿಥ್ ಡ್ರಾ ಸಾಧ್ಯ.[ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]
* ಬ್ಯಾಂಕ್ ಅಕೌಂಟಿನಿಂದ ದಿನವೊಂದಕ್ಕೆ 10,000 ರು ಮಾತ್ರ ವಿಥ್ ಡ್ರಾ ಮಾಡಬಹುದು.
* ಎಲ್ಲಾ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೊಸ ನೋಟುಗಳು ದೊರೆಯಲು ಎರಡರಿಂದ ಮೂರು ವಾರಗಳ ಕಾಲ ಬೇಕು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. (ಪಿಟಿಐ)

English summary
Banks To Remain Open This Weekend; New Notes From Thursday. Government sought to assuage anxious public saying banks and post offices would start giving out high denomination replacement notes from tomorrow even as it expanded the list of exempt public utilities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X