ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳಕು ನೋಟು ಸ್ವೀಕರಿಸದ ಬ್ಯಾಂಕುಗಳಿಗೆ ದಂಡ: ಆರ್ ಬಿಐ

ಹಳೆಯ, ಕೊಳಕಾದ, ಬರಹಗಳುಳ್ಳ ನೋಟುಗಳನ್ನು ಬ್ಯಾಂಕುಗಳಲ್ಲಿ ಸ್ವೀಕರಿಸಲಾಗುವುದಿಲ್ಲವೆಂಬ ಗಾಳಿ ಸುದ್ದಿಗಳನ್ನು ಕೇಳಿ ಬೇಸರ ಪಟ್ಟುಕೊಂಡಿದ್ದ ಗ್ರಾಹಕರ ನೆರವಿಗೆ ಬಂದ ಆರ್ ಬಿಐ.

|
Google Oneindia Kannada News

ನವದೆಹಲಿ, ಮಾರ್ಚ್ 2: ಗ್ರಾಹಕರ ಬಳಿಯಿರುವ ಹಳೇ ನೋಟುಗಳನ್ನು ಸ್ವೀಕರಿಸಲು ಯಾವುದೇ ಬ್ಯಾಂಕು ನಿರಾಕರಿಸಿದಲ್ಲಿ ಆ ಬ್ಯಾಂಕುಗಳ ಮೇಲೆ 10 ಸಾವಿರ ರು. ದಂಡ ವಿಧಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಎಲ್ಲಾ ಭಾರತೀಯ ಬ್ಯಾಂಕುಗಳಿಗೆ ಎಚ್ಚರಿಕೆ ನೀಡಿದೆ.

ಇದಲ್ಲದೆ, ಕೊಳಕು ನೋಟುಗಳು, ನೋಟುಗಳಲ್ಲಿನ ಖಾಲಿ ಜಾಗದ ಮೇಲೆ ಬರಹಗಳಿರುವ ನೋಟುಗಳನ್ನು ಬದಲಾಯಿಸಿಕೊಡಬೇಕೆಂದು ಆರ್ ಸಿಬಿಐ ಸೂಚನೆ ನೀಡಿದೆ. ಆದರೆ, ಈ ಬರಹಗಳು ಯಾವುದೇ ರೀತಿಯಲ್ಲೂ ರಾಜಕೀಯ ಪ್ರೇರಿತವಾಗಿದ್ದಲ್ಲಿ ಅಂಥ ನೋಟುಗಳನ್ನು ಬದಲಿಸಲಾಗದು ಎಂದು ಆರ್ ಬಿಐ ಸ್ಪಷ್ಟವಾಗಿ ಹೇಳಿದೆ.[ಇನ್ನು ಬ್ಯಾಂಕಿಗೆ ಹಣ ಕಟ್ಟಿದರೂ ಶುಲ್ಕ, ಹಣ ತೆಗೆದರೂ ಶುಲ್ಕ!]

Banks refusing to exchange soiled notes to be fined ₹10,000

2013ರ ಜುಲೈನಲ್ಲಿ ಆದೇಶ ಹೊರಡಿಸಿದ್ದ ಆರ್ ಬಿಐ, ಯಾವುದೇ ನೋಟಿನ ಮೇಲೆ ರಾಜಕೀಯ ಪ್ರೇರಿತ ಬರಹಗಳು ಕಂಡುಬಂದಲ್ಲಿ ಅಂಥ ನೋಟುಗಳನ್ನು ಪಡೆಯದಂತೆ ಸೂಚನೆ ನೀಡಿತ್ತು. ಈಗಲೂ ಆ ಸೂಚನೆಯನ್ನು ಮುಂದುವರಿಸುವಂತೆ ಬ್ಯಾಂಕುಗಳಿಗೆ ಆರ್ ಬಿಐ ಹೇಳಿದೆ.[ಜುಲೈ 1ರಿಂದ ದೇಶಾದ್ಯಂತ ಏಕಸ್ವರೂಪ ತೆರಿಗೆ ಜಾರಿ: ಕೇಂದ್ರ]

ಆದರೆ, ದಿನವೊಂದಕ್ಕೆ 5 ಸಾವಿರಕ್ಕಿಂತಲೂ ಹೆಚ್ಚು ಮೊತ್ತದ ಹಳೇ ನೋಟುಗಳನ್ನು ಬದಲಾಯಿಸುವ ಹಾಗೂ ಒಂದು ಬಾರಿಗೆ 20ಕ್ಕಿಂತಲೂ ಹೆಚ್ಚು ನೋಟುಗಳನ್ನು ಬದಲಾಯಿಸುವ ಗ್ರಾಹಕರಿಂದ ಸೇವಾ ಶುಲ್ಕ ಪಡೆಯುವಂತೆ ಆರ್ ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ.[ಮಾರ್ಚ್ ನಂತರ ತಣ್ಣಗಾಗುತ್ತಾ ಜಿಯೊ ಬಿರುಗಾಳಿ?]

English summary
The reserve bank of India clarified that any Indian bank branch that refuses to exchange soiled or scribbled currency notes of India from people will have to pay a penalty of ₹10,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X