ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8.4 ಲಕ್ಷ ಕೋಟಿ ರೂಪಾಯಿ ಸಾಲ ಪುನಾರಚನೆಗೆ ಬ್ಯಾಂಕುಗಳು ರೆಡಿ

|
Google Oneindia Kannada News

ನವದೆಹಲಿ, ಆಗಸ್ಟ್‌ 19: ಸಾಲದ ಪುನಾರಚನೆಗೆ ಆರ್‌ಬಿಐ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ, ಬ್ಯಾಂಕುಗಳು 8.4 ಲಕ್ಷ ಕೋಟಿ ರೂಪಾಯಿ ಸಾಲಗಳ ಪುನಾರಚನೆಗೆ ಸಿದ್ಧತೆಯನ್ನು ನಡೆಸಿದೆ ಎಂದು ದೇಶೀಯ ರೇಟಿಂಗ್ ಸಂಸ್ಥೆಯೊಂದು ಹೇಳಿದೆ.

ಬ್ಯಾಂಕುಗಳು 8.4 ಲಕ್ಷ ಕೋಟಿ ರೂ.ಗಳ ಸಾಲವನ್ನು ಅಥವಾ ಒಟ್ಟಾರೆ ಸಾಲದ ವ್ಯವಸ್ಥೆಯ ಶೇಕಡಾ 7.7 ರಷ್ಟು ಪುನರ್ರಚಿಸುವ ಸಾಧ್ಯತೆಯಿದೆ ಎಂದು ದೇಶೀಯ ರೇಟಿಂಗ್ ಸಂಸ್ಥೆ ಬುಧವಾರ ತಿಳಿಸಿದೆ. ಈ 8.4 ಲಕ್ಷ ಕೋಟಿ ರೂ.ಗಳಲ್ಲಿ 60 ಪ್ರತಿಶತಕ್ಕಿಂತಲೂ ಹೆಚ್ಚಿನವು ಮರುಹೊಂದಿಸುವಿಕೆಯಿಲ್ಲದಿದ್ದಲ್ಲಿ ನಿಷ್ಕ್ರಿಯ ಆಸ್ತಿಗಳ (ಎನ್‌ಪಿಎ) ವರ್ಗಕ್ಕೆ ಇಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಜೆಕೆ ಟೈಯರ್ಸ್ ಹಾಗೂ 8 ಸಂಸ್ಥೆಗಳ ಬ್ಯಾಂಕ್ ಖಾತೆ ಸ್ಥಗಿತಜೆಕೆ ಟೈಯರ್ಸ್ ಹಾಗೂ 8 ಸಂಸ್ಥೆಗಳ ಬ್ಯಾಂಕ್ ಖಾತೆ ಸ್ಥಗಿತ

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್‌ನಿಂದಾದ ಆರ್ಥಿಕ ಹಿಂಜರಿತದ ನಂತರ ಶೇ. 90ರಷ್ಟು ಸಾಲಗಳ ಪುನಾರಚನೆಯು ಕಾರ್ಪೊರೇಟ್‌ ವಲಯಕ್ಕೆ ಸಂಬಂಧಿಸಿದ್ದಾಗಿದೆ. ಇದರ ಜತೆಗೆ ಸಣ್ಣ ಉದ್ದಿಮೆಗಳು, ಕೃಷಿ ಸಾಲಗಳು ಕೂಡ ಸೇರಿವೆ. ಕಾರ್ಪೊರೇಟ್‌ ವಲಯಯವನ್ನು ಹೊರತುಪಡಿಸಿ ಸುಮಾರು 2.1 ಲಕ್ಷ ಕೋಟಿ ರೂಪಾಯಿಯಷ್ಟು ಸಾಲಗಳು ಮರುರಚನೆಯಾಗಲಿವೆ ಎಂದು ಅಂದಾಜಿಸಲಾಗಿದೆ.

Banks Loan: Banks Set To Restructure Upto Rs 8.4 Lakh Crore Of Loans

ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರಿಸರ್ವ್‌ ಬ್ಯಾಂಕ್‌ ಸಾಲದ ಇಎಂಐ ಅನ್ನು ಆಗಸ್ಟ್‌ 31ರ ತನಕ ಮುಂದೂಡಿದೆ.

ಇದೀಗ ಮತ್ತೊಂದು ಅನುಕೂಲ ಕಲ್ಪಿಸಲು ಸಾಲ ಪುನಾರಚನೆ ಆಯ್ಕೆ ಪಡೆಯಬಹುದು. 2020ರ ಮಾರ್ಚ್ 1ಕ್ಕೆ ಅನ್ವಯಿಸುವಂತೆ 30 ದಿನಗಳಿಗೆ ಮೀರದಂತೆ ಸಾಲ ಮರು ಪಾವತಿಸದವರು, ಸಾಲ ಪುನಾರಚನೆಗೆ ಅರ್ಜಿ ಸಲ್ಲಿಸಬಹುದು. 2021ರ ಮಾರ್ಚ್ 2021ರ ತನಕ ಈ ಸೌಲಭ್ಯ ಸಿಗಲಿದೆ.

English summary
Banks are likely to restructure up to Rs 8.4 lakh crore of loans, or 7.7 per cent of the overall system's credit, under the newly announced recast package, a domestic ratings agency said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X