ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕೆಡ್ಜ್ ಗೆ 4 ವರ್ಷಗಳಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ಗುರಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಭರವಸೆಯ ಬ್ಯಾಂಕಿಂಗ್ ಮತ್ತು ಹಣಕಾಸು ಅಕಾಡೆಮಿಯಾದ ಬ್ಯಾಂಕೆಡ್ಜ್, ಮುಂದಿನ ನಾಲ್ಕು ವರ್ಷಗಳಲ್ಲಿ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಿದೆ. ಈ ಮೂಲಕ ಅವರನ್ನು ಅಗ್ರಗಣ್ಯ ಬ್ಯಾಂಕ್ ಹಾಗೂ ಎನ್‍ಬಿಎಫ್‍ಸಿಗಳು ಮತ್ತು ಹಣಕಾಸು ವಲಯದ ಇತರ ಸಂಸ್ಥೆಗಳಲ್ಲಿ ಬ್ಯಾಂಕಿಂಗ್ ವೃತ್ತಿಪರರಾಗಿ ರೂಪುಗೊಳ್ಳಲು ಸಶಕ್ತಗೊಳಿಸಲಿದೆ.

ಕಂಪನಿಯು ಕಳೆದ ಐದು ವರ್ಷಗಳಲ್ಲಿ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರಿಗೆ ಅಗ್ರಗಣ್ಯ ಬ್ಯಾಂಕ್ ಹಾಗೂ ಎನ್‍ಬಿಎಫ್‍ಸಿಗಳು ಮತ್ತು ಹಣಕಾಸು ವಲಯದ ಇತರ ಸಂಸ್ಥೆಗಳಲ್ಲಿ ನೇಮಕಾತಿಯನ್ನು ಒದಗಿಸಿದೆ. ಬ್ಯಾಂಕಿಂಗ್ ವೃತ್ತಿಪರರಾಗಲು ಅಪೇಕ್ಷಿಸುವ ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗ ತರಬೇತಿಯನ್ನು ಕಂಪನಿಯು ನೀಡುತ್ತಾ ಬಂದಿದೆ.

BANKEDGE to provide training to 50,000+ students to become Banking professionals in the next four years


ಕಂಪನಿಯು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವೃತ್ತಿಪರರಾಗಲು ಅಗತ್ಯವಾದ ಸಾಮಾಜಿಕ ಹಾಗೂ ಉದ್ಯೋಗ ಕೌಶಲವನ್ನು ತರಗತಿ ಹಾಗೂ ಆನ್‍ಲೈನ್ ತರಬೇತಿ ಮಾದರಿಯ ಮೂಲಕ ಒದಗಿಸುತ್ತದೆ. ಬ್ಯಾಂಕೆಡ್ಜ್ ಪ್ರಸ್ತುತ 64 ತರಬೇತಿ & ನೇಮಕಾತಿ ಕೇಂದ್ರಗಳನ್ನು ಭಾರತದಾದ್ಯಂತ ನಿರ್ವಹಿಸುತ್ತಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ 150 ಕೇಂದ್ರಗಳಿಗೆ ಇದನ್ನು ಹೆಚ್ಚಿಸಲು ಯೋಜನೆ ರೂಪಿಸಿದೆ.

ಕಂಪನಿಯು ಬ್ಯಾಂಕಿಂಗ್ ತರಬೇತಿ ಮತ್ತು ಆಸಕ್ತ ಬ್ಯಾಂಕಿಂಗ್ ವೃತ್ತಿಪರರ ನೇಮಕಾತಿಗಾಗಿ 25ಕ್ಕೂ ಹೆಚ್ಚು ಖಾಸಗಿ ವಲಯದ ಬ್ಯಾಂಕ್‍ಗಳು ಹಾಗೂ ಎನ್‍ಬಿಎಫ್‍ಸಿ ಜತೆಗೆ ಪಾಲುದಾರಿಕೆ ಹೊಂದಿದ್ದು, ವಿವಿಧ ವರ್ಗಗಳ ಜನರನ್ನು ನೇಮಕ ಮಾಡಿಕೊಂಡಿದೆ. ಬ್ಯಾಂಕೆಡ್ಜ್ ವೈವಿಧ್ಯಮಯ ಕಾರ್ಯಚಟುವಟಿಕೆಗಲು ಮತ್ತು ಪ್ರಾಯೋಗಿಕ ಕೌಶಲಗಳನ್ನು ಅರ್ಥ ಮಾಡಿಕೊಂಡು ನಿರ್ದಿಷ್ಟ ಕಾರ್ಯಗಳಿಗೆ ಅಗತ್ಯವಾದ ಕೌಶಲವನ್ನು ಒದಗಿಸುತ್ತದೆ.

ಈ ಒಳನೋಟಗಳು, ಉದ್ಯಮದ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಕಂಪನಿಗೆ ನೆರವಾಗಿವೆ. ಇದು ಮಾರುಕಟ್ಟೆಯಲ್ಲಿ ನಮ್ಮ ಕಂಪನಿಯನ್ನು ಇತರ ಕಂಪನಿಗಳಿಗಿಂತ ಭಿನ್ನವಾಗಿ ಮಾಡಿದೆ. ಕಂಪನಿಯ ಉದ್ಯೋಗ ಸ್ಥಾನೀಕರಣ ಜಾಲವು 25ಕ್ಕೂ ಹೆಚ್ಚು ಖಾಸಗಿ ವಲಯದ ಬ್ಯಾಂಕ್‍ಗಳು ಮತ್ತು ಮಾಕ್ರ್ಯೂ ಹಣಕಾಸು ಸಂಸ್ಥೆಗಳನ್ನು ಭಾರತದಾದ್ಯಂತ ಹೊಂದಿದೆ.

ಬ್ಯಾಂಕಿಂಗ್ ಉದ್ಯಮದ ಕೌಶಲ ಅಂತರವನ್ನು ಕಿರಿದುಗೊಳಿಸಲು ಬ್ಯಾಂಕೆಡ್ಜ್ ಶ್ರಮಿಸುತ್ತಿದ್ದು, ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಸಜ್ಜುಗೊಂಡ ವೃತ್ತಿಪರರನ್ನಾಗಿ ಪರಿವರ್ತಿಸುವ ಹೊಣೆ ಹೊತ್ತಿದದೆ. ಈ ಯೋಜನೆಯು ಪ್ರಮುಖವಾದ ಕ್ಷೇತ್ರದ ಜ್ಞಾನ ಮತ್ತು ಅಗತ್ಯ ಕೌಶಲಗಳಾದ ದಾಖಲೀಕರಣ, ತಂತ್ರಜ್ಞಾನ, ಪರಿಚಯ ಮತ್ತು ಗ್ರಾಹಕರನ್ನು ನಿಭಾಯಿಸುವ ಕೌಶಲಗಳನ್ನು ಒಳಗೊಂಡಿದೆ.

ಬ್ಯಾಂಕೆಡ್ಜ್ ಅಗ್ರಗಣ್ಯ ಖಾಸಗಿ ವಲಯದ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಾದ ಎಚ್‍ಡಿಎಫ್‍ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೊಟ್ಯಾಕ್ ಮಹೀಂದ್ರಾ ಬ್ಯಾಂಕ್, ಇಂಡೂಸ್‍ಇಂಡ್ ಬ್ಯಾಂಕ್, ಆರ್‍ಬಿಎಲ್ ಬ್ಯಾಂಕ್, ಬಂಧನ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಎಚ್‍ಎಸ್‍ಬಿಸಿ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಐಐಎಫ್‍ಎಲ್, ಫಿನೊ, ಇಂಡಿಯಾಬುಲ್ಸ್, ಬಜಾಜ್ ಫಿನ್‍ಸರ್ವ್, ಮಹೀಂದ್ರಾ ಫೈನಾನ್ಸ್, ಎಲ್ & ಟಿ ಫೈನಾನ್ಶಿಯಲ್ ಸರ್ವೀಸಸ್, ಸೆರಿ ಇನ್‍ಫ್ರಾ ಮತ್ತಿತರ ಸಂಸ್ಥೆಗಳಿಗೆ ಅವುಗಳ ತರಬೇತಿ ಮತ್ತು ನೇಮಕಾತಿ ಅಗತ್ಯತೆಗಳಿಗೆ ಸೇವೆ ಪೂರೈಸಲು ಪಾಲುದಾರಿಕೆಯನ್ನು ಹೊಂದಿದೆ.

English summary
India’s most trusted and promising Banking & Finance Academy, will provide training to 50,000 students in the next four years, to enable them to become banking professionals with leading Banks, NBFCs and other Financial Sector players.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X