ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 3, 4ರಂದು ಗ್ರಾಹಕರ ಬಳಿಗೆ ‘ಬ್ಯಾಂಕ್ ಆಫ್ ಇಂಡಿಯಾ’

|
Google Oneindia Kannada News

ಬೆಂಗಳೂರು, ಅಕ್ಟೋಬರ್ 01 : ಬ್ಯಾಂಕಿಂಗ್ ಕ್ಷೇತ್ರ ಹೊಸ ಸಾಧ್ಯತೆಗಳತ್ತ ಹೊರಳುತ್ತಿದೆ. ಮೊದಲೆಲ್ಲಾ ಬ್ಯಾಂಕ್‍ಗೆ ಹೋಗೋದೇ ಕಷ್ಟ ಎನ್ನುವ ಮನೋಭಾವ ಇದ್ದರೆ ಈಗ ದೇಶದ ಪ್ರತಿಷ್ಠಿತ ಸಾರ್ವಜನಿಕ ಬ್ಯಾಂಕ್‍ಗಳೆಲ್ಲಾ ಒಟ್ಟಾಗಿ ಗ್ರಾಹಕರ ಬಳಿಗೇ ಹೊರಟು ನಿಂತಿವೆ. ದೇಶದೆಲ್ಲೆಡೆ ಸಾರ್ವಜನಿಕ ಬ್ಯಾಂಕ್‍ಗಳು ಆಯ್ದ 400 ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಗ್ರಾಹಕರನ್ನು ಸಂಪರ್ಕಿಸಬೇಕೆಂಬ ಮಹಾನ್ ಗುರಿಯನ್ನು ಇಟ್ಟು ಕೊಂಡಿದ್ದು ಅದರ ಭಾಗವಾಗಿ ಬ್ಯಾಂಕ್ ಆಫ್ ಇಂಡಿಯಾ ನಗರದಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಕ್ಟೋಬರ್ 3 ಗುರುವಾರ ಮತ್ತು ಅಕ್ಟೋಬರ್ 4 ಶುಕ್ರವಾರದಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಕೊಡುಗೆಗಳು ಮತ್ತು ಅಲ್ಲಿರುವ ಸೇವೆ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಉದ್ದೇಶ ಹೊಂದಿದೆ.

400 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಮೇಳ: ನಿರ್ಮಲಾ ಸೀತಾರಾಮನ್400 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಮೇಳ: ನಿರ್ಮಲಾ ಸೀತಾರಾಮನ್

ಜಿಲ್ಲೆಯೊಳಗೆ ಇರುವ ಎಲ್ಲಾ ಸರಕಾರೀ, ಖಾಸಗಿ ಬ್ಯಾಂಕ್‍ಗಳು , ಎನ್‍ಬಿಎಫ್‍ಸಿ ಹೆಚ್.ಎಫ್‍ಸಿ , ಎಂಎಫ್‍ಐ , ಸಿಡ್ಬಿ, ನಬಾರ್ಡ್ ಸಹಿತ ಎಲ್ಲಾ ಹಣಕಾಸು ಸಂಸ್ಥೆಗಳು ಒಂದೇ ಸೂರಿನಡಿ ಸೇರಿ ತಮ್ಮ ಗ್ರಾಹಕರಿಗೆ ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ಮಾಹಿತಿ ಒದಗಿಸುವ ಉದ್ದೇಶ ಇದರ ಹಿಂದೆ ಇದೆ. ಉಳಿತಾಯ ಖಾತೆ ತೆರೆಯುವುದು ಹಣಕಾಸಿನ ನೆರವು, ಗ್ರಾಹಕರನ್ನು ವಿವಿಧ ಹಣಕಾಸು ಯೋಜನೆಗಳೊಂದಿಗೆ ಜೋಡಿಸುವುದು, ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳತ್ತ ಆಕರ್ಷಿಸುವಂತಹ ಉದ್ದೇಶವೂ ಇದರ ಹಿಂದೆ ಇದೆ.

Bank of India launch first phase of customer outreach loan initiative

ಸಮಾಜದ ಎಲ್ಲಾ ವರ್ಗದ ಜನರಿಗೂ ಬ್ಯಾಂಕಿಂಗ್ ಸೇವೆ ಒದಗಿಸುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಗುರಿ. ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಬ್ಯಾಂಕ್‍ಗಳ ಸೇವೆಯನ್ನು ಬಳಸಿಕೊಳ್ಳುವುದು ಅಗತ್ಯ. ಮುದ್ರಾ ಮತ್ತು ಸ್ಟಾಂಡ್ ಅಪ್ ಇಂಡಿಯಾ ಯೋಜನೆಗಳ ಅಡಿಯಲ್ಲಿ ಬ್ಯಾಂಕ್‍ಗಳು ನೀಡುವ ಸಾಲಗಳು , ಕೃಷಿ ಸಾಲಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಗಳಿಗೆ (ಎಂಎಸ್‍ಎಂಇ) ನೀಡುವ ಸಾಲಗಳ ಕುರಿತು ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. ಜೊತೆಗೆ ನಬಾರ್ಡ್, ಸಿಡ್ಬಿ ಸಂಸ್ಥೆಗಳ ಸ್ವಸಹಾಯ ಸಂಘಗಳಿಗೆ ನೀಡುವ ಸಾಲ ಕೃಷಿ, ಎಂ.ಎಸ್‍ಎಂಇ ಕ್ಷೇತ್ರಗಳಿಗೆ ನೀಡುವ ಸಾಲಗಳ ಕುರಿತು ಇಲ್ಲಿ ಮಾಹಿತಿ ನೀಡಲಿದ್ದಾರೆ.

ಬ್ಯಾಂಕೆಡ್ಜ್ ಗೆ 4 ವರ್ಷಗಳಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ಗುರಿಬ್ಯಾಂಕೆಡ್ಜ್ ಗೆ 4 ವರ್ಷಗಳಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ಗುರಿ

ಹಣಕಾಸು ಸೇರ್ಪಡೆ ಯೋಜನೆಗಳಾದ ಪಿಎಂಜೆಡಿವೈ/ ಬಿಎಸ್.ಡಿಬಿ ಖಾತೆ ತೆರೆಯುವುದು , ಸಾಮಾಜಿಕ ಸುರಕ್ಷಾ ಯೋಜನೆಗಲಾದ ಪಿಎಂಎಸ್‍ಬಿವೈ, ಪಿಎಂಜೆಜೆವೈ, ಎಪಿವೈ, ಇಂಟರ್ನೆಟ್, ಮೊಬೈಲ್ ಬ್ಯಾಂಕಿಂಗ್, ಬ್ಯಾಂಕ್ ಡಿಜಿಟಲೀಕರಣ, ಭೀಮ್ ಆಪ್ ನಂತಹ ವ್ಯವಸ್ತೆಯಿಂದ ಡಿಜಿಟಲ್ ಪಾವತಿ ಮೊದಲಾದ ವಿಚಾರಗಳನ್ನು ಶಿಬಿರದಲ್ಲಿ ಮನವರಿಕೆ ಮಾಡಿಕೊಡಲಾಗವುದು. ಯುಐಡಿಎಐ ನೆರವಿನೊಂದಿಗೆ ಗ್ರಾಹಕರಿಗೆ ಆಧಾರ್ ನೋಂದಣಿ ಮತ್ತು ಆಧಾರ್ ಪರಿಷ್ಕರಣೆ ಮಾಡುವುದಕ್ಕೂ ಶಿಬಿರದಲ್ಲಿ ಅವಕಾಶವಿದೆ.

Bank of India launch first phase of customer outreach loan initiative

ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾದ ವಲಯ ಪ್ರಬಂಧಕ ಪ್ರಮೋದ್ ಕುಮಾರ್ ಬತಾಲ್, ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ಕೆ.ಎನ್. ಮಂಜುನಾಥ್ , ಸಿಂಡಿಕೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.

English summary
Bank of India will launch first phase of customer outreach loan initiative from Oct 3 at Jnana Jyothi auditorium, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X