ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ ಬ್ಯಾಂಕ್ 21 ದಶಲಕ್ಷ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿಂಗ್ ಸೇವೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಆಕ್ಸೆಂಚರ್ ಮತ್ತು ಬ್ಯಾಂಕ್ ಆಫ್ ಬರೋಡಾ ಯಶಸ್ವಿಯಾಗಿ ಹಿಂದಿನ ವಿಜಯ ಬ್ಯಾಂಕ್ ಶಾಖೆಗಳು ಮತ್ತು ಬ್ಯಾಂಕ್ ಆಫ್ ಬರೋಡಾ ಶಾಖೆಗಳ ತಂತ್ರಜ್ಞಾನ ಸಮನ್ವಯನ್ನು ಪೂರ್ಣಗೊಳಿಸಿವೆ. ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳ ತ್ರಿಮುಖ ವಿಲೀನ ಪ್ರಕ್ರಿಯೆಯ ನಂತರದ ಭಾಗವಾಗಿ ಈ ತಂತ್ರಜ್ಞಾನ ಸಮನ್ವಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಆಕ್ಸೆಂಚರ್ ಇದೀಗ ಹಿಂದಿನ ದೇನಾ ಬ್ಯಾಂಕಿನ ಐಟಿ ವ್ಯವಸ್ಥೆಯನ್ನು ಬ್ಯಾಂಕ್ ಆಫ್ ಬರೋಡಾ ಜತೆ ಜೋಡಿಸಲಿದೆ.

ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಜತೆ 2019ರಲ್ಲಿ ವಿಲೀನವಾದಾಗ ದೇಶದ ಮೂರನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೃಷ್ಟಿಯಾಗಿತ್ತು. ಇದು ಪೂರ್ಣಗೊಂಡ ಬಳಿಕ, ಕ್ರೋಢೀಕೃತ ತಂತ್ರಜ್ಞಾನ ಕಂಪನಿಯಾಗಿ ಆಕ್ಸೆಂಚರ್ ಕಾರ್ಯ ನಿರ್ವಹಿಸುವ ಮೂಲಕ ದೇಶವ್ಯಾಪಿ ಗ್ರಾಹಕ ಸೇವೆಗಳನ್ನು ಮತ್ತು ಸುಮಾರು 9000 ಬ್ಯಾಂಕ್ ಶಾಖೆಗಳು ಹಾಗೂ 12000ಕ್ಕೂ ಅಧಿಕ ಎಟಿಎಂ ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸುವಲ್ಲಿ ನೆರವಾಗಿತ್ತು.

ಕನ್ನಡ ನೆಲದ ವಿಜಯಾ ಬ್ಯಾಂಕ್ ಗೆ ಏಕೆ ಹೀಗೆ ವಿಲೀನದ ಶಿಕ್ಷೆ?ಕನ್ನಡ ನೆಲದ ವಿಜಯಾ ಬ್ಯಾಂಕ್ ಗೆ ಏಕೆ ಹೀಗೆ ವಿಲೀನದ ಶಿಕ್ಷೆ?

ಅಗ್ರಗಣ್ಯ ತಂತ್ರಜ್ಞಾನ ಪಾಲುದಾರ ಕಂಪನಿಯಾಗಿ ತನ್ನ ಪಾತ್ರದಲ್ಲಿ ಎಕ್ಸೆಂಚರ್, ಮೂರು ಬ್ಯಾಂಕ್‍ಗಳ ಐಟಿ ಸಿಸ್ಟಂಗಳನ್ನು ಕ್ರೋಢೀಕರಿಸುವ ನೀಲಿನಕಾಶೆಯನ್ನು ಅಭಿವೃದ್ಧಿಪಡಿಸಿತ್ತು ಹಾಗೂ ಡಾಟಾ ಮೈಗ್ರೇಶನ್, ಅಪ್ಲಿಕೇಶನ್ ಮತ್ತು ಡಾಟಾ ಸೆಂಟರ್ ಕ್ರೋಢೀಕರಣ ಸೇರಿದಂತೆ ತಂತ್ರಜ್ಞಾನ ಸಮನ್ವಯವನ್ನು ಕಾರ್ಯಗತಗೊಳಿಸುವ ಕಾರ್ಯತಂತ್ರದ ಮೇಲ್ವಿಚಾರಣೆಯ ಹೊಣೆ ಹೊತ್ತಿತ್ತು. ಜತೆಗೆ ವಹಿವಾಟು ನಿರಂತರತೆಯನ್ನು ನಿರ್ವಹಿಸುವ ಹೊಣೆಯೂ ಆಕ್ಸೆಂಚರ್ ನದ್ದಾಗಿತ್ತು.

Bank of Baroda, Accenture Complete Technology Integration of Former Vijaya Bank Branches

ವಿಜಯ ಬ್ಯಾಂಕ್ ವಲಸೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ವಿಜಯ ಬ್ಯಾಂಕ್‍ನ 1900ಕ್ಕೂ ಅಧಿಕ ಶಾಖೆಗಳ ಸುಮಾರು 21 ದಶಲಕ್ಷ ಗ್ರಾಹಕರು ಇದೀಗ ಸುಲಲಿತವಾಗಿ ಬ್ಯಾಂಕ್ ಆಫ್ ಬರೋಡಾಗೆ ವಲಸೆ ಬಂದಂತಾಗಿದೆ. ಈ ವಲಸೆ ಪ್ರಕ್ರಿಯೆಯನ್ನು ದೂರಸಂವೇದಿ ವಿಧಾನದ ಮೂಲಕ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಪೂರ್ಣಗೊಳಿಸಲಾಗಿದ್ದು, ವಹಿವಾಟು ನಿರಂತರತೆ ಮೇಲೆ ಯಾವುದೇ ಪರಿಣಾಮವಾಗಿಲ್ಲ.

ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!

ಈ ಬಗ್ಗೆ ವಿವರ ನೀಡಿದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ತಂತ್ರಜ್ಞಾನ ಅಧಿಕಾರಿ ಶರದ್ ಸಕ್ಸೇನಾ, "ನಮ್ಮ ತಂತ್ರಜ್ಞಾನ ಸಮನ್ವಯದ ಮುಖ್ಯ ಗುರಿಯೆಂದರೆ, ವಿಲೀನಗೊಂಡ ಬ್ಯಾಂಕ್‍ಗಳ ಎಲ್ಲ ಗ್ರಾಹಕರಿಗೆ ಮುಂದಿನ ಪೀಳಿಗೆಯ ಬ್ಯಾಂಕಿಂಗ್ ಅನುಭವಕ್ಕೆ ದಾರಿ ಮಾಡಿಕೊಡುವುದು ಹಾಗೂ ಈ ಪ್ರಕ್ರಿಯೆಯಲ್ಲಿ ಗ್ರಾಹಕ ಸೇವೆಗಳಿಗೆ ಯಾವುದೇ ಅಡೆತಡೆಗಳು ಆಗದಂತೆ ಕ್ರಮ ಕೈಗೊಳ್ಳುವುದಾಗಿತ್ತು. ಹಿಂದಿನ ವಿಜಯ ಬ್ಯಾಂಕಿನ ತಂತ್ರಜ್ಞಾನ ಮೂಲಸೌಕರ್ಯವನ್ನು ಬ್ಯಾಂಕ್ ಆಫ್ ಬರೋಡಾ ತಂತ್ರಜ್ಞಾನದ ಜತೆ ಸಮನ್ವಯಗೊಳಿಸುವಲ್ಲಿ ಆಕ್ಸೆಂಚರ್ ಪಾತ್ರ ಮಹತ್ವದ್ದಾಗಿದ್ದು, ಈ ವರ್ಗಾವಣೆ ಪ್ರಕ್ರಿಯೆ ಸುಲಲಿತವಾಗಿ ಹಾಗೂ ಸುಗಮವಾಗಿ ನಡೆಯುವಂತೆ ಮಾಡಿದೆ ಹಾಗೂ ಈ ವರ್ಗಾಂತರ ಅವಧಿಯಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಈ ಸಮನ್ವಯಿತ ತಂತ್ರಜ್ಞಾನವು ಹಿಂದಿನ ವಿಜಯ ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡಾದ ಸಮಗ್ರ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡಲಿದ್ದು, ಇದರ ಜತೆಗೆ ಮುಂದಿನ ನೋಟಿಸ್ ನೀಡುವವರೆಗೆ ತಮ್ಮ ಹಾಲಿ ಪಾವತಿ ಸಾಧನಗಳನ್ನು ಬಳಸಿಕೊಳ್ಳಲು ಅವಕಾಶ ಇದೆ" ಎಂದು ಹೇಳಿದರು.

English summary
Accenture and Bank of Baroda have successfully completed the technology integration of the former Vijaya Bank’s branches with Bank of Baroda – part of the post-merger integration of the first three-way merger of public sector banks in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X