ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಫ್ ಲಾಕರ್ ಗಳ ವಸ್ತುಗಳು ಕಾಣೆಯಾದರೆ, ಬ್ಯಾಂಕ್ ಜವಾಬ್ದಾರಿಯಲ್ಲ!

ಬ್ಯಾಂಕುಗಳ ಸೇಫ್ ಡೆಪಾಸಿಟ್ ಲಾಕರ್ ಗಳಲ್ಲಿ ಇಡುವ ವಸ್ತುಗಳು ಕಾಣೆಯಾದರೆ ಸಂಬಂಧಪಟ್ಟ ಬ್ಯಾಂಕ್ ಜವಾಬ್ದಾರವಲ್ಲ. ಅಲ್ಲದೆ, ಬ್ಯಾಂಕುಗಳಿಂದ ಯಾವುದೇ ಪರಿಹಾರವೂ ಸಿಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ.

|
Google Oneindia Kannada News

ಬೆಂಗಳೂರು, ಜೂನ್ 26: ಬ್ಯಾಂಕ್ ಲಾಕರ್ ಗಳಲ್ಲಿ ಇಟ್ಟ ವಸ್ತುಗಳು ಕಾಣೆಯಾದರೆ ಅಥವಾ ಕಳುವಾದರೆ ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಯಾವುದೇ ರೀತಿಯಲ್ಲಿ ಜವಾಬ್ದಾರಿಯಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸ್ಪಷ್ಟಪಡಿಸಿದೆ.

ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...

ಲಾಕರ್ ಗಳಲ್ಲಿನ ವಸ್ತುಗಳು ಕಳ್ಳತನವಾದರೆ ಅಥವಾ ಕಾಣೆಯಾದರೆ, ಅದಕ್ಕೆ ಬ್ಯಾಂಕು ಗಳು ಪರಿಹಾರ ನೀಡಬೇಕಿಲ್ಲ ಎಂಬ ಸ್ಪಷ್ಟನೆಯನ್ನೂ ಅದು ನೀಡಿದೆ.

Bank not responsible for any loss in safe locker deposit

ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ವಕೀಲ ಕುಶ್ ಕಲ್ರಾ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸುವಾಗ ಭಾರತೀಯ ರಿಸರ್ವ್ ಬ್ಯಾಂಕ್ ಹೀಗೆ ಹೇಳಿದೆ.

ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಿರುವ ಆರ್ ಬಿಐ, ಸೇಫ್ ಲಾಕರನ್ನು ಬಾಡಿಗೆಗೆ ನೀಡುವಾಗ ಗ್ರಾಹಕರ ಜತೆ ಮಾಡಿ ಕೊಳ್ಳುವ ಒಪ್ಪಂದವು ಬಾಡಿಗೆದಾರ ಮತ್ತು ಮನೆ ಮಾಲೀಕನ ಮಧ್ಯೆ ಆಗುವ ಒಪ್ಪಂದದ ಮಾದರಿಯಲ್ಲಿ ಇರುತ್ತದೆ. ಹೀಗಾಗಿ, ಲಾಕರ್‌ಗಳಲ್ಲಿ ಇಟ್ಟ ವಸ್ತುಗಳಿಗೆ ಆಯಾ ಗ್ರಾಹಕರೇ ಹೊಣೆಗಾರರು ಎಂದು ಹೇಳಿದೆ.

ಜಿಎಸ್ ಟಿ: ಮಹಿಳೆಯರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಯಾಕೆ?ಜಿಎಸ್ ಟಿ: ಮಹಿಳೆಯರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಯಾಕೆ?

ಕುಶ್ ಲಗ್ರಾ ಈ ಹಿಂದೆ 19 ಬ್ಯಾಂಕುಗಳಿಗೆ ಇಂಥದ್ದೇ ಪ್ರಶ್ನೆ ಕೇಳಿದಾಗ ಅವೂ ಸಹ ಜವಾಬ್ದಾರಿ ಹೊರಲು ನುಣುಚಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಆರ್ ಬಿಐಗೇ ಅವರು ಅರ್ಜಿ ಹಾಕಿದ್ದರು. ಇದೀಗ, ಅಲ್ಲಿಂದಲೂ ಅದೇ ಮಾದರಿಯ ಉತ್ತರ ಬಂದಿದೆ.

ಆರ್ ಬಿಐನ ಈ ಸ್ಪಷ್ಟನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕುಶ್ ಕಲ್ರಾ, ಗ್ರಾಹಕರಿಗೆ ಆಗುವ ನಷ್ಟದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಎಲ್ಲಾ ಬ್ಯಾಂಕುಗಳು ಒಗ್ಗಟ್ಟಾಗಿರುವುದು ಸ್ಪರ್ಧಾ ಕಾಯ್ದೆಗೆ ವಿರುದ್ಧವಾದುದು ಎಂದಿದ್ದಾರೆ. ಈ ಬಗ್ಗೆ ಸ್ಪರ್ಧಾ ಆಯೋಗಕ್ಕೆ ದೂರು ನೀಡಲೂ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ಪರ್ಧಾ ಆಯೋಗದಿಂದ ಸೂಕ್ತ ತನಿಖೆಯಾಗಬೇಕೆಂಬುದು ಅವರ ಒತ್ತಾಯವಾಗಿದೆ.

English summary
If things which are in safe lockers of any banks stolen, the concerned bank is neither responsible nor it give any compensation for the things lost, Reserve Bank of India clarifies while replying to an RTI application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X