• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ ತಿಂಗಳಲ್ಲಿ ಈ ದಿನಗಳಲ್ಲಿ ಬ್ಯಾಂಕ್ ರಜೆ ಇರಲಿದೆ

|

ನವದೆಹಲಿ, ಏಪ್ರಿಲ್ 27: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಮೇ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಮೇ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ ಜಾರಿಯಲ್ಲಿದ್ದರೂ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.

ಕರ್ನಾಟಕ : 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆಕರ್ನಾಟಕ : 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ

ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಬ್ಯಾಂಕ್ ಕಚೇರಿಗಳು ಬಂದ್ ಆಗಿದ್ದರೂ, ಮೊಬೈಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

ಮೇ 2021ರಲ್ಲಿ ಬ್ಯಾಂಕ್ ರಜಾ ದಿನ
ದಿನ ದಿನಾಂಕ ರಜಾ ದಿನ ಮೆಟ್ರೋ ನಗರ
ಮೇ 01, 2021 ಶನಿವಾರ ಮಹಾರಾಷ್ಟ್ರ ದಿನ, ಮೇ ದಿನ, ಕಾರ್ಮಿಕರ ದಿನ ದೇಶದೆಲ್ಲೆಡೆ
ಮೇ 02 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಮೇ 08 ಶನಿವಾರ ವಾರದ ರಜೆ ದೇಶದೆಲ್ಲೆಡೆ
ಮೇ 09 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಮೇ 13 ಗುರುವಾರ ಈದ್ ಉಲ್ ಫಿತ್ರ್ ರಂಜಾನ್ ಈದ್ ಮುಂಬೈ ಹಾಗೂ ಇತರೆಡೆ
ಮೇ 14 ಶುಕ್ರವಾರ ಬಸವ ಜಯಂತಿ, ಅಕ್ಷಯ ತೃತೀಯ, ಭಗವಾನ್ ಶ್ರೀ ಪರಶುರಾಮ್ ಜಯಂತಿ ದೆಹಲಿ, ಕೋಲ್ಕತಾ, ಚೆನ್ನೈ, ಬೆಂಗಳೂರು ಹಾಗೂ ಇತರೆಡೆ
ಮೇ 16 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಮೇ 22 ಶನಿವಾರ ವಾರದ ರಜೆ ದೇಶದೆಲ್ಲೆಡೆ
ಮೇ 23 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಮೇ 26 ಬುಧವಾರ ಬೌದ್ಧ ಪೂರ್ಣಿಮಾ ದೇಶದೆಲ್ಲೆಡೆ
ಮೇ 30 ಭಾನುವಾರ ವಾರದ ರಜೆ ದೇಶದೆಲ್ಲೆಡೆ

ಮೇಲ್ಕಂಡ ದಿನಾಂಕಗಳಲ್ಲದೆ, ಏಪ್ರಿಲ್ 4(ಭಾನುವಾರ), ಏಪ್ರಿಲ್ 10 (2ನೇ ಶನಿವಾರ), ಏಪ್ರಿಲ್ 11 (ಭಾನುವಾರ), ಏಪ್ರಿಲ್ 18 (ಭಾನುವಾರ), 24 (4ನೇ ಶನಿವಾರ) ಹಾಗೂ ಏಪ್ರಿಲ್ 25 (ಭಾನುವಾರ) ರಂದು ರಜೆ ಇರಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೇ 7ರಂದು ಜುಮಾತ್ ಅಲ್ ವಿದಾ ಕಾರಣ ರಜೆ ಇರಲಿದೆ.

English summary
Bank holidays in May 2021: Banks to remain closed on these dates; Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X