ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bank Holidays in March 2022 : ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳ ರಜಾ ದಿನಗಳು ಎಷ್ಟಿದೆ?, ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಫೆಬ್ರವರಿ 28: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮಾ‌ರ್ಚ್ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿಯಲ್ಲಿ ಪ್ರಕಟ ಮಾಡಿದೆ. ಆರ್‌ಬಿಐ ಹಂಚಿಕೊಂಡ ರಜಾ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 2022 ರಲ್ಲಿ ಬ್ಯಾಂಕುಗಳು 13 ದಿನ ಮುಚ್ಚಲಿದೆ. ರಾಷ್ಟ್ರೀಯ ರಜಾದಿನಗಳ ಹೊರತಾಗಿ, ಕೆಲವು ರಾಜ್ಯ-ವಾರು ರಜಾದಿನಗಳು ಎಲ್ಲಾ ಭಾನುವಾರಗಳ ರಜೆ, ಎರಡನೇ ನಾಲ್ಕನೇ ಶನಿವಾರ ಇದರಲ್ಲಿ ಸೇರ್ಪಡೆ ಆಗಿದೆ.

ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ. ಈ ಹಣಕಾಸು ವರ್ಷ ಅಂತ್ಯದ ತಿಂಗಳಾದ ಮಾರ್ಚ್‌ನಲ್ಲಿ ಹಲವಾರು ಬ್ಯಾಂಕ್‌ ವಹಿವಾಟುಗಳನ್ನು ನೀವು ಮಾಡಬೇಕಾಗಿರಬಹುದು. ಆದ್ದರಿಂದಾಗಿ ಬ್ಯಾಂಕ್‌ಗೆ ಹೋಗುವ ಮುನ್ನ ಬ್ಯಾಂಕ್ ರಜೆ ಪಟ್ಟಿಯನ್ನು ನೀವು ನೋಡುವುದು ಮುಖ್ಯ.

 ದೇಶದಲ್ಲಿ ಫೆಬ್ರವರಿ ತಿಂಗಳಲ್ಲಿ ಬ್ಯಾಂಕುಗಳ ರಜಾ ದಿನಗಳು ಎಷ್ಟಿದೆ? ದೇಶದಲ್ಲಿ ಫೆಬ್ರವರಿ ತಿಂಗಳಲ್ಲಿ ಬ್ಯಾಂಕುಗಳ ರಜಾ ದಿನಗಳು ಎಷ್ಟಿದೆ?

ಅಗರ್ತಲಾ, ಐಜ್ವಾಲ್, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೋಲ್ಕತ್ತಾ, ನವದೆಹಲಿ, ಪಣಜಿ, ಪಾಟ್ನಾ ಮತ್ತು ಶಿಲ್ಲಾಂಗ್ ಹೊರತುಪಡಿಸಿ ಹೆಚ್ಚಿನ ನಗರಗಳಲ್ಲಿ ಮಹಾಶಿವರಾತ್ರಿಯ ಕಾರಣ ಮಾರ್ಚ್ 1 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಗ್ಯಾಂಗ್‌ಟಾಕ್‌ನಲ್ಲಿ ಮಾರ್ಚ್ 3 ರಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಚಾಪ್‌ಚಾರ್ ಕುಟ್‌ನ ಕಾರಣದಿಂದಾಗಿ ಐಜ್ವಾಲ್‌ನಲ್ಲಿನ ಬ್ಯಾಂಕುಗಳು ಮಾರ್ಚ್ 4 ರಂದು ಮುಚ್ಚಲ್ಪಡುತ್ತವೆ.

Bank Holidays in March 2022: Banks Will Be Closed for 13 Days in This Month

ಮಾರ್ಚ್ 17 ರಂದು ಹೋಲಿ ಹಿನ್ನೆಲೆ ಡೆಹ್ರಾಡೂನ್, ಕಾನ್ಪುರ, ಲಕ್ನೋ ಮತ್ತು ರಾಂಚಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಂತೆಯೇ, ಹೋಳಿ/ಯೋಸಾಂಗ್ 2 ನೇ ದಿನವನ್ನು ಆಚರಿಸಲು ಮಾರ್ಚ್ 19 ರಂದು ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹಾಗಾದರೆ ಮಾರ್ಚ್ ತಿಂಗಳಿನಲ್ಲಿ ಯಾವ್ಯಾವ ದಿನಗಳು ಬ್ಯಾಂಕ್‌ಗಳು ಬಂದ್‌ ಆಗಿರಲಿದೆ ಎಂದು ತಿಳಿಯಲು ಮುಂದೆ ಓದಿ...

 ಮಲ್ಯ, ನೀರವ್ ಮತ್ತು ಚೋಕ್ಸಿಯಿಂದ 18,000 ಕೋಟಿ ರೂ. ವಸೂಲಿ ಮಾಡಿದ ಬ್ಯಾಂಕ್‌ ಮಲ್ಯ, ನೀರವ್ ಮತ್ತು ಚೋಕ್ಸಿಯಿಂದ 18,000 ಕೋಟಿ ರೂ. ವಸೂಲಿ ಮಾಡಿದ ಬ್ಯಾಂಕ್‌

ಬ್ಯಾಂಕ್‌ ರಜೆಗಳ ಮೂರು ವರ್ಗೀಕರಣ

ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ಅವುಗಳು ಈ ಕೆಳಕಂಡಂತಿವೆ:

1. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ
2. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ
3. ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ

ಮಾರ್ಚ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ:

ಮಾರ್ಚ್ 01, 2022: ಮಹಾಶಿವರಾತ್ರಿ
ಮಾರ್ಚ್ 03, 2022: ಲೋಸರ್
ಮಾರ್ಚ್ 04, 2022: ಚಾಪ್ಚಾರ್ ಕುಟ್
ಮಾರ್ಚ್ 17, 2022: ಹೋಳಿ
ಮಾರ್ಚ್ 18, 2022: ಹೋಳಿ/ಹೋಳಿ 2ನೇ ದಿನ
ಮಾರ್ಚ್ 19, 2022: ಹೋಳಿ/ಯೋಸಾಂಗ್ 2ನೇ ದಿನ
ಮಾರ್ಚ್ 22, 2022: ಬಿಹಾರ ದಿವಸ

ಶನಿವಾರ ಮತ್ತು ಭಾನುವಾರದ ರಜಾದಿನಗಳ ಪಟ್ಟಿ:

ಭಾನುವಾರ: ಮಾರ್ಚ್ 6, 2022
ಎರಡನೇ ಶನಿವಾರ: ಮಾರ್ಚ್ 12, 2022
ಭಾನುವಾರ: ಮಾರ್ಚ್ 13, 2022
ಭಾನುವಾರ: ಮಾರ್ಚ್ 20, 2022
ನಾಲ್ಕನೇ ಶನಿವಾರ: ಮಾರ್ಚ್ 26, 2022
ಭಾನುವಾರ: ಮಾರ್ಚ್ 27, 2022

ಇನ್ನು ಇದನ್ನು ಹೊರತುಪಡಿಸಿ ಬ್ಯಾಂಕ್‌ ಮುಷ್ಕರ ಹಿನ್ನೆಲೆ ಮಾರ್ಚ್ 28-29ರಂದು ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕಾರ್ಮಿಕ ಸಂಘಟನೆಗಳು ಕಳೆದ ತಿಂಗಳು ತನ್ನ ನಿಗದಿತ ಫೆಬ್ರವರಿ 23-24 ರ ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಲು ಮುಂದಾಗಿತ್ತು. ಆದರೆ ಕೊರೊನಾ ವೈರಸ್‌ ಸಾಂಕ್ರಾಮಿಕ ಮೂರನೇ ಅಲೆಯ ಸಂದರ್ಭದಲ್ಲಿ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಿಂದಾಗಿ ಸರ್ಕಾರದ ಬ್ಯಾಂಕ್‌ ಖಾಸಗೀಕರಣದ ವಿರುದ್ಧದ ಮುಷ್ಕರವನ್ನು ಮುಂದೂಡಿಕೆ ಮಾಡಿತ್ತು. (ಒನ್‌ಇಂಡಿಯಾ ಸುದ್ದಿ)

English summary
Bank Holidays In March 2022 : Let's have a look at important bank dates when banks will remain closed in the month of March. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X