ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bank Holidays In June 2022 : ಜೂನ್ ತಿಂಗಳಲ್ಲಿ ಬ್ಯಾಂಕ್‌ ರಜಾದಿನಗಳ ಪಟ್ಟಿ

|
Google Oneindia Kannada News

ನವದೆಹಲಿ ಮೇ 18: ಜೂನ್ ತಿಂಗಳಲ್ಲಿ ಯಾವುದೇ ವಿಶೇಷ ಬ್ಯಾಂಕ್ ರಜಾದಿನಗಳಿಲ್ಲ. ಉತ್ತರ ಪ್ರದೇಶದಲ್ಲಿ ಮಾತ್ರ ತಿಂಗಳು ಪೂರ್ತಿ ಬ್ಯಾಂಕ್‌ಗಳು ತೆರೆದಿರುತ್ತವೆ. ಪ್ರತಿ ವರ್ಷ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಜಾದಿನದ ಕ್ಯಾಲೆಂಡರ್ ಬಿಡುಗಡೆ ಮಾಡುತ್ತದೆ. ಅದು ದೇಶಾದ್ಯಂತ ಯಾವ ನಿರ್ದಿಷ್ಟ ದಿನಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ ಎಂದು ನಿರ್ದೇಶಿಸುತ್ತದೆ. ಆರ್‌ಬಿಐ ರಜೆಯ ಕ್ಯಾಲೆಂಡರ್ ಪ್ರಕಾರ ಜೂನ್ ತಿಂಗಳಲ್ಲಿ ಯಾವುದೇ ವಿಶೇಷ ರಜಾದಿನಗಳಿಲ್ಲ. ಅಂದರೆ ವಾರದ ರಜೆ ಹೊರತುಪಡಿಸಿ, ಇಡೀ ತಿಂಗಳು ಬ್ಯಾಂಕ್‌ಗಳು ತೆರೆದಿರುತ್ತವೆ. ಈ ರಜಾದಿನಗಳು ರಾಜ್ಯ ನಿರ್ದಿಷ್ಟ ಆಚರಣೆಗಳನ್ನು ಆಧರಿಸಿರುವುದರಿಂದ ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ವಿಶೇಷವೆಂದರೆ ಜೂನ್‌ನಲ್ಲಿ ಯುಪಿಯಲ್ಲಿ ಕೇವಲ 6, ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ 12 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲಿವೆ. ಇದರಿಂದ ಸಾಮಾನ್ಯ ಗ್ರಾಹಕರ ಬ್ಯಾಂಕಿನ ಸೇವೆಗಳಲ್ಲಿ ಅಡಚಣೆ ಆಗಬಹುದು.

ರೈತರ ಖಾತೆಗೆ ಕಾಸು ಹಾಕುವುದು ಯಾವಾಗ ಕೇಂದ್ರ ಸರ್ಕಾರ?; ಇಲ್ಲಿದೆ ಮಾಹಿತಿರೈತರ ಖಾತೆಗೆ ಕಾಸು ಹಾಕುವುದು ಯಾವಾಗ ಕೇಂದ್ರ ಸರ್ಕಾರ?; ಇಲ್ಲಿದೆ ಮಾಹಿತಿ

ಭಾರತೀಯ ರಿಸರ್ವ್ ಬ್ಯಾಂಕ್ ನಾಲ್ಕು ವಿಭಾಗಗಳಲ್ಲಿ ಬ್ಯಾಂಕ್ ರಜಾದಿನಗಳನ್ನು ಸೂಚಿಸುತ್ತದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ರಜಾದಿನಗಳು, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾದಿನಗಳು ಮತ್ತು ಬ್ಯಾಂಕ್ ಖಾತೆ ಮುಚ್ಚುವಿಕೆಗಳು. ರಾಷ್ಟ್ರೀಯ ರಜಾದಿನಗಳ ಜೊತೆಗೆ ಕೆಲವು ರಾಜ್ಯ-ನಿರ್ದಿಷ್ಟ ರಜಾದಿನಗಳಿವೆ. ಈ ರಜೆಗಳು ಎಲ್ಲಾ ಭಾನುವಾರಗಳು ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಒಳಗೊಂಡಿರುತ್ತದೆ.

Know Bank Holiday Dates in Various States in Month of June

ವಿಶೇಷ ರಜೆ ಇಲ್ಲ

ಜೂನ್ ತಿಂಗಳಿನಲ್ಲಿ ದೇಶಾದ್ಯಂತ 12 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಬ್ಯಾಂಕ್ ಉದ್ಯೋಗಿಗಳಿಗೆ ಒಟ್ಟು 12 ರಜೆಗಳು ಲಭ್ಯವಿವೆ. ಆದರೆ ಉತ್ತರ ಪ್ರದೇಶದಲ್ಲಿ ಕೇವಲ 6 ದಿನ ಮಾತ್ರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಜೂನ್‌ನಲ್ಲಿ ಯಾವುದೇ ವಿಶೇಷ ದಿನ ಅಥವಾ ಹಬ್ಬವಾಗಿರುವುದರಿಂದ, ಕೇವಲ ಆರು ರಜಾದಿನಗಳಿವೆ. ಈ ಪೈಕಿ 4 ಭಾನುವಾರ, 2 ಮತ್ತು 4ನೇ ಶನಿವಾರ ರಜೆ ಇರುತ್ತದೆ. ಒಂದು ರೀತಿಯಲ್ಲಿ, ಬ್ಯಾಂಕ್ ಇಡೀ ತಿಂಗಳು ತೆರೆದಿರುತ್ತದೆ.

Know Bank Holiday Dates in Various States in Month of June

ಈ ರಾಜ್ಯಗಳಲ್ಲಿ ಬ್ಯಾಂಕ್ ರಜೆ

ಜೂನ್ 2 (ಗುರುವಾರ): ಮಹಾರಾಣಾ ಪ್ರತಾಪ್ ಜಯಂತಿ/ತೆಲಂಗಾಣ ಸಂಸ್ಥಾಪನಾ ದಿನ - ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ, ತೆಲಂಗಾಣ
ಜೂನ್ 3 (ಶುಕ್ರವಾರ): ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಹುತಾತ್ಮ ದಿನ - ಪಂಜಾಬ್
ಜೂನ್ 5 (ಭಾನುವಾರ): ಸಾಪ್ತಾಹಿಕ ರಜೆ
ಜೂನ್ 11 (ಶನಿವಾರ): ಎರಡನೇ ಶನಿವಾರ ಬ್ಯಾಂಕ್ ರಜೆ
ಜೂನ್12 (ಭಾನುವಾರ): ಸಾಪ್ತಾಹಿಕ ರಜೆ
ಜೂನ್ 14 (ಮಂಗಳವಾರ): ಮೊದಲ ರಾಜ/ಸಂತ ಗುರು ಕಬೀರ್ ಜಯಂತಿ - ಒರಿಸ್ಸಾ, ಚಂಡೀಗಢ, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್
ಜೂನ್15 (ಬುಧವಾರ): ರಾಜ ಸಂಕ್ರಾಂತಿ/ಗುರು ಹರಗೋಬಿಂದ್ ಜನ್ಮದಿನ - ಒರಿಸ್ಸಾ, ಮಿಜೋರಾಂ, ಜಮ್ಮು ಮತ್ತು ಕಾಶ್ಮೀರ
ಜೂನ್19 (ಭಾನುವಾರ): ಸಾಪ್ತಾಹಿಕ ರಜೆ
ಜೂನ್ 22 (ಬುಧವಾರ): ಖಾರ್ಚಿ ಪೂಜೆ - ತ್ರಿಪುರ
ಜೂನ್ 25 (ಶನಿವಾರ): ನಾಲ್ಕನೇ ಶನಿವಾರ ಬ್ಯಾಂಕ್ ರಜೆ

English summary
There Are no special bank holidays in June. In Uttar Pradesh alone, banks are open throughout the month. The Reserve Bank of India releases a holiday calendar every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X