ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bank Holidays in August 2022 : ಆಗಸ್ಟ್ ತಿಂಗಳಿನಲ್ಲಿ 18 ದಿನ ಬ್ಯಾಂಕ್ ರಜೆ!

|
Google Oneindia Kannada News

ನವದೆಹಲಿ, ಜುಲೈ 29: ಭಾರತದ ಹಬ್ಬಗಳ ಋತು ಶುರುವಾಗಿದೆ. ಮುಂದಿನ ತಿಂಗಳಿನಲ್ಲಿ ದೇಶದ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳು ಫಿಕ್ಸ್ ಆಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಗಸ್ಟ್ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿಯಲ್ಲಿ ಪ್ರಕಟ ಮಾಡಿದೆ.

ಆರ್‌ಬಿಐ ಹಂಚಿಕೊಂಡ ರಜಾ ಕ್ಯಾಲೆಂಡರ್ ಪ್ರಕಾರ, ಆಗಸ್ಟ್ 2022 ರಲ್ಲಿ ಬ್ಯಾಂಕುಗಳು ಬರೋಬ್ಬರಿ 18 ದಿನ ಮುಚ್ಚಲಿದೆ. ರಾಷ್ಟ್ರೀಯ ರಜಾದಿನಗಳ ಹೊರತಾಗಿ, ಕೆಲವು ರಾಜ್ಯ-ವಾರು ರಜಾದಿನಗಳು ಎಲ್ಲಾ ಭಾನುವಾರಗಳ ರಜೆ, ಎರಡನೇ ಮತ್ತು ನಾಲ್ಕನೇ ಶನಿವಾರವೂ ಇದರಲ್ಲಿ ಸೇರ್ಪಡೆ ಆಗಿದೆ.

ಬ್ಯಾಂಕ್‌ ಅಲರ್ಟ್: ಮುಂದಿನ ವಾರ 4 ದಿನ ಬ್ಯಾಂಕ್‌ ರಜೆಬ್ಯಾಂಕ್‌ ಅಲರ್ಟ್: ಮುಂದಿನ ವಾರ 4 ದಿನ ಬ್ಯಾಂಕ್‌ ರಜೆ

ಕಳೆದ ಜುಲೈ ತಿಂಗಳಿನಲ್ಲಿ ಭಾನುವಾರ, ಶನಿವಾರದ ದಿನಗಳೂ ಸೇರಿದಂತೆ ಒಟ್ಟು 14 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ನೀಡಲಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಅದಕ್ಕಿಂತ ಹೆಚ್ಚು ರಜೆಗಳು ಸಿಗಲಿದೆ. ಬ್ಯಾಂಕ್ ವಹಿವಾಟಿನ ಮೇಲೆ ಅವಲಂಬಿತರಾಗಿರುವ ಮಂದಿ ಒಂದು ಬಾರಿ ಈ ರಜೆಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ರಜೆ ದಿನಗಳ ಹೊರತುಪಡಿಸಿದಂತೆ ಉಳಿದ ದಿನಗಳಲ್ಲಿ ತಮ್ಮ ಬ್ಯಾಂಕ್ ವಹಿವಾಟು ಮುಗಿಸಿಕೊಳ್ಳುವುದಕ್ಕೆ ಇದರಿಂದ ಸಹಾಯವಾಗಲಿದೆ.

ಮೂರು ವಿಭಾಗಗಳಲ್ಲಿ ಬ್ಯಾಂಕುಗಳಿಗೆ ರಜೆ

ಮೂರು ವಿಭಾಗಗಳಲ್ಲಿ ಬ್ಯಾಂಕುಗಳಿಗೆ ರಜೆ

ಸಾರ್ವಜನಿಕ ರಜೆಗಳ ಹೊರತಾಗಿಯೂ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಾದೇಶಿಕ ಕಾರಣಗಳಿಂದ ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ 13 ದಿನ ರಜೆಯನ್ನು ನೀಡಲಾಗುತ್ತಿದೆ. ಸಾಮಾನ್ಯವಾಗಿ

ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ.

1. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ

2. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ

3. ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರದ ಅವಧಿ

ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿ ಎಷ್ಟು ರಜೆ

ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿ ಎಷ್ಟು ರಜೆ

ದಿನಾಂಕ ವಾರ ರಜೆ
2022ರ ಆಗಸ್ಟ್ 1 ಸೋಮವಾರ ದ್ರುಪ್ಕಾ ತ್ಶೆ-ಜಿ ಹಿನ್ನೆಲೆ ಸಿಕ್ಕಿಂ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ರಜೆ
2022ರ ಆಗಸ್ಟ್ 8 ಸೋಮವಾರ ಮೊಹರಾಂ ಹಿನ್ನೆಲೆ ಜಮ್ಮ ಮತ್ತು ಕಾಶ್ಮೀರದಲ್ಲಿ ರಜೆ
2022ರ ಆಗಸ್ಟ್ 9 ಮಂಗಳವಾರ ಮೊಹರಾಂ ಹಿನ್ನೆಲೆ ತ್ರಿಪುರಾ, ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಹೈದ್ರಾಬಾದ್, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ನವದೆಹಲಿ, ಬಿಹಾರ, ಛತ್ತೀಸ್ ಗಢ, ಜಾರ್ಖಂಡ್ ರಾಜ್ಯಗಳಲ್ಲಿ ರಜೆ
2022ರ ಆಗಸ್ಟ್ 11 ಗುರುವಾರ ರಕ್ಷಾ ಬಂಧನ
2022ರ ಆಗಸ್ಟ್ 12 ಶುಕ್ರವಾರ ರಕ್ಷಾ ಬಂಧನ
2022ರ ಆಗಸ್ಟ್ 15 ಸೋಮವಾರ ಸ್ವಾತಂತ್ರ್ಯ ದಿನಾಚರಣೆ
2022ರ ಆಗಸ್ಟ್ 16 ಮಂಗಳವಾರ ಪಾರ್ಸಿ ಹೊಸ ವರ್ಷದ ಹಿನ್ನೆಲೆ ಬೆಲಾಪುರ್, ಮುಂಬೈ ಮತ್ತು ನಾಗಪುರ್ ಪ್ರದೇಶದಲ್ಲಿ ಬ್ಯಾಂಕ್ ರಜೆ
ಆಗಸ್ಟ್ ತಿಂಗಳಿನಲ್ಲಿ ವಾರಾಂತ್ಯದ ಬ್ಯಾಂಕ್ ರಜೆ

ಆಗಸ್ಟ್ ತಿಂಗಳಿನಲ್ಲಿ ವಾರಾಂತ್ಯದ ಬ್ಯಾಂಕ್ ರಜೆಗಳು

ದಿನಾಂಕ ವಾರಾಂತ್ಯದ ರಜೆ ದಿನ
2022ರ ಆಗಸ್ಟ್ 7 ಮೊದಲ ಭಾನುವಾರ
2022ರ ಆಗಸ್ಟ್ 13 ಎರಡನೇ ಶನಿವಾರ ಮತ್ತು ಮಣಿಪುರದಲ್ಲಿ ದೇಶಭಕ್ತರ ದಿನ
2022ರ ಆಗಸ್ಟ್ 14 ಎರಡನೇ ಭಾನುವಾರ
2022ರ ಆಗಸ್ಟ್ 20 ಮೂರನೇ ಶನಿವಾರ ಮತ್ತು ಹೈದ್ರಾಬಾದಿನಲ್ಲಿ ಕೃಷ್ಣ ಜನ್ಮಾಷ್ಠಮಿ
2022ರ ಆಗಸ್ಟ್ 21 ಮೂರನೇ ಭಾನುವಾರ
2022ರ ಆಗಸ್ಟ್ 27 ನಾಲ್ಕನೇ ಶನಿವಾರ
2022ರ ಆಗಸ್ಟ್ 28 ನಾಲ್ಕನೇ ಭಾನುವಾರ
ಬ್ಯಾಂಕ್ ರಜಾ ದಿನಗಳ ಬಗ್ಗೆ ಮೊದಲು ತಿಳಿದುಕೊಳ್ಳಿರಿ

ಬ್ಯಾಂಕ್ ರಜಾ ದಿನಗಳ ಬಗ್ಗೆ ಮೊದಲು ತಿಳಿದುಕೊಳ್ಳಿರಿ

ಭಾರತದಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ವಹಿವಾಟುಗಳು ಬ್ಯಾಂಕಿನೊಂದಿಗೆ ನಂಟು ಹೊಂದಿರುತ್ತದೆ. ಪ್ರತಿನಿತ್ಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಬ್ಯಾಂಕುಗಳೊಂದಿಗೆ ವಹಿವಾಟು ನಡೆಸುತ್ತಾರೆ. ಆಗಸ್ಟ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳಿಂದಾಗಿ ಬ್ಯಾಂಕ್ ವಹಿವಾಟಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಬ್ಯಾಂಕುಗಳು ಕಾರ್ಯ ನಿರ್ವಹಿಸುವ ದಿನಗಳ ಕುರಿತು ತಿಳಿದುಕೊಂಡು ವಹಿವಾಟುಗಳನ್ನು ನಡೆಸುವುದು ಸೂಕ್ತವಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳ ರಜೆ ಯಾವಾಗ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

English summary
Bank Holidays In August 2022 in Karnataka: Let's have a look at important bank dates when banks will remain closed in the month of August. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X