ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರೇ ಎಚ್ಚರ! ಮಾರ್ಚ್ ತಿಂಗಳಲ್ಲಿ 6 ದಿನಗಳ ಕಾಲ ಬ್ಯಾಂಕ್ ಸೇವೆ ವ್ಯತ್ಯಯ

|
Google Oneindia Kannada News

ನವದೆಹಲಿ, ಫೆಬ್ರವರಿ 24: 2020ನೇ ಸಾಲಿನಲ್ಲಿ ಮೂರನೇ ಬಾರಿಗೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನವರಿ 31 ಮತ್ತು ಫೆಬ್ರವರಿ 1 ರಂದು ಎರಡು ದಿನಗಳ ಬ್ಯಾಂಕ್ ಮುಷ್ಕರದ ನಂತರ, ಮಾರ್ಚ್ ತಿಂಗಳಲ್ಲಿ ಮೂರು ದಿನಗಳ ಮುಷ್ಕರಕ್ಕೆ ಬ್ಯಾಂಕ್ ನೌಕರರ ಒಕ್ಕೂಟಗಳು ಕರೆ ನೀಡಿವೆ.

ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್‌ಐ) ಮತ್ತು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮುಷ್ಕರಕ್ಕೆ ಕರೆ ನೀಡಿದ್ದು, ಲಕ್ಷಾಂತರ ಮಂದಿ ಬ್ಯಾಂಕ್ ಸಿಬ್ಬಂದಿ ಮಾರ್ಚ್ 11 ರಿಂದ 13 ರವರೆಗೆ 3 ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ನೌಕರರ ಸಂಘಟನೆಗಳು ಭಾಗಿಯಾಗುವ ಸಾಧ್ಯತೆಯಿದೆ.

ಎಟಿಎಂನಲ್ಲಿ ಉಚಿತ ವಿತ್‌ ಡ್ರಾ 5 ರಿಂದ 3ಕ್ಕೆ ಇಳಿಕೆ?ಎಟಿಎಂನಲ್ಲಿ ಉಚಿತ ವಿತ್‌ ಡ್ರಾ 5 ರಿಂದ 3ಕ್ಕೆ ಇಳಿಕೆ?

ಬೇಡಿಕೆಗಳೇನು?: ವಿಶೇಷ ಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವುದು, ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸುವುದು, ಕುಟುಂಬ ಪಿಂಚಣಿಯಲ್ಲಿ ಸುಧಾರಣೆ ಮುಂತಾದ ಪ್ರಮುಖ ಬೇಡಿಕೆಗಳಿವೆ.

Bank holidays! Bank Strike, No operations for Three days in March

2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ

ಸಾಲು ಸಾಲು ರಜೆಗಳಿವೆ: ಮಾರ್ಚ್ 8 ರಂದು ಭಾನುವಾರ ರಜೆ ಇದೆ. ಮಾರ್ಚ್ 10 ರಂದು ಹೋಳಿಹುಣ್ಣಿಮೆ ಪ್ರಯುಕ್ತ ರಜೆ ಇರುತ್ತದೆ. ಮಾರ್ಚ್ 11 ರಿಂದ 13 ರವರೆಗೆ 3 ದಿನಗಳ ಮುಷ್ಕರ ನಡೆದರೆ, ಮಾರ್ಚ್ 14ರಂದು ಎರಡನೇ ಶನಿವಾರ, ಮಾರ್ಚ್ 15 ಭಾನುವಾರ ರಜೆ ಸಿಗಲಿದೆ. ಸರಣಿಯಾಗಿ 6 ದಿನಗಳ ಕಾಲ ಬ್ಯಾಂಕ್ ಗಳ ಬಾಗಿಲು ಬಂದ್ ಮಾಡಿದರೆ, ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆ. ಹೀಗಾಗಿ, ಬಹುತೇಕ ಮಾರ್ಚ್ 2ನೇ ವಾರ ಬ್ಯಾಂಕುಗಳು ಕಾರ್ಯನಿರ್ವಹಿಸುವ ಸಾಧ್ಯತೆ ಕಡಿಮೆ.

English summary
Bank Employees Federation of India(BEFI) and AIBEA called for three-day nation-wide strike over wage hike from March 11-13.This followed by Holi and other holidays in March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X