ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019-20ರಲ್ಲಿ ಬರೋಬ್ಬರಿ 1.85 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ವಂಚನೆ: ಆರ್‌ಬಿಐ

|
Google Oneindia Kannada News

ನವದೆಹಲಿ, ಆಗಸ್ಟ್‌ 26: ಹಣಕಾಸು ವರ್ಷ 2019-20ರಲ್ಲಿ ಬ್ಯಾಂಕ್ ವಂಚನೆಗಳ ಒಟ್ಟು ಮೌಲ್ಯ ದ್ವಿಗುಣಗೊಂಡಿದೆ ಎಂದು ಆರ್‌ಬಿಐ ಹೇಳಿದೆ.

ಕೋವಿಡ್-19ನಿಂದಾಗಿ ಆರ್ಥಿಕತೆ ಕುಸಿತ ಕಂಡು ಬರುತ್ತಿರುವುದರ ಮಧ್ಯೆಯೇ ಬ್ಯಾಂಕ್ ವಂಚನೆ ಪ್ರಕರಣ ಕೂಡ ಹೆಚ್ಚಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆತಂಕ ಉಂಟುಮಾಡುವ ವರದಿ ನೀಡಿದೆ. 2018-19ರಲ್ಲಿ 71,543 ಕೋಟಿ ರೂ.ಗಳಿಗೆ ಹೋಲಿಸಿದರೆ 2019-20ರಲ್ಲಿ ಒಟ್ಟು ವಂಚನೆ ಪ್ರಕರಣಗಳ ಮೌಲ್ಯ ಶೇಕಡಾ 159ರಷ್ಟು ಹೆಚ್ಚಳವಾಗಿ 1.85 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

'ಆರ್‌ಬಿಐ ಹಿಂದೆ ಕೇಂದ್ರವು ಅಡಗಿಕೊಂಡಿದೆ' : ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್'ಆರ್‌ಬಿಐ ಹಿಂದೆ ಕೇಂದ್ರವು ಅಡಗಿಕೊಂಡಿದೆ' : ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

ಅಂತೆಯೇ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ವಾರ್ಷಿಕ ವರದಿಯಲ್ಲಿ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಹಿಂದಿನ ವರ್ಷದ 6,799 ನಿದರ್ಶನಗಳಿಗೆ ಹೋಲಿಸಿದರೆ, 2019-20ರಲ್ಲಿ ವಂಚನೆಗಳು ಶೇಕಡಾ 28 ರಷ್ಟು ಏರಿಕೆಗೊಂಡು 8,707 ಪ್ರಕರಣಗಳಿಗೆ ತಲುಪಿದೆ. ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕುಗಳು ವರ್ಷಕ್ಕೆ ವರ್ಷಕ್ಕೆ ಶೇಕಡಾ 32ರಷ್ಟು (y-o-y) ವಂಚನೆಗಳ ಒಟ್ಟು ಮೌಲ್ಯದಲ್ಲಿ ಕುಸಿತವನ್ನು ತೋರಿಸಿದೆ. ಆರ್‌ಬಿಐ ಬಿಡುಗಡೆ ಮಾಡಿದ ದತ್ತಾಂಶವು ಕೇವಲ 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ವಂಚನೆಗಳನ್ನು ಒಳಗೊಂಡಿದೆ.

Bank Frauds Rise More Than Double In FY20: RBI

ಸಾರ್ವಜನಿಕ ವಲಯ ಬ್ಯಾಂಕ್ ಗಳಲ್ಲಿ ಶೇಕಡಾ 98ರಷ್ಟು ವಂಚನೆ ಪ್ರಕರಣಗಳು ನಡೆದಿದ್ದು ನಂತರ ಖಾಸಗಿ ವಲಯ ಬ್ಯಾಂಕುಗಳಲ್ಲಿ ಶೇಕಡಾ 18.4ರಷ್ಟಾಗಿವೆ. ಸಾಲಗಳಲ್ಲಿ ಶೇಕಡಾ 98.1ರಷ್ಟು ಅಂದರೆ ಒಟ್ಟು ವಂಚನೆ 1.82 ಲಕ್ಷ ಕೋಟಿ ರೂಪಾಯಿ, ನಂತರ ಕ್ರೆಡಿಟ್, ಡೆಬಿಟ್ ಕಾರ್ಡುಗಳಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಪ್ರತಿವರ್ಷ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುತ್ತದೆ. ವರ್ಷದ ಹಿಂದೆ 71 ಕೋಟಿ(1,866 ಕೇಸುಗಳು) ವರದಿಯಾಗಿವೆ ಎಂದು ಆರ್ ಬಿಐ ಅಂಕಿಅಂಶ ಹೇಳುತ್ತದೆ.

English summary
The total value of bank frauds more than doubled in 2019-20. Total cases of frauds have increased 159% by value to Rs 1.85 lakh crore, compared to Rs 71,543 crore in 2018-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X