ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಬ್ಯಾಂಕ್ ಅಕೌಂಟ್ ಪೋರ್ಟಬಿಲಿಟಿ ವ್ಯವಸ್ಥೆ ಜಾರಿ

ಹಾಲಿ ನಿಮ್ಮ ಖಾತೆಯಿರುವ ಬ್ಯಾಂಕ್ ನ ಸೌಲಭ್ಯಗಳು, ನಿಯಮಾವಳಿಗಳು ನಿಮಗೆ ಇಷ್ಟವಾಗದಿದ್ದರೆ, ನೀವು ಅದೇ ಸಂಖ್ಯೆಯನ್ನು ಉಳಿಸಿಕೊಂಡು ಬೇರೊಂದು ಬ್ಯಾಂಕ್ ಗೆ ನಿಮ್ಮ ಖಾತೆಯನ್ನು ವರ್ಗಾವಣೆ ಮಾಡಿಸಿಕೊಳ್ಳಬಹುದಾಗಿದೆ.

|
Google Oneindia Kannada News

ನವದೆಹಲಿ, ಮೇ 30: ನಾವು ನಮ್ಮ ಮೊಬೈಲ್ ಸಂಖ್ಯೆಯನ್ನು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಪೋರ್ಟ್ ಮಾಡಿಕೊಳ್ಳುವಂತೆಯೇ, ಬ್ಯಾಂಕ್ ಅಕೌಂಟ್ ಸಂಖ್ಯೆಯನ್ನು ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ಪೋರ್ಟ್ ಮಾಡಿಕೊಳ್ಳುವ ಹೊಸ ವ್ಯವಸ್ಥೆಯೊಂದು ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಹಾಲಿ ನಿಮ್ಮ ಖಾತೆಯಿರುವ ಬ್ಯಾಂಕ್ ನ ಸೌಲಭ್ಯಗಳು, ನಿಯಮಾವಳಿಗಳು ನಿಮಗೆ ಇಷ್ಟವಾಗದಿದ್ದರೆ, ನೀವು ಅದೇ ಸಂಖ್ಯೆಯನ್ನು ಉಳಿಸಿಕೊಂಡು ಬೇರೊಂದು ಬ್ಯಾಂಕ್ ಗೆ ನಿಮ್ಮ ಖಾತೆಯನ್ನು ವರ್ಗಾವಣೆ ಮಾಡಿಸಿಕೊಳ್ಳಬಹುದಾಗಿದೆ.[ಅಸ್ತಿತ್ವಕ್ಕೆ ಬಂದ ಪೇಟಿಎಂ ಬ್ಯಾಂಕ್: ನೀವು ತಿಳಿಯಬೇಕಾದ 5 ವಿಚಾರ]

Bank account number portability is now possible: RBI

ಬ್ಯಾಂಕ್ ಬದಲಾದರೂ, ನಿಮ್ಮ ಅಕೌಂಟ್ ಸಂಖ್ಯೆ, ಆಧಾರ್ ಸಂಖ್ಯೆ ಸೇರಿದಂತೆ ಆ ಖಾತೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳೂ ಯಥಾವತ್ತಾಗಿ ಬೇರೊಂದು ಬ್ಯಾಂಕ್ ಗೆ ವರ್ಗಾವಣೆಗೊಳ್ಳುತ್ತವೆ ಎಂದು ಹೇಳಲಾಗಿದೆ.[ಬ್ಯಾಂಕ್ ಗಳಿಂದ ಗ್ರಾಹಕರ ಸುಲಿಗೆ ನಿಲ್ಲಿಸಲು ಆನ್ ಲೈನ್ ಅಭಿಯಾನ]

ಆಧಾರ್ ಕಾರ್ಡ್ ಸಂಖ್ಯೆ ಒಂದೇ ಆಗಿರುತ್ತಾದ್ದರಿಂದ ಈ ರೀತಿಯ ವರ್ಗಾವಣೆಗಳು ಸುಲಭವಾಗಲಿವೆ ಎಂದು ರಿಸರ್ವ್ ಬ್ಯಾಂಕ್ ನ ಉಪ ಗವರ್ನರ್ ಎಸ್.ಎಸ್. ಮುಂದ್ರಾ ತಿಳಿಸಿದ್ದಾರೆ.

English summary
If you are not satisfied with your existing bank and want to switch to another bank while retaining the bank account number and other details, it is possible now, thanks to Aadhaar, according to S S Mundra, deputy governor, Reserve Bank of India (RBI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X