ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀರೊವನ್ನ ಹಿಂದಿಕ್ಕಿದ ಬಜಾಜ್‌, ದೇಶದಲ್ಲಿ ಅತಿದೊಡ್ಡ ಬೈಕ್‌ ಉತ್ಪಾದಕ ಸಂಸ್ಥೆಯೆಂಬ ಹೆಗ್ಗಳಿಕೆ

|
Google Oneindia Kannada News

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೊಟೊಕಾರ್ಪ್‌ ಅನ್ನು ಹಿಂದಿಕ್ಕಿರುವ ಬಜಾಜ್ ಮೇ ತಿಂಗಳಿನಲ್ಲಿ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸಾಧನೆ ಮಾಡಿದೆ.

ಪುಣೆ ಮೂಲದ ಬಜಾಜ್ ಆಟೋ ಮೇ ತಿಂಗಳಲ್ಲಿ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಒಟ್ಟು 1,12,798 ಯುನಿಟ್ ಮಾರಾಟವನ್ನು ಮಾಡಿದೆ. ಇದಕ್ಕೆ ಹೋಲಿಸಿದರೆ ಹೀರೋ ಮೊಟೊಕಾರ್ಪ್ ಒಂದೇ ತಿಂಗಳಲ್ಲಿ 1,12,682 ಯುನಿಟ್‌ಗಳನ್ನು ಎರಡೂ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದೆ. ಏಪ್ರಿಲ್‌ನಲ್ಲಿಯೂ ಬಜಾಜ್ ಹೀರೋನನ್ನು ಸೋಲಿಸಿದ್ದರು ಆದರೆ ಮೇ ತಿಂಗಳಲ್ಲಿ ರಫ್ತು ಮಾರುಕಟ್ಟೆ ಮಾತ್ರ ತೆರೆದಿತ್ತು ಮತ್ತು ದೇಶೀಯ ಮಾರುಕಟ್ಟೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು.

 ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ ಸೊನ್ನೆ! ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ ಸೊನ್ನೆ!

ಭಾರತದಲ್ಲಿ ಮಾರಾಟಕ್ಕಿಂತ ವಿದೇಶಕ್ಕೆ ರಫ್ತು ಹೆಚ್ಚು

ಭಾರತದಲ್ಲಿ ಮಾರಾಟಕ್ಕಿಂತ ವಿದೇಶಕ್ಕೆ ರಫ್ತು ಹೆಚ್ಚು

ಸತತ ಆರನೇ ತಿಂಗಳು, ಬಜಾಜ್‌ನ ದ್ವಿಚಕ್ರ ವಾಹನಗಳ ಭಾರತದೊಳಗಿನ ಮಾರಾಟಕ್ಕಿಂತ ರಫ್ತು ಮೇ ತಿಂಗಳಲ್ಲಿ ಹೆಚ್ಚಾಗಿದೆ. ಪಲ್ಸರ್ ಮತ್ತು ಚೇತಕ್ ತಯಾರಕರು ಭಾರತಕ್ಕಿಂತ ಹೆಚ್ಚಿನ ವಾಹನಗಳನ್ನು ಮಾರಾಟ ಮಾಡುತ್ತಾರೆ. ಮೋಟರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ತಯಾರಿಸುವ ಹೀರೋಗಿಂತ ಭಿನ್ನವಾಗಿ, ಬಜಾಜ್ ಆಟೋ ಮಾರಾಟವು ಪ್ರಸ್ತುತ ಮುಖ್ಯವಾಗಿ ಮೋಟಾರ್‌ಸೈಕಲ್‌ಗಳಿಂದ ನಡೆಸಲ್ಪಡುತ್ತಿದೆ. ಇದು ಇತ್ತೀಚೆಗೆ ಬಜಾಜ್ ಇ-ಚೇತಕ್ ಅನ್ನು ಪ್ರಾರಂಭಿಸಿದೆ.

 ಮೇ ತಿಂಗಳಿನಲ್ಲಿ 65 ಪರ್ಸೆಂಟ್ ರಫ್ತು

ಮೇ ತಿಂಗಳಿನಲ್ಲಿ 65 ಪರ್ಸೆಂಟ್ ರಫ್ತು

ಕಂಪನಿಯ ಮಾಹಿತಿ ಪ್ರಕಾರ, ಮೇನಲ್ಲಿ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ರಫ್ತಿನ ಪ್ರಮಾಣವೇ 65 ಪರ್ಸೆಂಟ್‌ನಷ್ಟಿದೆ. ಈ ಮೂಲಕವೇ ಬಜಾಜ್ ಅವರ ಮುಂದಾಳತ್ವವು ಹೀರೋ ಮೊಟೊಕಾರ್ಪ್ ಅನ್ನು ಅಗ್ರಸ್ಥಾನದಿಂದ ಹಿಂದಿಕ್ಕಲು ಸಾಧ್ಯವಾಗಿದೆ. ವರದಿ ಮಾಡಿದ ತಿಂಗಳಲ್ಲಿ ಬಜಾಜ್‌ನ ದೇಶೀಯ ಮಾರಾಟವು 39,286 ಯುನಿಟ್‌ಗಳಷ್ಟಿತ್ತು.

ಲಾಕ್‌ಡೌನ್ ಸಡಿಲಿಕೆ ಬಳಿಕ ಹೀರೋ ಬೈಕ್ ಮಾರಾಟ ಹೆಚ್ಚಳ

ಲಾಕ್‌ಡೌನ್ ಸಡಿಲಿಕೆ ಬಳಿಕ ಹೀರೋ ಬೈಕ್ ಮಾರಾಟ ಹೆಚ್ಚಳ

ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಿದ ನಂತರ ಮೇ ತಿಂಗಳಲ್ಲಿ ಪುನಃ ತೆರೆಯಲಾದ ಹೀರೋನ 5000 ಟಚ್ ಪಾಯಿಂಟ್‌ಗಳು (ಮಾರಾಟ ಮತ್ತು ಸೇವೆಗಾಗಿ) 1,08,848 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದವು ಮತ್ತು ಅದರ ರಫ್ತು 3,834 ಯುನಿಟ್‌ಗಳಷ್ಟಿತ್ತು, ಇದು ಮೇ ತಿಂಗಳಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟದ 3.5 ಪರ್ಸೆಂಟ್‌ಕ್ಕಿಂತ ಕಡಿಮೆಯಿದೆ.

ಹೀರೋ ರಫ್ತು ಪ್ರಮಾಣ ಇಳಿಕೆ, ದೇಶದಲ್ಲಿನ ಮಾರಾಟವೇ ಹೆಚ್ಚು

ಹೀರೋ ರಫ್ತು ಪ್ರಮಾಣ ಇಳಿಕೆ, ದೇಶದಲ್ಲಿನ ಮಾರಾಟವೇ ಹೆಚ್ಚು

ಹೋಂಡಾ ಜೊತೆಗಿನ ವ್ಯವಹಾರ ಬೇರ್ಪಟ್ಟ ಬಳಿಕ, ಹೀರೋ ತನ್ನ ರಫ್ತುಗಳನ್ನು ಗಣನೀಯ ಮಟ್ಟಕ್ಕೆ ಏರಿಸಲು ಸಾಧ್ಯವಾಗಲಿಲ್ಲ. ಇದರ ದೇಶೀಯ ಯುನಿಟ್‌ಗಳ ಒಟ್ಟು ಮಾರಾಟವು 96 ಪರ್ಸೆಂಟ್‌ರಷ್ಟಿದೆ.ಆದರೆ ಭಾರತದಿಂದ ದ್ವಿಚಕ್ರ ವಾಹನಗಳ ರಫ್ತು ಪ್ರಮಾಣ ಹೆಚ್ಚಾದ ಬಳಿಕ ಚೆನ್ನೈ ಮೂಲದ ಟಿವಿಎಸ್ ಮೋಟಾರ್ ಕಂಪನಿ ಮೇ ತಿಂಗಳಲ್ಲಿ ಹೋಂಡಾ ಮೋಟರ್ ಸೈಕಲ್ಸ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಗಿಂತ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಏಪ್ರಿಲ್‌ನಲ್ಲಿ, ಟಿವಿಎಸ್ ಮಾರಾಟವು ಮೊದಲ ಬಾರಿಗೆ ಹೋಂಡಾಕ್ಕಿಂತ ಹೆಚ್ಚಾಗಿದೆ.

English summary
Bajaj auto has gone past Hero motocorp to become India’s largest two-wheeler maker in May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X