ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜಾಜ್ ಆಟೋ ಕಾರ್ಖಾನೆಯಲ್ಲಿ 140 ಉದ್ಯೋಗಿಗಳಿಗೆ ಕೊರೊನಾ ಸೋಂಕು:ಫ್ಯಾಕ್ಟರಿ ಮುಚ್ಚಲು ನಿರಾಕರಣೆ

|
Google Oneindia Kannada News

ನವದೆಹಲಿ, ಜೂನ್ 27: ಕೊರೊನಾವೈರಸ್ ಲಾಕ್‌ಡೌನ್ ಸಡಿಲಿಕೆ ಬಳಿಕ ಅನೇಕ ಕಾರ್ಖಾನೆಗಳು ಪುನಃ ಪ್ರಾರಂಭವಾದವು. ಎರಡು ತಿಂಗಳ ಬಳಿಕ ವ್ಯವಹಾರ ನಡೆಸುತ್ತಿವೆ. ಇಂತಹ ವೇಳೆಯಲ್ಲಿ ದೇಶದ ಅಗ್ರ ಬೈಕ್ ತಯಾರಕ ಬಜಾಜ್ ಆಟೋದ ವಲುಜ್ (ಔರಂಗಾಬಾದ್) ಕಾರ್ಖಾನೆಯಲ್ಲಿ ಈಗ 140 ಜನರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಅದರಲ್ಲಿ ಇಬ್ಬರು ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.

Recommended Video

ಚೀನಾ ವಸ್ತುಗಳ ವಿರುದ್ಧ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾದ ಮೋದಿ. | Narendra Modi | Oneindia Kannada

ಕಂಪನಿಯಲ್ಲಿ ದೊಡ್ಡ ಮಟ್ಟಿಗೆ ಉತ್ಪಾದನಾ ಪ್ರಮಾಣವನ್ನು ಹೊಂದಿದೆ. ಹೀಗಾಗಿ ಕಾರ್ಖಾನೆಯನ್ನು ಮುಚ್ಚಲು ಬಜಾಜ್ ಆಟೋ ನಿರಾಕರಿಸಿದೆ.

ಬಳ್ಳಾರಿ: ಜಿಂದಾಲ್ ನೌಕರರ ಕುಟುಂಬಕ್ಕೆ ಕಂಟಕವಾದ ಕೊರೊನಾ ವೈರಸ್ಬಳ್ಳಾರಿ: ಜಿಂದಾಲ್ ನೌಕರರ ಕುಟುಂಬಕ್ಕೆ ಕಂಟಕವಾದ ಕೊರೊನಾ ವೈರಸ್

ಕಂಪನಿಯ ನಿರ್ವಹಣೆಯ ಪ್ರಕಾರ, ವಲುಜ್ ಕಾರ್ಖಾನೆಯಲ್ಲಿ 8,100 ಉದ್ಯೋಗಿಗಳಿದ್ದಾರೆ. ಕೆಲವು ಸಿಬ್ಬಂದಿಗಳೊಂದಿಗೆ ಏಪ್ರಿಲ್ 24 ರಂದು ಉತ್ಪಾದನೆ ಪುನರಾರಂಭವಾಯಿತು. ಅದೇ ಸಮಯದಲ್ಲಿ, ಲಾಕ್‌ಡೌನ್ ಸಡಿಲಿಕೆ ಬಳಿಕ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ನಂತರ ಜೂನ್ 6 ರಂದು ಕೊರೊನಾವೈರಸ್‌ನ ಮೊದಲ ಪ್ರಕರಣ ಇಲ್ಲಿ ವರದಿಯಾಗಿದೆ. ಆರಂಭದಲ್ಲಿ 79 ಕಾರ್ಖಾನೆಯ ಕಾರ್ಮಿಕರು ಪಾಸಿಟಿವ್ ಎಂದು ಹೇಳಲಾಗಿದ್ದರೂ ಶುಕ್ರವಾರ ಹೊರಬಂದ ವರದಿಯಲ್ಲಿ ಅವರ ಸಂಖ್ಯೆ 140 ಕ್ಕೆ ಏರಿತು. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

Bajaj Autos Waluj Factory Reports 140 Coronavirus Cases, 2 Deaths

ಕಂಪನಿಯ ನಿರ್ವಹಣೆಯ ಪ್ರಕಾರ, ವಲುಜ್ ಕಾರ್ಖಾನೆ ಪ್ರತಿ ವರ್ಷ 5 ಲಕ್ಷ ಬೈಕುಗಳನ್ನು ಉತ್ಪಾದಿಸುತ್ತದೆ. ಕಾರ್ಖಾನೆ ಮುಚ್ಚುವ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ, ಆದರೆ ಇದು ತಪ್ಪು ಎಂದು ಕಂಪನಿ ಹೇಳಿದೆ. ಕಾರ್ಖಾನೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಸಮಯದಲ್ಲಿ, ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಕ್ಯಾಂಪಸ್‌ನಾದ್ಯಂತ ಅನುಸರಿಸಲಾಗುತ್ತಿದೆ.

ಒಂದು ವೇಳೆ ಕಾರ್ಖಾನೆಯನ್ನು ಮುಚ್ಚಿದರೆ ನೋ ವರ್ಕ್ ಪೇ ಎಂಬ ನಿಯಮದಡಿಯಲ್ಲಿ ಅದು ನೌಕರರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದೆ. ಈ ಕಾರಣದಿಂದಾಗಿ, ಅವರು ಮುನ್ನೆಚ್ಚರಿಕೆ ವಹಿಸಿ ಕಾರ್ಖಾನೆಯನ್ನು ಮುಂದುವರಿಸಲು ಬಯಸಿದ್ದಾರೆ.

English summary
Two wheeler major Bajaj Auto Ltd Waluj factory in Aurangabad after 140 of the over 8,100 employees at the factory tested positive for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X