ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈದಾ ಇಲ್ಲದ ನೂಡಲ್ಸ್ ಪರಿಚಯಿಸಿದ ಬಾಬಾ ರಾಮದೇವ್

By Mahesh
|
Google Oneindia Kannada News

ನವದೆಹಲಿ, ನ.16: ಯೋಗಗುರು ಬಾಬಾ ರಾಮದೇವ್ ಅವರು ಪತಂಜಲಿ ಸಮೂಹದ ಮೂಲಕ ಹೊಸ ಬ್ರ್ಯಾಂಡ್ ನ್ಯೂಡಲ್ಸ್ ಅನ್ನು ಮಾರುಕಟ್ಟೆಗೆ ಸೋಮವಾರ ಪರಿ‌ಚಯಿಸಿದ್ದಾರೆ.

ಮೈದಾ ಇಲ್ಲದ ಸೀಸ ಇಲ್ಲದ ಮೊನೊಸೊಡಿಯಂ ಗ್ಲುಮೇಟ್ (ಎಂಎಸ್ ಜಿ) ಅಂಶವಿಲ್ಲದ ನ್ಯೂಡಲ್ಸ್ ಇದಾಗಿದೆ ಎಂದು ಮಾರುಕಟ್ಟೆಗೆ ಅಟ್ಟಾ ನ್ಯೂಡಲ್ಸ್ ಪರಿಚಯಿಸಿದ ನಂತರ ಬಾಬಾ ರಾಮದೇವ್ ಹೇಳಿದ್ದಾರೆ.[ಫ್ಯೂಚುರಾ ಗ್ರೂಪ್ ಜೊತೆ ಬಾಬಾ ರಾಮ್ ದೇವ್ ಡೀಲ್]

Baba Ramdev launches Atta noodles

Jhat pat pakao, aur befikr khao"ಎಂಬ ಅಡಿಬರಹವಿರುವ ನ್ಯೂಡಲ್ಸ್ ಪ್ಯಾಕ್ ಬೆಲೆ 15ರು ಆಗಿದ್ದು, ನೇರವಾಗಿ ನೆಸ್ಲೆ ಮ್ಯಾಗಿ ವಿರುದ್ಧ ಸಮರ ಸಾರಿದ್ದಾರೆ. 2014ರಲ್ಲಿ ಪತಂಜಲಿ ಸಮೂಹ ಸಂಸ್ಥೆ 1200 ಕೋಟಿ ರು ಗೂ ಅಧಿಕ ಟರ್ನ್ ಓವರ್ ಪಡೆದುಕೊಂಡಿದ್ದು, 2015ರಲ್ಲಿ 2000 ಕೋಟಿ ರು ನಿರೀಕ್ಷಿಸಿದೆ. [ಮ್ಯಾಗಿ ರಿಟರ್ನ್ಸ್: ಆನ್ ಲೈನ್ ನಿಂದಲೇ ಖರೀದಿಸಿ]

ಫುಡ್ ಸೆಫ್ಟಿ ಹಾಗೂ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ(ಎಫ್ ಎಸ್ಎಸ್ ಎಐ) ಮ್ಯಾಗಿ ಮೇಲೆ ಜೂನ್ 5ರಂದು ನಿಷೇಧ ಹೇರಿದ ಬಳಿಕ ಆ ಸ್ಥಾನವನ್ನು ತುಂಬಲು ಪತಂಜಲಿ ಸಂಸ್ಥೆ ದೇಶಿ ನ್ಯೂಡಲ್ಸ್ ಹೆಸರಿನಲ್ಲಿ ಪೈಪೋಟಿಗೆ ಇಳಿದಿದೆ.

ಮ್ಯಾಗಿ ಮೇಲಿನ ನಿಷೇಧ ಬಹುತೇಕ ತೆರವುಗೊಂಡಿದ್ದರೂ 11 ಕ್ಕೂ ಅಧಿಕ ರಾಜ್ಯಗಳಲ್ಲಿ ಮಾರಾಟ ನಿರ್ಬಂಧ ಮುಂದುವರೆದಿದೆ.ಅದರೆ, ಇತ್ತೀಚೆಗೆ ಸ್ನಾಪ್ ಡೀಲ್ ಮೂಲಕ ಆನ್ ಲೈನ್ ಮಾರಾಟಕ್ಕೆ ಇಳಿದ ಮ್ಯಾಗಿ ಭರ್ಜರಿಯಾಗಿ ಮಾರಾಟ ಕಂಡಿದೆ.

ಉದ್ಯಮಿ ಕಿಶೋರ್ ಬಿಯಾನಿ ಅವರ ಒಡೆತನದ ಫ್ಯೂಚುರಾ ಗ್ರೂಪ್ ಜೊತೆ ಪತಂಜಲಿ ಸಮೂಹ ಸಂಥೆ ಒಪ್ಪಂದ ಮಾಡಿಕೊಂಡಿದ್ದು, ಮೂಲಕ ಬಿಗ್ ಬಜಾರ್, ಈಸಿ ಡೇ ಮುಂತಾದ ರೀಟೈಲ್ ಮಳಿಗೆಗಳಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಾಗಲಿದೆ.

English summary
Yoga guru Ramdev launched his Patanjali group's new brand of noodles made out of wheat named 'Atta Noodles' in the capital today.16
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X