ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋದಲ್ಲಿದ್ದ ಅರ್ಧದಷ್ಟು ಷೇರು ದಾನ ಮಾಡಿದ ಅಜೀಂ ಪ್ರೇಮ್ ಜಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 09: ಐಟಿ ಉದ್ಯಮಿ ಅಜೀಂ ಪ್ರೇಮ್‌ಜಿ ಅವರು ಮತ್ತೊಮ್ಮೆ ದಾನ ಧರ್ಮ ಕಾರ್ಯಗಳಿಂದ ಸುದ್ದಿಯಾಗಿದ್ದಾರೆ. ಭಾರತದ ಮೂರನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋದಲ್ಲಿರುವ ತಮ್ಮ ಅರ್ಧದಷ್ಟು ಷೇರುಗಳನ್ನು ದತ್ತಿ ಕಾರ್ಯಗಳಿಗಾಗಿ ನೀಡಿದ್ದಾರೆ.

ಪ್ರೇಮ್‌ಜಿ ಅವರ ನಿರ್ಧಾರದಿಂದ ಪ್ರಸಕ್ತ ವರ್ಷದಲ್ಲಿ ಅಜೀಂ ಪ್ರೇಮ್‌ಜಿ ಟ್ರಸ್ಟ್‌ನ ನಿಧಿಗೆ ಡಿವಿಡೆಂಡ್ ರೂಪದಲ್ಲಿ ಹೆಚ್ಚುವರಿಯಾಗಿ 530 ಕೋಟಿ ರೂ.ಗಳು ಹರಿದು ಬರಲಿವೆ. ತಮ್ಮ ಬಳಿ ಇದ್ದ ಹೆಚ್ಚುವತಿ ಶೇ18ರಷ್ಟು ಷೇರುಗಳನ್ನು ನೀಡುವುದರ ಮೂಲಕ ಒಟ್ಟಾರೆ ಶೇ 39ರಷ್ಟು ಷೇರುಗಳು(53,284 ಕೋಟಿ ರು ಮೌಲ್ಯ) ಟ್ರಸ್ಟಿನ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ವಿನಿಯೋಗವಾಗಲಿದೆ.

Azim Premji gives half of his stake in Wipro for charity

ವಿಪ್ರೋದಲ್ಲಿ ಶೇ 73.39ರಷ್ಟು ಷೇರುಗಳನ್ನು ಹೊಂದಿರುವ ಪ್ರೇಮ್ ಜಿ ಅವರು ಈ ಮುಂಚೆ 4.3 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಶೇ 21ರಷ್ಟು ಷೇರುಗಳನ್ನು ದಾನ ಮಾಡಿದ್ದರು. ಹರೂನ್ ಇಂಡಿಯಾ ಅತ್ಯಂತ ಉದಾರ ವ್ಯಕ್ತಿಗಳ ಪಟ್ಟಿಯಲ್ಲಿ 2014ರಲ್ಲಿ ಪ್ರೇಂಜಿ ಅಗ್ರಸ್ಥಾನ ಪಡೆದುಕೊಂಡಿದ್ದರು.

69ರ ಹರೆಯದ ಪ್ರೇಮ್‌ಜಿ ಧರ್ಮಾರ್ಥ ಕಾರ್ಯಗಳಿಗಾಗಿ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಕೊಡುಗೆಯಾಗಿ ನೀಡುವಂತೆ ವಿಶ್ವದ ಶ್ರೀಮಂತರನ್ನು ಆಹ್ವಾನಿಸುವ, ಬಿಲಿಯಾಧಿಪತಿಗಳಾದ ವಾರೆನ್ ಬಫೆಟ್ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪ್ರಾಯೋಜಿಸಿದ್ದ 'ಗಿವಿಂಗ್ ಪ್ಲೆಜ್'ಗೆ ಮೊದಲು ಸಹಿ ಮಾಡಿದ ಭಾರತೀಯರ ಎಂಬುದನ್ನು ಮರೆಯುವಂತಿಲ್ಲ.

ಕಳೆದ 15 ವರ್ಷಗಳಲ್ಲಿ ನನ್ನ ವೈಯಕ್ತಿಕ ದಾನಕಾರ್ಯಗಳ ಮೂಲಕ ಗಿವಿಂಗ್ ಪ್ಲೆಜ್‌ನಲ್ಲಿ ನನ್ನ ನಂಬಿಕೆಯನ್ನು ಕಾರ್ಯರೂಪಕ್ಕಿಳಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ ಎಂದು ಪ್ರೇಮ್‌ಜಿ ಕಂಪೆನಿಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಶೇರುದಾರರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. (ಪಿಟಿಐ)

English summary
IT czar Azim Premji has given away almost half of his stake holding in Wipro, India’s third largest exporter of software services, to philanthropy.The Wipro’s billionaire founder has given away an additional 18 per cent of his stake in the IT Company for charity, thus earmarking 39 per cent of stake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X