ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಆ್ಯಕ್ಸಿಸ್ ಬ್ಯಾಂಕ್

|
Google Oneindia Kannada News

ನವದೆಹಲಿ, ಆಗಸ್ಟ್‌ 20: ಆ್ಯಕ್ಸಿಸ್ ಬ್ಯಾಂಕ್ ತನ್ನ ಹೊಸ ನೇಮಕಾತಿ ಉಪಕ್ರಮ 'ಗಿಗ್-ಎ-ಆಪರ್ಚುನಿಟೀಸ್' ಅಡಿಯಲ್ಲಿ ಸುಮಾರು 1,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ.

ಬ್ಯಾಂಕಿನ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಬ್ಯಾಂಕಿನೊಂದಿಗೆ ದೂರದಿಂದಲೇ ಕೆಲಸ ಮಾಡಬಲ್ಲ ನುರಿತ ಪ್ರತಿಭೆಗಳನ್ನು ದೇಶದ ಎಲ್ಲೆಡೆಯಿಂದ ಆಕರ್ಷಿಸಬಲ್ಲದು ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Kormo Jobs App: ಮೊಬೈಲ್ ಮೂಲಕವೇ ಉದ್ಯೋಗ ಹುಡುಕಿKormo Jobs App: ಮೊಬೈಲ್ ಮೂಲಕವೇ ಉದ್ಯೋಗ ಹುಡುಕಿ

ಒಂದು ಸಾವಿರ ಉದ್ಯೋಗಿಗಳ ನೇಮಕಾತಿ ವಿಚಾರದಲ್ಲಿ ಎರಡು ಕೆಲಸದ ಮಾದರಿಗಳನ್ನು ಒಳಗೊಂಡಿದೆ. ಮೊದಲನೆಯದು ಪೂರ್ಣಾವಧಿ ಅಥವಾ ಶಾಶ್ವತ ಕೆಲಸ ಮತ್ತು ಎರಡನೆಯದು ಯೋಜನೆಯ ನಿರ್ದಿಷ್ಟ ಅವಧಿಯನ್ನು ಆಧರಿಸಿದೆ.

Axis Bank Has Plans Hire Up To 1,000 People Under Gig A Opportunities Model

ಈ ಮೊದಲು ಕೆಲಸ ಮಾಡಲು, ನೀವು ಕಚೇರಿಗೆ ಬರಬೇಕು, ಆದರೆ ಈಗ ಮನೆಯ ಪರಿಕಲ್ಪನೆಯಿಂದ ಈ ಕೆಲಸವು ಅನೇಕ ವಿಷಯಗಳನ್ನು ಬದಲಾಯಿಸಿದೆ ಎಂದು ರಾಜೇಶ್ ದಹಿಯಾ, ಕಾರ್ಯನಿರ್ವಾಹಕ ನಿರ್ದೇಶಕ ಹೇಳಿದರು.

ಮನೆಯಿಂದ ಕೆಲಸ ಮಾಡುವ ಬಗ್ಗೆ ಜನರು ಮೊದಲಿಗೆ ಹಿಂಜರಿಯುತ್ತಿದ್ದರು ಎಂದು ದಾಹಿಯಾ ಹೇಳಿದರು. ಆದರೆ ಈಗ ಅವರು ಅದನ್ನು ಬಳಸಿಕೊಂಡಿದ್ದಾರೆ ಮತ್ತು ಇದು ತುಂಬಾ ಉತ್ಪಾದಕ ಮತ್ತು ಅತ್ಯಂತ ಪರಿಣಾಮಕಾರಿ ಎಂದು ಸಾಭೀತಾಗಿದೆ.

ದೇಶಾದ್ಯಂತದ ಯುವಕರು, ಅನುಭವಿ ಮಧ್ಯಮ ಮಟ್ಟದ ವೃತ್ತಿಪರರು ಮತ್ತು ಮಹಿಳೆಯರು ಸೇರಿದಂತೆ ಉತ್ತಮ ಪ್ರತಿಭೆಗಳನ್ನು ಬ್ಯಾಂಕ್ ಹುಡುಕುತ್ತದೆ ಎಂದು ಅವರು ಹೇಳಿದರು.

English summary
Axis Bank has plans to employ nearly 1,000 people under its new hiring initiative 'Gig-a-Opportunities', a model devised to attract skilled talent that can work with the bank remotely, from anywhere in the country, according to a company official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X